Meghalaya Exit Poll: ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಮತ್ತೆ ಅಧಿಕಾರ
ಮೇಘಾಲಯದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ 63.91 ರಷ್ಟು ಮತದಾನವಾಗಿತ್ತು. ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 21ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ನವದೆಹಲಿ, ಫೆಬ್ರವರಿ 27: ಮೇಘಾಲಯ ವಿಧಾನಸಭಾ ಚುನಾವಣೆ ಸೋಮವಾರ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿವೆ. ಮೇಘಾಲಯದಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದ್ದು ಶೇಕಡ 76 ರಷ್ಟು ಮತದಾನ ನಡೆದಿದೆ.
ಮೇಘಾಲಯದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ 63.91 ರಷ್ಟು ಮತದಾನವಾಗಿತ್ತು. ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 21ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ ಮತ್ತು ತೃಣಮೂಲ ಕಾಂಗ್ರೆಸ್ 8-13 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ. ಅಲ್ಲದೆ ಭಾರತೀಯ ಜನತಾ ಪಕ್ಷ 6ರಿಂದ 11 ಸ್ಥಾನಗಳನ್ನು ಪಡೆಯಲಿದೆ ಎಂದೂ ಸಮೀಕ್ಷೆ ಹೇಳಿದೆ.

ಟೈಮ್ಸ್ ನೌ-ಇಟಿಜಿ ಸಂಶೋಧನೆ ಪ್ರಕಾರ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ 18ರಿಂದ 26 ಸ್ಥಾನಗಳು ಬರಲಿವೆ. ಇದೇ ಬಿಜೆಪಿಗೆ 3ರಿಂದ 6 ಸ್ಥಾನಗಳಷ್ಟೇ ಬರಲಿದೆ. ಇನ್ನು ಕಾಂಗ್ರೆಸ್‌ಗೆ 2ರಿಂದ 5 ಸ್ಥಾನಗಳು ಬರಲಿದೆ ಎಂದು ತಿಳಿಸಿದೆ. ಜೀ ನ್ಯೂಸ್ ಮ್ಯಾಟ್ರಿಜ್ ಪ್ರಕಾರ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ 21ರಿಂದ 26 ಸ್ಥಾನಗಳು ಬರಲಿವೆ. ಇದೇ ಬಿಜೆಪಿಗೆ 6ರಿಂದ 11 ಸ್ಥಾನಗಳಷ್ಟೇ ಬರಲಿದೆ. ಇನ್ನು ಕಾಂಗ್ರೆಸ್‌ಗೆ 3ರಿಂದ 6 ಸ್ಥಾನಗಳು ಬರಲಿದೆ ಎಂದು ತಿಳಿಸಿದೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದ್ದು, ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ 18ರಿಂದ 24 ಸ್ಥಾನಗಳು ಬರಲಿವೆ. ಇದೇ ಬಿಜೆಪಿಗೆ 4ರಿಂದ 8 ಸ್ಥಾನಗಳಷ್ಟೇ ಬರಲಿದೆ. ಇನ್ನು ಕಾಂಗ್ರೆಸ್‌ಗೆ 6ರಿಂದ 12 ಸ್ಥಾನಗಳು ಬರಲಿದೆ. ಅಲ್ಲದೆ ಇತರರು 4ರಿಂದ 8 ಸ್ಥಾನಗಳು ಬರಲಿದೆ ಎಂದು ತಿಳಿಸಿದೆ.

ಮೇಘಾಲಯದಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆದಿತ್ತು. ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಮತಗಳ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ. ಮೇಘಾಲಯದಲ್ಲಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ ನಾಯಕ ಎಚ್‌ಡಿಆರ್ ಲಿಂಗ್ಡೋಹ್ ಅವರ ನಿಧನದಿಂದಾಗಿ ಈಸ್ಟ್ ಖಾಸಿ ಹಿಲ್‌ನ ಸೊಹಿಯಾಂಗ್ ಕ್ಷೇತ್ರ ಮಾತ್ರ ಚುನಾವಣೆ ನಡೆಯಲಿಲ್ಲ.
3,419 ಮತಗಟ್ಟೆಗಳಲ್ಲಿ 369 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಭಾರತದ ಚುನಾವಣಾ ಆಯೋಗವು ಎರಡು ರಾಜ್ಯಗಳಲ್ಲಿ ಭದ್ರತಾ ವ್ಯವಸ್ಥೆಗಳ ಭಾಗವಾಗಿ ಪೊಲೀಸರ ಜೊತೆಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಪಡೆಗಳನ್ನು ನಿಯೋಜಿಸಿತ್ತು. ಮೇಘಾಲಯದ 3,419 ಮತಗಟ್ಟೆಗಳಲ್ಲಿ 640 'ದುರ್ಬಲ' ಎಂದು ವರ್ಗೀಕರಿಸಲಾಗಿದೆ ಮತ್ತು 323 'ನಿರ್ಣಾಯಕ' ಮತಗಟ್ಟೆಗಳು ಎಂದು ಹೇಳಲಾಗಿದೆ. 84 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಎರಡೂ ವರ್ಗಗಳ ಅಡಿಯಲ್ಲಿ ಇರಿಸಲಾಗಿದೆ.












Click it and Unblock the Notifications