• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್ ಆಯಿತು #LiquorShops, ನಗೆ ಉಕ್ಕಿಸುತ್ತವೆ ಮೀಮ್ಸ್

|

ಬೆಂಗಳೂರು, ಮೇ 4: ಕೊರೊನಾ ಹಾವಳಿಯಿಂದ ಕಳೆದ 42 ದಿನ ಇಡೀ ದೇಶ ಲಾಕ್‌ಡೌನ್ ಆಗಿದ್ದ ಸಂಕಟ ಒಂದು ಕಡೆಯಾದರೆ, ಈ 42 ದಿನ ಮದ್ಯಪಾನಕ್ಕೆ ಅವಕಾಶ ಇಲ್ಲವಲ್ಲ ಎನ್ನುವ ಮಹಾ ಕೊರಗು ಕುಡುಕರದಾಗಿತ್ತು.

   ಎಣ್ಣೆ ಹೊಡೆದು ಬೆಳ್ಳಂಬೆಳಗ್ಗೆ ಫುಲ್ ಟೈಟ್ ಆಗಿ ರಸ್ತೆಯಲ್ಲೇ ತೂರಾಟ | Oneindia Kannada

   ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ದೇಶದಲ್ಲಿ ಎಲ್ಲ ರಾಜ್ಯಗಳು ಕೋವಿಡ್ ಕಂಟೈನ್‌ಮೆಂಟ್ ಹೊರತುಪಡಿಸಿ ಎಲ್ಲ ಕಡೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿವೆ. ಇದರಿಂದ ದೇಶದಲ್ಲಿ ಕುಡುಕರ ಪಾಲಿಗೆ ಒಂದು ರೀತಿ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಬೆಳಿಗ್ಗೆಯಿಂದ ಕುಡುಕರು ಮದ್ಯದಂಗಡಿಗಳ ಮುಂದೆ ಕೋವಿಡ್ ಸಾಮಾಜಿಕ ಅಂತರದ ನಿಯಮಗಳನ್ನು ಪಾಲನೆ ಮಾಡುತ್ತಾ, ಶಿಸ್ತು ಸಂಯಮದಿಂದ ಮದ್ಯ ಕೊಂಡು ಕೊಳ್ಳುತ್ತಿರುವುದು ಬಹಳಷ್ಟು ಕಡೆಗೆ ಕಂಡು ಬರುತ್ತಿದೆ.

   ರಾಜ್ಯಾದ್ಯಂತ ಮದ್ಯ ಮಾರಾಟ ಆರಂಭ: ಕುಡುಕರ ಸಂಭ್ರಮ

   ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಇಂದು #LiquorShops ವಿಷಯವೇ ಬೆಳಿಗ್ಗೆಯಿಂದ ಟಾಪ್ ಟ್ರೆಂಡ್ ಆಗಿ ಬಿಟ್ಟಿದೆ. ಅಲ್ಲದೇ ಟಿಕ್‌ಟಾಕ್, ಫೇಸ್‌ಬುಕ್‌ಗಳಲ್ಲಿಯೂ ಕೂಡ ಇದೇ ವಿಷಯ ಇಂದು ದೊಡ್ಡ ಸದ್ದು ಮಾಡುತ್ತಿದೆ. ಟ್ವಿಟ್ಟರ್ ನಲ್ಲಿ #LiquorShops ಹೆಸರಿನಲ್ಲಿ ಭಾರೀ ಜೋಕ್‌ಗಳು, ಮೆಮ್‌ಗಳು, ವಿಡಿಯೋಗಳು ಹರಿದಾಡುತ್ತಿವೆ... ಅದರಲ್ಲಿ ನಿಮಗಾಗಿ ಒಂದಿಷ್ಟು ಇಲ್ಲಿವೆ

   ಕೊರೊನಾವನ್ನು ಯಾರೂ ಕೇಳುವವರಿಲ್ಲ

   ಕೊರೊನಾವನ್ನು ಯಾರೂ ಕೇಳುವವರಿಲ್ಲ

   ಇಷ್ಟು ದಿನ ಕೊರೊನಾದಿಂದ ಬರೀ ಕೊರೊನಾದ್ದೇ ಮಾತಾಗಿತ್ತು. ಎಣ್ಣೆ ಅಂಗಡಿ ತೆರೆದಿದ್ದಕ್ಕೆ ಕೊರೊನಾವನ್ನು ಯಾರೂ ಕೇಳುವವರಿಲ್ಲ ಎಂಬ ಮೆಮ್‌ ಒಂದು ಸಾಕಷ್ಟು ನಗೆ ಉಕ್ಕಿಸುತ್ತಿದೆ.

   ಒಂದೇ ಮನೆಯಲ್ಲಿ ಹಲವು ಕುಡುಕರ ಪರಿಸ್ಥಿತಿ

   ಒಂದೇ ಮನೆಯಲ್ಲಿ ಹಲವು ಕುಡುಕರ ಪರಿಸ್ಥಿತಿ

   ಲಿಕ್ಕರ್ ಅಂಗಡಿಗಳ ಮುಂದೆ ಸರತಿ ಸಾಲು ಕೆಲವು ಕಡೆಗೆ ಕಿಲೋ ಮಿಟರ್‌ಗಟ್ಟಲೇ ಮುಟ್ಟಿದೆ. ಒಂದೇ ಮನೆಯಲ್ಲಿ ಹಲವು ಕುಡುಕರ ಪರಿಸ್ಥಿತಿ ಬಿಂಬಿಸುವ ಈ ಮೆಮ್ ನಗು ತರಿಸುತ್ತದೆ.

   ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?

   ಆದರೆ, ಅಸಲಿಗೆ ಪರಿಸ್ಥಿತಿ ಹೀಗಿದೆ

   ಆದರೆ, ಅಸಲಿಗೆ ಪರಿಸ್ಥಿತಿ ಹೀಗಿದೆ

   ಲಿಕ್ಕರ್ ಶಾಪ್‌ಗಳ ಎದುರು ಸಾಮಾಜಿಕ ಅಂತರ ಕಾಪಾಡಿ ಎಂದು ಸರಕಾರ ಹೇಳಿದೆ. ಜನ ಇದನ್ನು ಪಾಲನೆ ಮಾಡುತ್ತಾರೆ ಎಂದು ಸರ್ಕಾರ ಭಾವಿಸಿದೆ. ಆದರೆ, ಅಸಲಿಗೆ ಪರಿಸ್ಥಿತಿ ಹೀಗಿದೆ ಎನ್ನವ ಈ ಚಿತ್ರ ಎಣ್ಣೆ ಪ್ರಿಯರ ಪರಿಸ್ಥಿತಿ ಹೇಳುತ್ತದೆ.

   ರೆಡ್‌ ಜೋನ್ ಇರುವವರಿಗೆ ಎಣ್ಣೆ ಸಿಗುವುದಿಲ್ಲ

   ಈಗಾಗಲೇ ಸರ್ಕಾರ ರೆಡ್‌ ಜೋನ್ ಇರುವವರಿಗೆ ಎಣ್ಣೆ ಸಿಗುವುದಿಲ್ಲ ಎಂದು ಹೇಳಿದೆ. ಇದನ್ನು ಬಿಂಬಿಸುವ ಈ ಚಿತ್ರವಂತೂ ರೆಡ್‌ ಜೋನ್‌ನಲ್ಲಿರುವವರನ್ನು ಕೆಣುಕುವಂತಿದೆ.

   ಅಬ್ಬಬ್ಬಾ..! ಬ್ಯಾಡಗಿಯಲ್ಲಿ ಮದ್ಯಪ್ರಿಯರಿಗೆ ಅದೇನು ಶಿಸ್ತು?

   ಬ್ರಿಜರ್ ತಂಪು ಪಾನೀಯ ಕೊಡಿ

   ಬ್ರಿಜರ್ ತಂಪು ಪಾನೀಯ ಕೊಡಿ

   ಇವಾಗಂತೂ ಎಣ್ಣೆ ಕೊಂಡುಕೊಳ್ಳಲು ಕಿಲೋ ಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಆದರೆ, ಅಷ್ಟು ಹೊತ್ತು ಸರತಿ ಸಾಲಿನಲ್ಲಿ ನಿಂತು ಬ್ರಿಜರ್ ತಂಪು ಪಾನೀಯ ಕೊಡಿ ಎಂದವನಿಗೆ ಪೊಲೀಸ್‌ಪ್ಪನ ಪ್ರತಿಕ್ರಿಯೆ ಹೇಗಿದೆ ನೋಡಿ

   ರಾಜ್ಯದ ಜನರನ್ನು ಆತಂಕದಲ್ಲಿ ದೂಡಿದ್ದಾರೆ

   ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ಸರಕಾರ ಲಿಕ್ಕರ್ ಮಾರಾಟ ಮಾಡಲು ಅವಕಾಶ ಕೊಟ್ಟು ರಾಜ್ಯದ ಜನರನ್ನು ಆತಂಕದಲ್ಲಿ ದೂಡಿದ್ದಾರೆ ಎಂದು #LiquorShops ಅಡಿ ಟ್ವಿಟ್ ಮಾಡಿದ್ದಾರೆ

   ಭಗವಾನ್ ರಾಮ ಲಕ್ಷ್ಣಣರಿಗೂ ದಿಕ್ಕು ತಪ್ಪಿದೆ

   ಭಗವಾನ್ ರಾಮ ಲಕ್ಷ್ಣಣರಿಗೂ ದಿಕ್ಕು ತಪ್ಪಿದೆ

   ಲಿಕ್ಕರ್ ಶಾಪ್‌ಗಳ ಮುಂದೆ ಜನ ಕ್ಯೂ ನಿಂತಿರುವುದನ್ನು ಕಂಡು ಭಗವಾನ್ ರಾಮ ಲಕ್ಷ್ಣಣರಿಗೂ ದಿಕ್ಕು ತಪ್ಪಿದೆ. ಇದು ಯಾವ ಅಸ್ತ್ರ ಇಷ್ಟು ದೊಡ್ಡದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮೆಮ್ ಹರಿಬಿಡಲಾಗಿದೆ

   ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ

   ಕರ್ನಾಟಕದ ಗೋಕಾಕ್‌ನಲ್ಲಿ ಇಂದು ಬೆಳಿಗ್ಗೆ ಮದ್ಯದಂಗಡಿಗಳನ್ನು ತೆರೆಯುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಭಾರೀ ಸಂಭ್ರಮದಿಂದ ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗಿದೆ.

   English summary
   Liquor Sale Starts: #LiquorShops Top Trend In Twitter, funny jokes memes, trolls, videos viral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X