ಬಿಎಸ್ಎನ್ಎಲ್ ಪ್ರಕರಣ: ಮಾರನ್ ಸಹೋದರರಿಗೆ ಕ್ಲೀನ್ ಚಿಟ್

Subscribe to Oneindia Kannada

ನವದೆಹಲಿ, ಮಾರ್ಚ್ 14: ಬಿಎಸ್ಎನ್ಎಲ್ ಅಕ್ರಮ ಟೆಲಿಫೋನ್ ವರ್ಗಾವಣೆ ಪ್ರಕರಣದಲ್ಲಿ ಮಾರನ್ ಸಹೋದರರು ಮತ್ತು ಐವರು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹಗರಣಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯಗಳಿಲ್ಲ ಎಂದು ಹೇಳಿ ಮಾಜಿ ಟೆಲಿಕಾಮ್ ಸಚಿವ ದಯಾನಿಧಿ ಮಾರನ್ ಮತ್ತು ಅವರ ಸಹೋದರ ಕಲಾನಿಧಿ ಮಾರನ್ ಸೇರಿ 7 ಜನರನ್ನು ಸಿಬಿಐ ನ್ಯಾಯಾಲಯದ ನ್ಯಾಯಧೀಶ ನಟರಾಜನ್ ದೋಷಮುಕ್ತಗೊಳಿಸಿದ್ದಾರೆ.

Maran brothers acquitted in BSNL illegal telephone exchange case

ಇದೇ ವರ್ಷದ ಫೆಬ್ರವರಿಯಲ್ಲಿ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ದಯಾನಿಧಿ ಮಾರನ್, ಕಲಾನಿಧಿ ಮಾರನ್ ಮತ್ತು ಇತರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿದ್ದರು. ತಮ್ಮ ಕಕ್ಷಿದಾರರು ನಿಯತ್ತಿನವರಾಗಿದ್ದು ಯಾವುದೇ ನಷ್ಟ ಉಂಟು ಮಾಡಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ಆದರೆ ಇದನ್ನು ಸಿಬಿಐ ವಿರೋಧಿಸಿತ್ತು. ಮತ್ತು ಪೂರಕ ಸಾಕ್ಷ್ಯಗಳಿವೆ ಎಂದು ಹೇಳಿತ್ತು.
ಸನ್ ಟಿವಿ ಅಪ್ಲಿಂಕ್ ಡಾಟಾಕ್ಕಾಗಿ ಅಕ್ರಮವಾಗಿ ದಯಾನಿಧಿ ಮಾರನ್ ತಮ್ಮ ಮನೆಯಲ್ಲಿ 764 ಫೋನ್ ಗಳ ಖಾಸಗಿ ಎಕ್ಸ್ ಚೇಂಜ್ ಸ್ಥಾಪಿಸಿ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತುಎಂಟಿಎನ್ಎಲ್ ಗೆ 1.78 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪ್ರಕರಣದಲ್ಲಿ 7 ಜನರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BSNL illegal telephone exchange case: Kalanithi Maran, Dayanidhi Maran and five others have been discharged by CBI court from the case today. Court said the prosecution failed to prove the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