Good News: ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ, ವೇತನ ಸಹಿತ ಹೆರಿಗೆ ರಜೆ ಜಾರಿ
ಕರ್ನಾಟಕದ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ ಅಲ್ಲಿನ ಸರ್ಕಾರವು ಶುಭ ಸುದ್ದಿಯೊಂದನ್ನು ನೀಡಿದೆ. ಗ್ರಾಚ್ಯುಟಿ, ವೇತನ ಸಹಿತ ಹೆರಿಗೆ ರಜೆ ಹಾಗೂ ನಿವೃತ್ತಿ ವಯಸ್ಸಿನ ಮಿತಿ ಹೆಚ್ಚಳ ಮಾಡಲು ಸಿಎಂ ಚಂದ್ರಬಾಬು ನಾಯ್ಡು ಸಮ್ಮತಿ ಸೂಚಿಸಿದ್ದಾರೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದ ಗಮನಿಸಿ.
30 ವರ್ಷ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು 1.50 ಲಕ್ಷ ರೂಪಾಯಿ ನಿವೃತ್ತಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಆಶಾ ಕಾರ್ಯಕರ್ತೆಯರು ಜನ ಹಾಗೂ ಆರೋಗ್ಯ ವ್ಯವಸ್ಥೆಯ ನಡುವಿನ ಕೊಂಡಿಯಾಗಿದ್ದಾರೆ. ಆದ್ದರಿಂದ 42,752 ಮಂದಿ ಆಶಾ ಕಾರ್ಯಕರ್ತೆಯರು ಈ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.

ಅಷ್ಟೇ ಅಲ್ಲದೆ, ಅರ್ಹ ಆಶಾ ಕಾರ್ಯಕರ್ತೆಯರು ಮೊದಲ 2 ಹೆರಿಗೆಗಳಿಗೆ 180 ದಿನಗಳ ವೇತನ ಸಹಿತ ರಜೆ ಪಡೆಯಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಘೋಷಣೆ ಸಿಎಂ ಮಾಡಿದರು. ತುಂಬಾ ದಿನಗಳಿಂದಲೂ ಬಾಕಿ ಉಳಿದಿದ್ದ ಆಶಾ ಕಾರ್ಯಕರ್ತರ ಬೇಡಿಕೆಯ ಗುರುತಿಸಿದ ಸಿಎಂ ಚಂದ್ರಬಾಬು ನಾಯ್ಡು ಈ ಸೌಲಭ್ಯವನ್ನು ಅನುಮೋದಿಸಿದ್ದಾರೆ. ಅಲ್ಲದೆ, ಈ ರೀತಿಯ ಗ್ರಾಚ್ಯುಟಿ ಯೋಜನೆಯ ದೇಶದ ಬೇರೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಜಾರಿಗೆ ತಂದಿಲ್ಲ ಎಂದು ಹೇಳಿದರು.
ಆಂಧ್ರ ಪ್ರದೇಶದಲ್ಲಿ ಆಶಾ ಕಾರ್ಯಕರ್ತರಿಗೆ ಈಗ 180 ದಿನಗಳ ಹೆರಿಗೆ ರಜೆಯ ಕೆಲಸದ ದಿನಗಳೆಂದು ಪರಿಗಣಿಸಿದೆ. ಈ ಹಿಂದೆ ಆಶಾ ಕಾರ್ಯಕರ್ತೆಯರು ಹೆರಿಗೆ ರಜೆ ಸಮಯದಲ್ಲಿ ಯಾವುದೇ ವೇತನ ಪಡೆಯುತ್ತಿರಲಿಲ್ಲ. ಆದರೆ ಈ ಹೊಸ ನೀತಿಯಿಂದಾಗಿ ಹೆರಿಗೆ ರಜೆ ವೇಳೆಯೂ ಸಂಬಳ ಪಡೆಯಲು ಅರ್ಹರಾಗಿರುತ್ತಾರೆ. ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದಲ್ಲಿನ 37,017 ಮಂದಿ ಮತ್ತು ನಗರ ಪ್ರದೇಶದಲ್ಲಿನ 5,735 ಮಂದಿ ಆಶಾ ಕಾರ್ಯಕರ್ತರಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದರು.
ಇನ್ನು ಈ ಘೋಷಣೆ ಜೊತೆಗೆ ಇತ್ತೀಚೆಗೆ ವಿಧಾನಸಭೆ ಚುನಾವಣೆ ವೇಳೆ ಆಶಾ ಕಾರ್ಯಕರ್ತರಿಗೆ ನೀಡಿದ್ದ ಭರವಸೆಯ ಈಡೇರಿಸಿದಂತಾಗಿದೆ. ದೇಶದಲ್ಲಿನ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಆಶಾ ಕಾರ್ಯಕರ್ತರ ಮಾಸಿಕ ವೇತನವು ಆಂಧ್ರಪ್ರದೇಶದಲ್ಲಿ ಹೆಚ್ಚಿದೆ. ಉತ್ತರ ಪ್ರದೇಶ 750 ರೂಪಾಯು, ಹಿಮಾಚಲ ಪ್ರದೇಶ ₹2,000, ರಾಜಸ್ಥಾನದಲ್ಲಿ ₹2,700 ಸಂಬಳವನ್ನು ಆಶಾ ಕರ್ಯಕರ್ತೆಯತರಿಗೆ ನೀಡಲಾಗುತ್ತದೆ
ಅಲ್ಲದೆ, ಪಶ್ಚಿಮ ಬಂಗಾಳ ಮತ್ತು ನವದೆಹಲಿ 3,000 ರೂಪಾಯಿ, ಹರಿಯಾಣ ಮತ್ತು ಕರ್ನಾಟಕ 4,000 ರೂಪಾಯಿ, ಕೇರಳ 5,000 ರೂಪಾಯಿ, ಸಿಕ್ಕಿಂ 6,000 ರೂಪಾಯಿ, ತೆಲಂಗಾಣದಲ್ಲಿ 7,500 ರೂಪಾಯಿ ಸಂಬಳ ಪಡೆದರೆ, ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತರು ತಿಂಗಳಿಗೆ 10,000 ರೂಪಾಯಿ ಪಡೆಯುತ್ತಿದ್ದಾರೆ. ಇದು ದೇಶದಲ್ಲೇ ಅತಿ ಹೆಚ್ಚು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದರು.












Click it and Unblock the Notifications