ಟ್ವಿಟ್ಟರ್‌ನಲ್ಲಿ ಮೆಹಬೂಬ ಮುಫ್ತಿ-ಒಮರ್ ಅಬ್ದುಲ್ಲಾ ಕಿತ್ತಾಟ
ಶ್ರೀನಗರ, ಆಗಸ್ಟ್ 8: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ರಾಜ್ಯಸಭೆಯ ಉಪಾಧ್ಯಕ್ಷರ ಹುದ್ದೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆಸಿದ್ದಾರೆ.
ರಾಜ್ಯಸಭೆಯ ಉಪಾಧ್ಯಕ್ಷರ ಹುದ್ದೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಏಕಕಾಲದಲ್ಲಿ ಹೇಗೆ ಬೆಂಬಲ ನೀಡುತ್ತೀರಿ ಎಂದು ಒಮರ್ ಪ್ರಶ್ನಿಸಿದ್ದರು.
'ಮೆಹಬೂಬ ಅವರು ರಾಜ್ಯಸಭೆಯ ಉಪಾಧ್ಯಕ್ಷರ ಹುದ್ದೆಯೆ ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿದ್ದರು. ಅದೇ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸುವುದಾಗಿಯೂ ಹೇಳಿದ್ದಾರೆ. ಅದು ನಿಜಕ್ಕೂ ಹೇಗೆ ಕೆಲಸ ಮಾಡುತ್ತದೆ? ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದರು.

ಇದು ಕಪೋಲಕಲ್ಪಿತ ಸುದ್ದಿ ಎಂದು ಮೆಹಬೂಬ ಹರಿಹಾಯ್ದಿದ್ದಾರೆ. ಸಾಮಾನ್ಯವಾಗಿ ಸುಳ್ಳು ಮತ್ತು ಕಪೋಲಕಲ್ಪಿತ ಸುದ್ದಿಗಳನ್ನು ಕೆಲವು ಶಂಕಾಸ್ಪದ ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತವೆ.
ಆದರೆ, ಒಮರ್ ಅಬ್ದುಲ್ಲಾ ಅವರಂತಹ ರಾಜಕಾರಣಿಗಳು ಸಂಪೂರ್ಣ ಕಥೆ ಕಟ್ಟಿ ಸುಳ್ಳುಗಳನ್ನು ಹೆಣೆದಾಗ ಅಚ್ಚರಿಯಾಗುತ್ತದೆ. ಸತ್ಯಕ್ಕೆ ಹಾನಿಯುಂಟುಮಾಡುವ ಅಪಾಯಕಾರಿ ಪ್ರಚಾರ ಹಾಗೂ ಜನರನ್ನು ಹಾದಿತಪ್ಪಿಸುವ ಪ್ರಯತ್ನವಿದು ಎಂದು ಮೆಹಬೂಬ ಪ್ರತಿಕ್ರಿಯೆಯ ಟ್ವೀಟ್ ಮಾಡಿದ್ದರು.
ಅಲ್ಲದೆ, ಒಮರ್ ಅಬ್ದುಲ್ಲಾ ಅವರ ಟ್ವೀಟ್‌ಗೆ ಸುಳ್ಳು ಹೇಳುವಂತೆ ಮುಖಭಾವದ ಎಮೋಜಿಯನ್ನು (ಉದ್ದ ಮೂಗಿನ) ಬಳಸಿ ಪ್ರತಿಕ್ರಿಯೆ ನೀಡಿದ್ದರು.
Usually fake news & falsehoods are peddled by dubious news channels. But its baffling when a politician like @OmarAbdullah fabricates stories based on pure fiction. Such dangerous propaganda is detrimental to the truth & an attempt to mislead people.https://t.co/39wAb1rzIS
— Mehbooba Mufti (@MehboobaMufti) 7 August 2018
ಆದರೆ, ಇಷ್ಟಕ್ಕೆ ಸುಮ್ಮನಾಗದ ಒಮರ್ ಅಬ್ದುಲ್ಲಾ ಅದನ್ನು ತಮಾಷೆ ಮಾಡಿದ್ದರು. 'ನಿಮ್ಮ ಖಾತೆಯನ್ನು ನಿರ್ವಹಿಸುವವರಿಗೆ ಹ್ಯಾಟ್ಸಾಫ್. ಅವರು ವಾಸ್ತವವಾಗಿ ಹಾಸ್ಯದ ಮನೋಭಾವ ಹೊಂದಿದ್ದಾರೆ. ಒಳ್ಳೆಯ ಎಮೋಜಿ ಬಳಸಿದ್ದಾರೆ' ಎಂದು ವಿನೋದವಾಗಿ ಹೇಳಿದ್ದಾರೆ.
ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಮೆಹಬೂಬ, ತಾವೇ ತಮ್ಮ ಖಾತೆಯನ್ನು ನಿಭಾಯಿಸುತ್ತಿರುವುದಾಗಿ ಹೇಳಿದ್ದಾರೆ.
'ಮತ್ತೆ ಸುಳ್ಳು ಸುದ್ದಿ!?? ಅದಕ್ಕೆ ತಮಗೇ ಕಾಂಪ್ಲಿಮೆಂಟ್ ನೀಡಿ ಒಮರ್' ಎಂದು ಟ್ವೀಟ್ ಮಾಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications