ರಣ ಬಿಸಿಲಿಗೆ ದೇಶವೇ ತತ್ತರ, ಮಳೆ ಆಗಮನದ ಕಾತರ

Subscribe to Oneindia Kannada

ನವದೆಹಲಿ, ಮೇ 05: ರಣ ಬಿಸಿಲು ದೇಶವನ್ನೇ ಸುಡುತ್ತಿದೆ. ಮಹಾರಾಷ್ಟ್ರದಲ್ಲಿ ಹನಿ ಹನಿ ನೀರಿಗೂ ತಾತ್ವಾರ ಎದುರಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ದೈತ್ಯ ಸಮಸ್ಯೆಯಾಗಿ ಕಾಡುತ್ತಿದೆ. ದೇಶದ ಎಲ್ಲ ಮಹಾನಗರಗಳಲ್ಲೂ ಉಷ್ಣತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಉಷ್ಣ ಮಾರುತದ ಅಪಾಯವೂ ಎದುರಾಗಿದೆ.

ಸ್ಕೈ ಮೆಟ್ ವೆದರ್ ಸಹ ಅತಿಹೆಚ್ಚು ಉಷ್ಣತೆ ಅನುಭವಿಸುತ್ತಿರುವ ನಗರಗಳನ್ನು ಪಟ್ಟಿ ಮಾಡಿ ನೀಡಿದೆ. ಕರ್ನಾಟಕದ ಕಲಬುರಗಿಯಲ್ಲಿ 42 ಡಿಗ್ರಿ ಉಷ್ಣತೆ ದಾಖಲಾಗಿದ್ದರೂ, ರಾಜಸ್ಥಾನದ ಜೈಸಲ್ಮೇರ್ 50 ಡಿಗ್ರಿ ದಾಟಿದ್ದರೂ ಪಟ್ಟಿಯಲ್ಲಿ ಸ್ಥಾನ ವಂಚಿತವಾಗಿವೆ. ರಾಜಸ್ಥಾನದ ಗಡಿ ಪ್ರದೇಶ ಜೈಸಲ್ಮೇರ್ ನಲ್ಲಿ ಉಷ್ಣತೆ 50 ಡಿಗ್ರಿಗೆ ತಲುಪಿದ್ದು ಯೋಧರು ಗಡಿ ಕಾಯುತ್ತಲೇ ಇದ್ದಾರೆ. ಬೆಂಗಳೂರಿನಲ್ಲಿ 34 ಡಿಗ್ರಿ ಉಷ್ಣತೆ ಇದ್ದು ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. [85 ವರ್ಷದ ದಾಖಲೆ ಮುರಿದ ಬೆಂಗಳೂರು ಬಿಸಿಲು]

summer

ಬಿಸಿಲ ಹೊಡೆತಕ್ಕೆ ಬಳಲುತ್ತಿರುವ ಕೆಲ ನಗರಗಳ ಪಟ್ಟಿಯನ್ನು ನೋಡಿಕೊಂಡು ಬನ್ನಿ

* ನವದೆಹಲಿ-42.1 ಡಿಗ್ರಿ ಸೆಲ್ಸಿಯಸ್
* ಜಾಲೋರ್-42.2 ಡಿಗ್ರಿ ಸೆಲ್ಸಿಯಸ್
* ಕೋಟಾ- 43.4 ಡಿಗ್ರಿ ಸೆಲ್ಸಿಯಸ್
* ಖಜರಾವೋ- 43.6 ಡಿಗ್ರಿ ಸೆಲ್ಸಿಯಸ್
* ಮಲೇಗಾಂವ್-44.5 ಡಿಗ್ರಿ ಸೆಲ್ಸಿಯಸ್
* ಪರ್ಭಾನಿ-43.6 ಡಿಗ್ರಿ ಸೆಲ್ಸಿಯಸ್
* ಅಕೋಲಾ-43.4 ಡಿಗ್ರಿ ಸೆಲ್ಸಿಯಸ್
* ಸೊಲ್ಲಾಪುರ-42.5 ಡಿಗ್ರಿ ಸೆಲ್ಸಿಯಸ್
* ಅನಂತಪುರ್-42.4 ಡಿಗ್ರಿ ಸೆಲ್ಸಿಯಸ್[ಮಳೆಯಿಲ್ಲ, ಬೆಳೆ ಇಲ್ಲ, ಉತ್ತರ ಮಂದಿ ಹೊರಟರು ಗುಳೆ]

rain

ಇನ್ನೊಂದೆಡೆ ಮುಂದಿನ 24 ಗಂಟೆಗಳಲ್ಲಿನ ದೇಶದ ವಿವಿಧೆಡೆ ಮಳೆಯಾಗಲಿದೆ ಎಂದು ಸ್ಕೈ ವೆದರ್ ತಿಳಿಸಿದೆ. ನಾಗಪುರ, ಬೆಂಗಳೂರು. ಕೊಚ್ಚಿ, ಹೈದರಾಬಾದ್, ಗುಹವಾಟಿಯಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Temperature shot up to 52 degrees Celsius in Jaisalmer as excruciating summers continue to grip parts of India. According to paramilitary Border Security Force (BSF) officials at India-Pakistan international border in Rajasthan state, the temperature hovered around 50-52 degree Celsius. Most of India is reeling under scorching heat as temperatures have crossed 40 degrees Celsius at several places.
Please Wait while comments are loading...