ಬನ್ನಿ ಎಲ್ಲರೂ ಒಮ್ಮತದಿಂದ ಕ್ಷಯರೋಗವನ್ನು ಕೊನೆಗಾಣಿಸೋಣ

By: ಯು.ಬಿ. ಕಣವಿ,ಗದಗ
Subscribe to Oneindia Kannada

ಬೆಂಗಳೂರು, ಮಾರ್ಚ್ 24 : ಕ್ಷಯರೋಗವೆಂದು ಹೇಳಿದ ತಕ್ಷಣ ಜನರಲ್ಲಿ ಆತಂಕ ಉಂಟಾಗುವ ಕಾಲವೊಂದಿತ್ತು. ಕಾಲ ಬದಲಾದಂತೆ ಚಿಕಿತ್ಸೆ ಪಡೆದರೆ ಕ್ಷಯ ಸಂಪೂರ್ಣವಾಗಿ ಗುಣವಾಗುತ್ತದೆ ಎಂಬ ನಂಬಿಕೆ ಬಂದಿದೆ. ಮಾರ್ಚ 24 ವಿಶ್ವ ಕ್ಷಯರೋಗ ದಿನಾಚರಣೆ. ಆದ್ದರಿಂದ ರೋಗದ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಆರೋಗ್ಯ ಇಲಾಖೆ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ (ಆರ್‌ಎನ್‌ಟಿಸಿಪಿ) ಕಾರ್ಯಕ್ರಮದಡಿ ನಗರ ಮತ್ತು ಗ್ರಾಮೀಣ ಭಾಗದ ಜನರಲ್ಲಿ ಕ್ಷಯರೋಗ ವಾಸಿಯಾಗಬಹುದಾದ ಖಾಯಿಲೆ ಮತ್ತು ಕ್ಷಯರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದರೆ ರೋಗ ಸಂಪೂರ್ಣವಾಗಿ ಗುಣವಾಗುತ್ತದೆ ಎನ್ನುವ ಭರವಸೆ ಮೂಡಿಸಿದೆ.

health

ಕ್ಷಯ ರೋಗದ ಇತಿಹಾಸ : ಸುಮಾರು ದಶಕಗಳ ಹಿಂದೆ ಕ್ಷಯರೋಗವನ್ನು ಸಾವಿನ ನಾಯಕನೆಂದು ಕರೆಯಲಾಗುತ್ತಿತ್ತು. 1882 ರಲ್ಲಿ ರಾಬರ್ಟ ಕಾಕ್ ಅವರು ಕ್ಷಯರೋಗಕ್ಕೆ ಮೈಕೋ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯೂಲೊಸಿಸ್ ಎಂಬ ರೋಗಾಣು ಕಾರಣ ಎಂದು ಪತ್ತೆ ಹಚ್ಚಿದರು.

1950 ರಿಂದ 1960 ಅವಧಿಯಲ್ಲಿ ಟಿಬಿ ರೀಸರ್ಚ್ ಸೆಂಟರ್ ಮತ್ತು ನ್ಯಾಶನಲ್ ಟಿಬಿ ಇನ್ಸ್ಟಿಟ್ಯೂಟ್ ಗಳಲ್ಲಿ ಬಹು ಮುಖ್ಯ ಸಂಶೋಧನೆ ನಡೆಯಿತು. 1962 ರಲ್ಲಿ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ (ಆರ್‌ಎನ್‌ಟಿಸಿಪಿ) ಜಾರಿಗೆ ಬಂದಿತು. ಸುಮಾರು ಮೂರು ದಶಕಗಳ ಕಾಲ ಕಾರ್ಯಕ್ರಮದಲ್ಲಿ ಅಷ್ಟು ಪ್ರಗತಿ ಕಾಣಲಿಲ್ಲ.

1992 ರಲ್ಲಿ ಕಾರ್ಯಕ್ರಮವನ್ನು ಪುನರಾವಲೋಕನ ಮಾಡಲಾಯಿತು. 1993 ರಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾಟ್ಸ್ ಪ್ರಕ್ರಿಯೆಯನ್ನು ಅಳವಡಿಸಲಾಯಿತು. ಡಾಟ್ಸ್ ಪ್ರಕ್ರಿಯೆ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿದ್ದು ಹಂತ ಹಂತವಾಗಿ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು.

