ಅಪರಾಧಿಗಳ ಪತ್ತೆ: ಪೊಲೀಸರಿಗೆ ತಲೆನೋವಾದ ಕೊರೊನಾ ಮಾಸ್ಕ್
ಬೆಂಗಳೂರು, ಮೇ 11: ಒಂದೆಡೆ ಕೊರೊನಾ ಭಯದಿಂದಾಗಿ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಆದರೆ ಮತ್ತೊಂದೆಡೆ ಕಳ್ಳರು, ದರೋಡೆಕೋರರಿಗೆ ಇದೇ ವರವಾಗಿದೆ.
ಹೌದು ಕೊರೊನಾ ಸೋಂಕು ದೇಶದಾದ್ಯಂತ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ಗಳನ್ನು ಧರಿಸಿ ಎಂದು ಆರೋಗ್ಯ ಇಲಾಖೆ ಹೇಳಿದ್ದು, ಎಲ್ಲರೂ ಮಾಸ್ಕ್ ಧರಿಸುತ್ತಿದ್ದಾರೆ.
ಲಾಕ್ ಡೌನ್ ರೂಲ್ಸ್ ಬ್ರೇಕ್: ಪೂನಂ ಪಾಂಡೆ ವಿರುದ್ಧ ಎಫ್ ಐ ಆರ್
ಆದರೆ ಎಲ್ಲರೂ ಮಾಸ್ಕ್ ಧರಿಸಿರುವ ಕಾರಣ ದರೋಡೆಕೋರರು, ಕಳ್ಳರು ಸೇರಿದಂತೆ ಸಿಸಿಟಿವಿ ನೋಡಿ ಅಪರಾಧವನ್ನು ಭೇದಿಸುವುದು ಪೊಲೀಸರಿಗೆ ಕಷ್ಟವಾಗಿದೆ. ಸಾಮಾನ್ಯವಾಗಿ ಆರೋಪಿಗಳು ತಾವು ಯಾವುದೇ ಕೃತ್ಯ ಮಾಡಬೇಕಿದ್ದರೂ ಮುಖವಾಡ, ಮಾಸ್ಕ್‌ಗಳನ್ನು ಧರಿಸುತ್ತಾರ. ಆದರೆ ಈಗ ಪ್ರತಿಯೊಬ್ಬರು ಮಾಸ್ಕ್ ಧರಿಸುವುದರಿಂದ ಯಾರು ಆರೋಪಿಗಳು ಎಂದು ಪತ್ತೆ ಹಚ್ಚುವುದು ಕಷ್ಟವಾಗಿದೆ.
ಏರ್‌ಪೋರ್ಟ್‌ಗಳಲ್ಲಿ ಕೂಡ ಪ್ರತಿಯೊಬ್ಬರು ಮಾಸ್ಕ್ ಧರಿಸುವುದರಿಂದ ಸ್ಕ್ರೀನಿಂಗ್ ಕೂಡ ಕಷ್ಟವಾಗಿದೆ.ಮಾಸ್ಕ್ ಧರಿಸಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದೆ.
ಜಗತ್ತು ಎದುರಿಸುತ್ತಿರುವ ಮತ್ತೊಂದು ಸಮಸ್ಯೆ ಇನ್ಫೋಡೆಮಿಕ್. ಸಾಮೂಹಿಕ ಉನ್ಮಾದವನ್ನು ಉಂಟುಮಾಡಲು ವೈರಸ್ ಅನ್ನು ತಳೀಯವಾಗಿ ವಿನ್ಯಾಸಗೊಳಿಸಲಾಗಿದೆ .ಅಥವಾ ಜೈವಿಕ ಆಯುಧವಾಗಿ ಬಳಸಲಾಗುತ್ತಿದೆ ಎಂಬ ಸಿದ್ಧಾಂತಗಳು ಇಲ್ಲಿವೆ. ವರ್ಣಭೇದ ನೀತಿಯನ್ನು ಪ್ರಚೋದಿಸಲು ಸಹ ಇದನ್ನು ಬಳಸಲಾಗುತ್ತದೆ.
ಕೊರೊನಾ ವೈರಸ್‌ಗಳು ಹೆಚ್ಚಾದ ಬಳಿಕ ವೆಬ್‌ಸೈಟ್‌ಗಳ ನೋಂದಣಿ ಕೂಡ ಹೆಚ್ಚಾಗಿದೆ. ಹಲವು ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ.ಹಾಗೆಯೇ ಸಬ್ಸಿಡಿಯಲ್ಲಿ ನೀಡಲಾಗುವ ಹಲವು ಸೌಕರ್ಯಗಳ ಬಗ್ಗೆ ತಪ್ಪು ಸಂದೇಶಗಳು ರವಾನೆಯಾಗುತ್ತಿದೆ.
ವರ್ಕ್ ಫ್ರಂ ಹೋಮ್ ನೀಡಿದ ದಿನಗಳಿಂದ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಾಗಿದೆ. ವಿಪಿಎನ್‌ಗಳ ಮೂಲಕ ಕಚೇರಿಗಳ ಸಾಕಷ್ಟು ಸೂಕ್ಷ್ಮ ವಿಚಾರಗಳನ್ನು ಕದಿಯುತ್ತಿದ್ದಾರೆ. ಹಾಗೆಯೇ ವೈಫೈಗಳನ್ನು ಕೂಡ ಹ್ಯಾಕ್ ಮಾಡುತ್ತಿದ್ದಾರೆ.