ಮಾರುತಿ ಸುಜುಕಿ ಕಂಪನಿಯಿಂದ ಕೇವಲ ₹5,00,000 ಬೆಲೆಯ ಮೂರು ಕಾರುಗಳ ಬಿಡುಗಡೆ-ವಿಶೇಷತೆ, ಮೈಲೇಜ್‌ ವಿವರ ತಿಳಿಯಿರಿ

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಡಿರುವ ಇರುವ ಮಾರುತಿ ಸುಜುಕಿಯು ಕೈಗೆಟಕುವ ದರದಲ್ಲಿ ಹೊಸ ವಿನ್ಯಾಸದ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವ ಕೆಲಸವನ್ನು ಮಾಡುತ್ತಲೇ ಇದೆ. ಇದೀಗ ಮತ್ತೆ ಇಂದು (ಜೂನ್‌ 04) ಅತ್ಯಂತ ಕಡಿಮೆ ಬೆಲೆಯ, ಅತ್ಯಾಕರ್ಷಕ ಮೂರು ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಹಾಗಾದರೆ ವಿಶೇಷತೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಮಾರುಕಟ್ಟೆಯಲ್ಲಿ ಇವಿ ವಾಹನಗಳದ್ದೇ ದರ್ಬಾರ್ ಶುವಾದಾಗಿನಿಂದ‌ ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಇನ್ನು ನಾವೇನು ಕಡಿಮೆಯಿಲ್ಲವೆಂಬಂತೆ ಒಂದಕ್ಕಿಂತ ಒಂದು ಕಂಪನಿಗಳು ರಿಯಾಯಿತಿ ದರದಲ್ಲಿ ಹೊಸ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡುತ್ತಲಿವೆ. ಅದರಲ್ಲೂ ನಾಲ್ಕು ಚಕ್ರದ ವಾಹನಗಳ ಮಾರಾಟದಲ್ಲೂ ಕೂಡ ಪೈಪೋಟಿ ಇದ್ದು, ಹೊಸ ವಿನ್ಯಾಸದ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿವೆ. ಇದೀಗ ಮಾರುತಿ ಸುಜುಕಿಯು ಇಂದು ಅತೀ ಕಡಿಮೆ ದರದಲ್ಲಿ ಮೂರು ಕಾರುಗಳನ್ನು ಬಿಡುಗಡೆ ಮಾಡಲಿದೆ.

Maruti Suzuki launches 5 00 000 cost s three New model cars know details

ಮಾರುತಿ ಸುಜುಕಿ ಕಂಪನಿಯೂ ಇಂದು (ಜೂನ್ 04) ನೆಕ್ಸಾ ಮತ್ತು ಅರೆನಾ ಡೀಲರ್‌ಶಿಪ್ ಮೂಲಕ ಹೊಸ ವಿನ್ಯಾಸದ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಈ ಕಾರುಗಳನ್ನು ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೂತನ ಆಲ್ಟೊ ಕೆ 10, ಎಸ್-ಪ್ರೆಸ್ಸೊ ಹಾಗೂ ಸೆಲೆರಿಯೊ ಡ್ರೀಮ್ ಎಡಿಷನ್ ಹ್ಯಾಚ್‌ಬ್ಯಾಕ್‌ಗಳನ್ನು ಬಿಡುಗಡೆ ಮಾಡಲಿದೆ.

ಮಾರುತಿ ಸುಜುಕಿಯು ಆರಂಭಿಕ ಆವೃತ್ತಿ ಹ್ಯಾಚ್‌ಬ್ಯಾಕ್‌ಗಳ ಮಾರಾಟವನ್ನು ಹೆಚ್ಚಳ ಮಾಡಲು ತೀರ್ಮಾನ ಮಾಡಿದೆ. ಇನ್ನು ಇಂದು ಹೊಸ ವಿನ್ಯಾಸದಲ್ಲಿ ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲೆರಿಯೊದ ಡ್ರೀಮ್ ಎಡಿಷನ್ ಮಾದರಿಗಳು ಮರರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಈ ಕಾರುಗಳ ಎಕ್ಸ್ ಶೋರೂಂ ಬೆಲೆ 4.99 ಲಕ್ಷ ರೂಪಾಯಿ ಆಗಿದ್ದು, ಈ ತಿಂಗಳ ಅಂತ್ಯದಲ್ಲಿ ಖರೀದಿಗೆ ಲಭ್ಯವಿರಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂದೇ ಹೊಸ ಮಾದರಿಯ ಆಲ್ಟೊ, ಎಸ್-ಪ್ರೆಸ್ಸೊ ಮತ್ತು ಸೆಲೆರಿಯೊ ಡ್ರೀಮ್ ಎಡಿಷನ್ ಹ್ಯಾಚ್‌ಬ್ಯಾಕ್‌ಗಳ ಬುಕ್ಕಿಂಗ್ ಶುರು ಆಗಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ ಕಾಯ್ದಿರಿಸಬಹುದು. ಈ ಕಾರುಗಳು ಸ್ಮಾರ್ಟ್‌ಫೋನ್ ಕನೆಕ್ಟಿವಿಯೊಂದಿಗೆ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿ ಹಲವು ಸೌಲಭ್ಯಗಳನ್ನು ಒಳಗೊಂಡಿವೆ.

ಹೊಸ ಮಾರುತಿ ಸುಜುಕಿ ಆಲ್ಟೊ ಕೆ10 ಎಸ್-ಪ್ರೆಸ್ಸೊ ಹಾಗೂ ಸೆಲೆರಿಯೊ ಡ್ರೀಮ್ ಎಡಿಷನ್ ಆವೃತ್ತಿಗಳು, 1.0-ಲೀಟರ್, 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿವೆ. ಅಲ್ಲದೆ, 66 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 89 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿವೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+