
ಜಾಧವ್ ಗೆ ಜಯ ತಂದಿತ್ತ ವಕೀಲ ಹರೀಶ್ ಸಾಳ್ವೆ ಪರಿಚಯ
ಬೆಂಗಳೂರು, ಮೇ 17 : ಹೇಗ್ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರ ಪರಿಣಾಮಕಾರಿಯಾಗಿ ವಾದ ಮಂಡಿಸಿ ಜಯ ತಂದಿತ್ತ ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಸ್ಥೂಲ ಪರಿಚಯ ಇಲ್ಲಿದೆ.
43ನೇ ವಯಸ್ಸಿಗೆ ಸಾಲಿಸಿಟರ್ ಜನರಲ್ ಆದ ಸಾಳ್ವೆ ಅವರ ಕುಟುಂಬ ಕಾನೂನು ಪಂಡಿತರಿಂದ ಕೂಡಿದೆ. ಪಿಯಾನೋ ವಾದಕ ಸಾಳ್ವೆ ಅವರು ಹೈ ಪ್ರೊಫೈಲ್ ವಕೀಲ ಎನ್ನುವುದರಲ್ಲಿ ಸಂಶಯವೇ ಇಲ್ಲ.[ಜಾಧವ್ ಗಲ್ಲು ಶಿಕ್ಷೆಗೆ ತಡೆ; ಅಂತಾರಾಷ್ಟ್ರೀಯ ಕೋರ್ಟ್ ಐತಿಹಾಸಿಕ ತೀರ್ಪು]
2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎನಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇನ್ನೇನು ಜೈಲು ಸೇರುತ್ತಾರೆ ಎನ್ನುವಷ್ಟರಲ್ಲಿ ಅವರ ಕೈ ಹಿಡಿದು ಬಚಾವ್ ಮಾಡಿದ್ದು ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಹರೀಶ್ ಸಾಳ್ವೆ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಾಲಿಗೆ ದೇವರಾಗಿದ್ದರು.
ದೊಡ್ಡ ದೊಡ್ಡ ರಾಜಕಾರಣಿಗಳು, ಕಾರ್ಪೊರೇಟ್ ಹೌಸ್, ಸೆಲೆಬ್ರಿಟಿಗಳೇ ಇವರ ಕ್ಲೈಂಟುಗಳು, ಸಾಳ್ವೆ ಅವರ ಚಾರ್ಜ್ ಕೂಡಾ ಹಾಗೆ ಇದೆ. ದಿನವೊಂದಕ್ಕೆ 12 ರಿಂದ 30 ಲಕ್ಷ ರು ಪಡೆಯುತ್ತಾರೆ.
ಆದರೆ, ಕುಲಭೂಷಣ್ ಯಾದವ್ ಪ್ರಕರಣದಲ್ಲಿ ದೇಶಕ್ಕಾಗಿ, ಭಾವನಾತ್ಮಕ ನಂಟಿಗಾಗಿ ಕೇವಲ 1 ರು ಪಡೆಯುತ್ತಿದ್ದಾರೆ. ಕೃಷ್ಣಾ ಗೋದಾವರಿ ಕೇಸಿನಲ್ಲಿ ಮುಖೇಶ್ ಅಂಬಾನಿ ಅವರು ಸಾಳ್ವೆ ಅವರಿಗೆ 15ಕೋಟಿ ರು ನೀಡಿದ್ದರು ಎಂಬ ಸುದ್ದಿಯೂ ಇದೆ.

1980ರಲ್ಲಿ ವಕೀಲಿಕೆ
* 1980ರಲ್ಲಿ ವಕೀಲಿಕೆ ಆರಂಭಿಸಿದ ಸಾಳ್ವೆ ಅವರು ಜೆಬಿ ದಾದಾಚಂದ್ ಜಿ ಅಂಡ್ ಕೋ ನಲ್ಲಿ ಅಭ್ಯಾಸ ಮಾಡಿದರು.
* ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರ ಬಳಿ 1980 ರಿಂದ 1986 ರ ತನಕ ಕಾರ್ಯನಿರ್ವಹಿಸಿ ಅನುಭವ ಪಡೆದರು.
* ಇಂಗ್ಲೀಷ್ ಬಾರ್ ಹಾಗೂ ಬ್ಲಾಕ್ ಸ್ಟೋನ್ ಚೇಂಬರ್ಸ್ ಗೆ 2013ರಲ್ಲಿ ನೇಮಕಗೊಂಡ ಗೌರವ ಹೊಂದಿದ್ದಾರೆ.

