ಚಪ್ಪಲಿ ಹಾರ ಹಾಕಿ ಹರಿಯಾಣ ರಸ್ತೆಯಲ್ಲಿ ಪ್ರೇಮಿಗಳ ಮೆರವಣಿಗೆ
ಹರ್ಯಾಣ, ಆಗಸ್ಟ್ 22: ಮಹಿಳೆ ಹಾಗೂ ಅದೇ ಊರಿನ ಯುವಕನ ನಡುವೆ ಅನೈತಿಕ ಸಂಬಂಧವಿದೆ ಎಂದು ತಿಳಿದ ಸ್ಥಳೀಯರು ಅವರಿಬ್ಬರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಈ ಘಟನೆ ಹರಿಯಾಣದ ಕರ್ನಾಲ್‌ನಲ್ಲಿ ನಡೆದಿದ್ದು, ವಿವಾಹಿತ ಮಹಿಳೆ ಹಾಗೂ ವ್ಯಕ್ತಿಯ ಜೊತೆ ಹೊಂದಿದ್ದ ಅನೈತಿಕ ಸಂಬಂಧವನ್ನು ಪ್ರಶ್ನಿಸಿ ಸ್ಥಳೀಯರು ಅವರಿಬ್ಬರಿಗೆ ಥಳಿಸಿ ಚಪ್ಪಲಿ ಹಾರ ಹಾಕಿಸಿ ರಸ್ತೆಯ ತುಂಬೆಲ್ಲಾ ಮೆರವಣಿಗೆ ಮಾಡಿಸಿದ್ದಾರೆ.
ಪಂಚಾಯಿತಿ ಸಭೆ ಬಳಿಕ ಮಹಿಳೆ ಹಾಗೂ ಆತನನ್ನು ಊರಿನಿಂದ ಬಹಿಷ್ಕಾರ ಹಾಕಲು ನಿರ್ಧರಿಸಿದ್ದರು. ಮಹಿಳೆಯು ಬಿಹಾರ ಮೂಲದವರಾಗಿದ್ದಾರೆ. ಯುವಕ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಮಹಿಳೆಯು ಬಂಜಾರ ಸಮುದಾಯಕ್ಕೆ ಸೇರಿದವಳಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆತ ವಾಲ್ಮೀಕಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ.

ಮೊದಲು ಯುವಕನನ್ನು ಕೊಲ್ಲಬೇಕು ಎಂದು ಸ್ಥಳೀಯರು ತೀರ್ಮಾನಿಸಿದ್ದರು, ಬಳಿಕ ಬೇಡ ಆತನಿಗೆ ಥಳಿಸಿದ್ದಾರೆ. ಬಳಿಕ ಯಾರೋ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಯುವಕನ ಪೋಷಕರು ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ. ಮಹಿಳೆ ಹಾಗೂ ಯುವಕ ಇಬ್ಬರಿಗೂ ಚಪ್ಪಲಿ ಹಾರ ಹಾಕಿಕೊಳ್ಳುವಂತೆ ಒತ್ತಾಯಿಸಲಾಗಿತ್ತು ಎಂದೂ ತಿಳಿಸಿದ್ದಾರೆ.












Click it and Unblock the Notifications