ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಮತಾಂತರ, ಲವ್‌ ಜಿಹಾದ್‌ ಖಂಡಿಸಿ ಬೃಹತ್‌ ಪ್ರತಿಭಟನೆ

ಮುಂಬೈನ ಸಕಲ್ ಹಿಂದೂ ಸಮಾಜ ಆಯೋಜಿಸಿದ್ದ 'ಹಿಂದೂ ಜನ ಆಕ್ರೋಶ ಮೋರ್ಚಾ' ಬ್ಯಾನರ್‌ನಡಿಯಲ್ಲಿ ಪ್ರತಿಭಟನಾಕಾರರು ಸೆಂಟ್ರಲ್ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಿಂದ ತಮ್ಮ ಮೆರವಣಿಗೆ ನಡೆಸಿದರು.

|
Google Oneindia Kannada News

ಮುಂಬೈ, ಜನವರಿ 30: ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಲವ್ ಜಿಹಾದ್ ವಿರುದ್ಧ ಬಲಪಂಥೀಯ ಗುಂಪುಗಳು ಭಾನುವಾರ ಮಧ್ಯ ಮುಂಬೈನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.

ಮುಂಬೈನ ಸಕಲ್ ಹಿಂದೂ ಸಮಾಜ ಆಯೋಜಿಸಿದ್ದ 'ಹಿಂದೂ ಜನ ಆಕ್ರೋಶ ಮೋರ್ಚಾ' ಬ್ಯಾನರ್‌ನಡಿಯಲ್ಲಿ ಪ್ರತಿಭಟನಾಕಾರರು ಸೆಂಟ್ರಲ್ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಿಂದ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿ, ಪರೇಲ್‌ನ ಕಾಮ್‌ಗರ್ ಮೈದಾನದಲ್ಲಿ 4 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಿದರು.

ರಸ್ತೆ, ಚರಂಡಿ ಸಣ್ಣಪುಟ್ಟ ಸಮಸ್ಯೆ ಬಿಟ್ಟು, ಲವ್ ಜಿಹಾದ್ ವಿರುದ್ಧ ಹೋರಾಡಿ: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ರಸ್ತೆ, ಚರಂಡಿ ಸಣ್ಣಪುಟ್ಟ ಸಮಸ್ಯೆ ಬಿಟ್ಟು, ಲವ್ ಜಿಹಾದ್ ವಿರುದ್ಧ ಹೋರಾಡಿ: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್

ಪ್ರತಿಭಟನೆಯಲ್ಲಿ ಜನರು ಕೇಸರಿ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ಹಿಡಿದುಕೊಂಡು "ಲವ್ ಜಿಹಾದ್" ವಿರುದ್ಧ ಕಾನೂನು ತರಬೇಕು ಮತ್ತು ರಾಜ್ಯದಲ್ಲಿ ಧಾರ್ಮಿಕ ಮತಾಂತರಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

Massive protest in Mumbai condemning religious conversion, love jihad

ಇದಕ್ಕೂ ಮೊದಲು, ಜನವರಿ 22ರಂದು ಸಕಲ್ ಹಿಂದೂ ಸಮಾಜದ ಸದಸ್ಯರು ಮಹಾರಾಷ್ಟ್ರದ ಪುಣೆಯಲ್ಲಿ "ಲವ್ ಜಿಹಾದ್", ಅಕ್ರಮ ಮತಾಂತರ ಮತ್ತು ಗೋಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. 'ಹಿಂದೂ ಜನ ಆಕ್ರೋಶ್‌ ಮೋರ್ಚಾ' ಶೀರ್ಷಿಕೆಯ ಮೆರವಣಿಗೆಯು ಲಾಲ್ ಮಹಲ್‌ನಲ್ಲಿ ಪ್ರಾರಂಭವಾಯಿತು ಮತ್ತು ಪುಣೆಯ ಡೆಕ್ಕನ್ ಪ್ರದೇಶದಲ್ಲಿ ಮುಕ್ತಾಯಗೊಂಡಿತ್ತು.

Love jihad: ಮಂಗಳೂರಿನಲ್ಲಿ ಲವ್ ಜಿಹಾದ್ ತಡೆಯಲು ಸಹಾಯವಾಣಿ ಆರಂಭಿಸಿದ ಭಜರಂಗದಳLove jihad: ಮಂಗಳೂರಿನಲ್ಲಿ ಲವ್ ಜಿಹಾದ್ ತಡೆಯಲು ಸಹಾಯವಾಣಿ ಆರಂಭಿಸಿದ ಭಜರಂಗದಳ

ಶಿವಾಜಿ ಪಾರ್ಕ್‌ನಿಂದ ಹೊರಟ ಮೆರವಣಿಗೆಯಲ್ಲಿ ಬಲಪಂಥೀಯ ಸಂಘಟನೆಗಳಾದ ಆರ್‌ಎಸ್‌ಎಸ್, ಬಜರಂಗದಳ ಮತ್ತು ವಿಎಚ್‌ಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಸಾಗಿದರು. ಬಿಜೆಪಿ ಮತ್ತು ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆ ಬಣದ ಹಲವು ಮುಖಂಡರು ಮತ್ತು ಶಾಸಕರು ಭಾಗವಹಿಸಿದ್ದರು.

ಮಹಾರಾಷ್ಟ್ರದಾದ್ಯಂತ ಈಗಾಗಲೇ ಸುಮಾರು 30 ರ್‍ಯಾಲಿಗಳನ್ನು ಆಯೋಜಿಸಲಾಗಿದೆ. ಈ ಹಿಂದೆ, ಪರ್ಭಾನಿ, ನಾಂದೇಡ್, ಅಹ್ಮದ್‌ನಗರ, ಕೊಲ್ಲಾಪುರ, ಗಡ್‌ಚಿರೋಲಿ, ಸತಾರಾ, ಕರಡ್, ಸಾಂಗ್ಲಿ, ಸೋಲಾಪುರ, ಪುಣೆ, ಧುಲೆ, ಜಲಗಾಂವ್, ನಾಗ್ಪುರ, ಅಮರಾವತಿ, ಹಿಂಗೋಲಿ, ಬುಲ್ಧಾನ ಮತ್ತು ಜಲ್ನಾ ಸೇರಿದಂತೆ 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂತಹ ರ್‍ಯಾಲಿಗಳನ್ನು ಆಯೋಜಿಸಲಾಗಿತ್ತು.

ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಸುನೀಲ್ ಘನ್ವತ್ ಮಾತನಾಡಿ, 'ಸಕಲ್ ಹಿಂದೂ ಸಮಾಜದಿಂದ ಮುಂಬೈನಲ್ಲಿ ಭಾನುವಾರದ ರ್‍ಯಾಲಿಯನ್ನು ಆಯೋಜಿಸಲಾಗಿದ್ದು, ಇದರ ಅಡಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ, ಶಿವ ಪ್ರತಿಷ್ಠಾನ ಮತ್ತು ಸನಾತನ ಸಂಸ್ಥೆಗಳಂತಹ ವಿವಿಧ ಸಂಘಟನೆಗಳು ಒಗ್ಗೂಡಿವೆ. ರ್ಯಾಲಿಯಲ್ಲಿ ಕನಿಷ್ಠ 15,000 ಜನರು ಭಾಗವಹಿಸುವ ನಿರೀಕ್ಷೆಯಿದೆ, ಆದರೂ ನಾವು ಹೆಚ್ಚಿನ ಸ್ಥಳಾವಕಾಶಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ ಎಂದರು.

English summary
Right-wing groups staged a massive protest in central Mumbai on Sunday demanding the implementation of anti-conversion laws in the state against love jihad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X