ಒಡಿಶಾ: ಕುಡಿದ ಮತ್ತಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ
ಮಯೂರ್ಭಂಜ್, ಫೆಬ್ರವರಿ 08: ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ತಂದೆಯ ಸ್ನೇಹಿತನೇ ಅತ್ಯಾಚಾರ ಎಸಗಿದ ಘಟನೆ ಒಡಿಶಾದ ಮಯೂರ್ಭಂಜ್ ಎಂಬಲ್ಲಿ ನಡೆದಿದೆ.
ಸಂತ್ರಸ್ಥೆಯ ತಂದೆ, ಆತನ ಮೂವರು ಸ್ನೇಹಿತರೊಡನೆ ಮನೆಯಲ್ಲಿ ಮಧ್ಯಪಾನ ಸೇವಿಸಿದ್ದು, ಅವರಲ್ಲಿ ಇಬ್ಬರು ರಾತ್ರಿ ಮನೆಗೆ ವಾಪಸ್ಸಾಗಿದ್ದಾರೆ. ಆದರೆ ತಂದೆಯ ಜೊತೆಯಲ್ಲೇ ಇದ್ದ ಆರೋಪಿ ಸುರೇಂದ್ರ ನಾಯಕ್ ಮಾನಸಿಕ ಅಸ್ವಸ್ಥೆಯಾಗಿದ್ದ ತನ್ನ ಸ್ನೇಹಿತನ ಮಗಳ ಮೇಲೇ ಅತ್ಯಾಚಾರ ಎಸಗಿದ್ದಾನೆ.
ತಂದೆ ಕುಡಿದು ಮಲಗಿದ್ದ ಸಮಯದಲ್ಲಿ ಆಕೆಯನ್ನು ಪಕ್ಕದ ಹೊಲಕ್ಕೆ ಅಪಹರಿಸಿಕೊಂಡು ಹೋದ ಸುರೇಂದ್ರ ನಾಯಕ್ ಅಲ್ಲಿ ಅತ್ಯಾಚಾರ ಎಸಗಿದ್ದಾನೆಂದು ಸಂತ್ರಸ್ಥೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಹೊಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ಥೆಯನ್ನು ಬೆಳಿಗ್ಗೆ ಊರಿನವರು ನೋಡಿ ತಂದೆಗೆ ವಿಷಯ ತಿಳಿಸಿದ್ದಾರೆ.

ಅತ್ಯಾಚಾರ ನಡೆದ ಜಾಗದಲ್ಲಿ ಸುರೇಂದ್ರ ನಾಯಕ್ ನ ಬಟ್ಟೆಗಳು ಇದ್ದಿದ್ದರಿಂದ ಈ ಕೃತ್ಯ ಎಸಗಿದ್ದು ಆತನೇ ಎಂದು ಆತನನ್ನು ಪೊಲೀಸರು ಬಂಧಿಸಿದ್ದಾರೆ.











Click it and Unblock the Notifications