Meat: ದಕ್ಷಿಣ ಭಾರತದಲ್ಲಿ ನಾನ್‌ವೆಜ್ ಪ್ರಿಯರ ಸಂಖ್ಯೆ ಹೆಚ್ಚು,ಕರ್ನಾಟಕದ ಸ್ಥಾನ ಏನು
ದಕ್ಷಿಣ ಭಾರತದ ಪಂಚ ರಾಜ್ಯಗಳಲ್ಲಿ ನಾನ್‌ವೆಜ್ ಪ್ರಿಯರ ಸಂಖ್ಯೆಯೇ ಹೆಚ್ಚಾಗಿ ಇದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಬಾಡೇ ನಮ್ ಗಾಡು ಎನ್ನುವವರ ಸಂಖ್ಯೆ ಜಾಸ್ತಿ ಇದೆ. ದಕ್ಷಿಣ ರಾಜ್ಯಗಳಲ್ಲಿ ಸಸ್ಯಹಾರ ಪ್ರೇಮಿಗಳಿಗಿಂತ, ಮಾಂಸಹಾರ ಪ್ರೇಮಿಗಳೇ ಹೆಚ್ಚು ಎನ್ನುತ್ತೆ ಅಂಕಿ - ಅಂಶ. ಯಾವ ರಾಜ್ಯದಲ್ಲಿ ಎಷ್ಟು ಮಾಂಸ ಪ್ರಿಯರು ಇದ್ದಾರೆ ಎನ್ನುವ ವಿವರ ಇಲ್ಲಿದೆ.
ಬಾಡೇ ನಮ್ ಗಾಡು ಎನ್ನುವುದು ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ಟ್ ಆಗಿದ್ದ ವಿನೂತನ ಅಭಿಯಾನ. ಈ ಅಭಿಯಾನದ ಬಗ್ಗೆ ನೀವೆಲ್ಲ ಕೇಳಿಯೇ ಇರುತ್ತೀರಿ. ಆದರೆ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಜನ ಬಾಡೇ ಕಣ್ರಿ ನಮ್ಗೂ ಇಷ್ಟ ಅಂತಿದ್ದಾರೆ. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೂ, ದಕ್ಷಿಣದಲ್ಲೇ ಹೆಚ್ಚು ನಾನ್‌ವೆಜ್ ಲವರ್ಸ್ ಇದ್ದಾರೆ.

ಆಹಾರ ಸೇವಿಸುವುದು ಅವರವರ ಆಯ್ಕೆ. ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದಲ್ಲಿ ಬಹುತೇಕ ಭಾಗದಲ್ಲಿ ವೆಜ್ ಹಾಗೂ ನಾನ್‌ವೆಜ್ ತಿನ್ನುವವರನ್ನು ಯಾರೂ ಜಡ್ಜ್ ಮಾಡಲ್ಲ. ನಾನ್‌ವೆಜ್ ಸೇವಿಸುವವರಲ್ಲೂ ಹಲವರು ಕೆಲವೊಂದು ನಾನ್‌ವೆಜ್‌ಗಳನ್ನು ತಿನ್ನಲ್ಲ. ಕೆಲವರು ಚಿಕನ್, ಮಟನ್ ಹಾಗೂ ಮೀನು ಮಾತ್ರ ಸೇವಿಸಿದರೆ, ಇನ್ನು ಕೆಲವರು ಗೋಮಾಂಸವನ್ನೂ ತಿನ್ನುತ್ತಾರೆ.
ತೆಲಂಗಾಣದಲ್ಲಿ ಹೆಚ್ಚು: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ನಾನ್‌ವೆಜ್ ತಿನ್ನುವವರು ಇರುವುದು ನೆರೆಯ ತೆಲಂಗಾಣದಲ್ಲಿ. ಈ ರಾಜ್ಯದಲ್ಲಿ ಬರೋಬ್ಬರಿ ಶೇ 98.7% ಜನ ನಾನ್‌ವೆಜ್ ತಿನ್ನುತ್ತಾರೆ ಎನ್ನುತ್ತದೆ ಅಂಕಿ - ಅಂಶ. ಈ ರಾಜ್ಯದಲ್ಲಿ ಮಾಂಸ ಪ್ರಿಯರ ಸಂಖ್ಯೆ ಹೆಚ್ಚಾಗಿ ಇದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ನಡುವೆ ಭಾಷೆ ಸೇರಿದಂತೆ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಇದೆ. ಆದರೆ, ನಾನ್‌ವೆಜ್ ವಿಷಯದಲ್ಲಿ ಭಿನ್ನತೆ ಇದೆ.

ತೆಲಂಗಾಣದಲ್ಲಿ ಕೆಲವರು ಮದುವೆಗಳಲ್ಲೂ ಮಾಂಸದ ಊಟವನ್ನು ಮಾಡಿಸುತ್ತಾರೆ. ಆದರೆ, ಆಂಧ್ರಪ್ರದೇಶದಲ್ಲಿ ಮದುವೆಗಳಲ್ಲಿ ಮಾಂಸ ಇರುವುದಿಲ್ಲ. ಇನ್ನು ತೆಲಂಗಾಣದ ಕೆಲವು ಕುಟುಂಬಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾಂಸದೊಂದಿಗೆ ಮದ್ಯ ಸೇವನೆಯ ವಾಡಿಕೆಯೂ ಇದೆ.
ದಕ್ಷಿಣದ ಯಾವ ರಾಜ್ಯದಲ್ಲಿ ಎಷ್ಟು ನಾನ್‌ವೆಜ್ ಪ್ರಿಯರಿದ್ದಾರೆ: ದಕ್ಷಿಣ ಭಾರತದಲ್ಲಿ ಐದು ರಾಜ್ಯಗಳಿವೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ. ಈ ರಾಜ್ಯದಲ್ಲಿ ತೆಲಂಗಾಣ ನಾನ್‌ವೆಜ್ ಪ್ರಿಯರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ತೆಲಂಗಾಣದಲ್ಲಿ 98.7% ನಾನ್‌ವೆಜ್ ತಿನ್ನುವವರು ಇದ್ದಾರೆ. ಎರಡು ಹಾಗೂ ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶ ಹಾಗೂ ಕೇರಳ ಇದೆ.
ಆಂಧ್ರಪ್ರದೇಶದಲ್ಲಿ 98.25% ರಷ್ಟು ಮಾಂಸ ಪ್ರಿಯರು ಇದ್ದಾರೆ. ಕೇರಳದಲ್ಲಿ ಶೇ 97ರಷ್ಟು ಜನ ನಾನ್‌ವೆಜ್ ತಿನ್ನುತ್ತಾರೆ. ಇನ್ನು ತಮಿಳುನಾಡಿನಲ್ಲಿ ಶೇ 95%ರಷ್ಟು ಜನ ಮಾಂಸ ತಿನ್ನುತ್ತಾರೆ. ದಕ್ಷಿಣ ಭಾರತದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಕಡಿಮೆ ಮಾಂಸ ಪ್ರಿಯರು ಇದ್ದಾರೆ. ಕರ್ನಾಟಕದಲ್ಲಿ 78.9%ರಷ್ಟು ಜನ ನಾನ್‌ವೆಜ್ ಪ್ರಿಯರು ಇದ್ದಾರೆ.












Click it and Unblock the Notifications