ಕ್ಷಯರೋಗ ಎಂದರೇನು? : ಇದು ಮೈಕ್ಯೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯೂಲೋಸಿಸ್ ಎಂಬ ರೋಗಾಣುವಿನಿಂದ ಬರುವ ಒಂದು ಸೋಂಕು ರೋಗ. ಒಬ್ಬ ಕ್ಷಯರೋಗಿ ಕೆಮ್ಮಿದಾಗ ಮತ್ತು ಸೀನಿದಾಗ ಕ್ಷಯರೋಗದ ಕ್ರಿಮಿಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಗಳಿಗೆ ಕ್ಷಯದ ಸೋಂಕನ್ನು ಉಂಟುಮಾಡುತ್ತವೆ.

ಕ್ಷಯರೋಗವಿರುವ ಒಬ್ಬ ವ್ಯಕ್ತಿ ಚಿಕಿತ್ಸೆ ಪಡೆಯದೇ ಇದ್ದರೆ ಒಂದು ವರ್ಷದಲ್ಲಿ ಕನಿಷ್ಠ 10-15 ಜನರಿಗೆ ಕ್ಷಯದ ಸೋಂಕನ್ನು ಹರಡುತ್ತಾನೆ. ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಉದ್ದೇಶ ಕ್ಷಯರೋಗ ಹರಡುವುದನ್ನು ತಡೆಗಟ್ಟಲು ಕ್ಷಯರೋಗಿಗಳನ್ನು ಗುಣಪಡಿಸುವುದು. ರೋಗಿಯ ಅನುಕೂಲಕ್ಕೆ ಸರಿಯಾಗಿ ನೇರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆಯನ್ನು ನಿಗದಿತ ವೇಳೆ ಮತ್ತು ಜಾಗದಲ್ಲಿ ಒದಗಿಸಿಕೊಡುವುದು.

ಶ್ವಾಸಕೋಶ ಕ್ಷಯರೋಗದ ಲಕ್ಷಣಗಳು : ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕಫ ಸಹಿತ ಕೆಮ್ಮು. ಎದೆ ನೋವು. ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು. ಸಂಜೆ ವೇಳೆಯಲ್ಲಿ ಜ್ವರ. ರಾತ್ರಿ ಬೆವರುವಿಕೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ತೂಕ ಕಡಿಮೆಯಾಗುವುದು. ಹಸಿವು ಆಗದೇ ಇರುವುದು.

ಎರಡು ವಿಧದ ಕ್ಷಯ : ಕ್ಷಯ ರೋಗದಲ್ಲಿ ಶ್ವಾಸಕೋಶದ ಕ್ಷಯ. ಶ್ವಾಕೋಶೇತರ ಕ್ಷಯ ಎಂಬ ಎರಡು ವಿಧಗಳಿವೆ.
ಕಫದಲ್ಲಿ ಕ್ರಮಿಗಳಿರುವುದನ್ನು ಶ್ವಾಸಕೋಶದಕ್ಷಯ ಎನ್ನುತ್ತಾರೆ. ಶ್ವಾಸಕೋಶದ ಕ್ಷಯ ರೋಗ ಪತ್ತೆ ಹೆಚ್ಚಲು ಎರಡು ಬಾರಿ ಕಫ ಪರೀಕ್ಷೆ ಮಾಡಲಾಗುತ್ತದೆ.

ಎರಡು ರೀತಿಯ ಔಷಧಿ ಪೆಟ್ಟಿಗೆಗಳು : ಕ್ಷಯ ರೋಗಕ್ಕೆ ಎರಡು ರೀತಿಯ ಔಷಧಿ ಪೆಟ್ಟಿಗೆಗಳಿವೆ. ಕೆಂಪು : ಹೊಸ ರೋಗಿಗಳಿಗೆ, ನೀಲಿ : ಹಿಂದೆ ಚಿಕಿತ್ಸೆ ಪಡೆದ ರೋಗಿಗಗಳಿದೆ. ಹೀಗೆ ಎರಡು ಹಂತಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮುಖ್ಯವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ರೋಗದ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
March 24 World Tuberculosis (TB) Day. TB day is an annual event to build public awareness about the global epidemic of tuberculosis (TB). TB is a disease that are spread through the air from person to person. Here are facts about TB you must know.
Please Wait while comments are loading...