ಕುಟುಂಬ ವಿವರ
* ಹರೀಶ್ ಸಾಳ್ವೆ ಅವರ ತಂದೆ ಎನ್ ಕೆಪಿ ಸಾಳ್ವೆ ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಹೆಸರು ಮಾಡಿದ್ದಾರೆ. ತಾಯಿ ಅಂಬೃತಿ ಸಾಳ್ವೆ ವೃತ್ತಿಯಿಂದ ವೈದ್ಯರು.
* ಸಾಳ್ವೆ ಅವರ ಅಜ್ಜ ಪಿಕೆ ಸಾಳ್ವೆ ಕೂಡಾ ಕ್ರಿಮಿನಲ್ ಲಾಯರ್ ಆಗಿದ್ದರು.
* ಮೀನಾಕ್ಷಿ ಅವರನ್ನು ವರಿಸಿದ ಸಾಳ್ವೆ ಅವರಿಗೆ ಸಾನಿಯಾ, ಸಾಕ್ಷಿ ಎಂಬ ಮಕ್ಕಳಿದ್ದಾರೆ.
* 61 ವರ್ಷ ವಯಸ್ಸಿನ ಸಾಳ್ವೆ ಅವರು ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಆಗಿ ನವೆಂಬರ್ 1999 ರಿಂದ 2002ರ ತನಕ ಕಾರ್ಯನಿರ್ವಹಿಸಿದರು.

ಹೈ ಪ್ರೊಫೈಲ್ ಕ್ಲೈಂಟುಗಳು
* ಪರಿಸರ ಸಂಬಂಧಿ ವ್ಯಾಜ್ಯಗಳನ್ನು ಪರಿಹರಿಸಲು ಅಮಿಕ್ಯೂಸ್ ಕ್ಯೂರಿಯಾಗಿ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದಾರೆ.
* ಕೃಷ್ಣಾ ಗೋದಾವರಿ ಕಣಿವೆ ಪ್ರಕರಣದಲ್ಲಿ ರಿಲಯನ್ಸ್ ನ ಮುಖೇಶ್ ಅಂಬಾನಿ ಅವರ ಪರ ವಾದಿಸಿದರು.
* ಟಾಟಾ ಸಮೂಹ ಹಾಗೂ ಐಟಿಸಿ ಲಿಮಿಟೆಡ್ ಇವರ ಕ್ಲೈಂಟ್ಸ್.
* ವೋಡಾಫೋನ್ ನ 2.5 ಬಿಲಿಯನ್ ತೆರಿಗೆ ವಂಚನೆ ಪ್ರಕರಣದಲ್ಲಿ ವೋಡಾಫೋನ್ ಪರ ವಾದಿಸಿ ಬಾಂಬೆ ಹೈಕೋರ್ಟ್ ನಲ್ಲಿ ಸೋತರೂ ಸುಪ್ರೀಂಕೋರ್ಟ್ ನಲ್ಲಿ ಜಯ ಪಡೆದರು.

ಸಲ್ಮಾನ್ ಖಾನ್, ಜಯಾ ಕ್ಲೈಂಟ್
* ಬಾಬಾ ರಾಮದೇವ್ ಸಮಾವೇಶದ ದಾಳಿ ಕೇಸಿನಲ್ಲಿ ದೆಹಲಿ ಪೊಲೀಸ್ ಪರ ವಾದಿಸಿದರು.
* ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಾಮೀನು ದೊರಕಿಸಿಕೊಟ್ಟರು.
* ಮುಕೇಶ್ ಅಂಬಾನಿ, ರತನ್ ಟಾಟಾ, ಸುನಿಲ್ ಮಿತ್ತಲ್ ಮುಂತಾದ ಉದ್ಯಮಿಗಳು, ಹಿರಿಯ ರಾಜಕಾರಣಿಗಳಾದ ಮುಲಾಯಂ ಸಿಂಗ್ ಯಾದವ್, ಪ್ರಕಾಶ್ ಸಿಂಗ್ ಬಾದಲ್ ಅಲ್ಲದೆ ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ ಕೂಡಾ ಇವರ ಕ್ಲೈಂಟ್.
* ಕಾವೇರಿ ವಿವಾದದಲ್ಲಿ ಕರ್ನಾಟಕ ಪರ ಫಾಲಿ ನಾರಿಮನ್ ಅವರ ಸಹವರ್ತಿಯಾಗಿ ವಾದಿಸುತ್ತಿದ್ದಾರೆ.
{promotion-urls}