ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?

Recommended Video

      ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ನರೇಂದ್ರ ಮೋದಿ ಹತ್ಯೆಗೆ ಮಾವೋವಾದಿಗಳ ಸಂಚು | Oneidnia kannada

      ನವದೆಹಲಿ, ಜೂನ್ 8: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಸ್ವರೂಪದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ನಡೆಸಲು ಮಾವೊವಾದಿಗಳು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

      ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋಗಳನ್ನು ಗುರಿಯಾಗಿಟ್ಟುಕೊಂಡು ರಾಜೀವ್ ಅವರ ಹತ್ಯೆ ನಡೆದ ಮಾದರಿಯಲ್ಲಿಯೇ ಆತ್ಮಾಹತಿ ದಾಳಿ ನಡೆಸಿ ಮೋದಿ ಅವರ ಹತ್ಯೆ ನಡೆಸಲು ಮಾವೊವಾದಿಗಳು ಸಿದ್ಧತೆ ನಡೆಸಿದ್ದರು ಎಂದು ತಿಳಿದುಬಂದಿದೆ.

      ಪುಣೆ ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡ ಪತ್ರವೊಂದರಿಂದ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮಾವೊ ಮುಖಂಡ ಕಿಶನ್ ಈ ಪತ್ರ ಬರೆದಿದ್ದಾನೆ ಎನ್ನಲಾಗಿದೆ.

      2017ರ ಡಿಸೆಂಬರ್ 31ರಂದು ಪುಣೆಯ ಭೀಮಾ ಕೊರೆಗಾಂವ್‌ನಲ್ಲಿ ನಡೆದ ನಡೆದ ಜಾತಿ ವಿಚಾರದ ದೊಂಬಿ ಪ್ರಕರಣದಲ್ಲಿ 'ಎಲ್ಗರ್ ಪರಿಷದ್' ಸಂಘಟನೆಯ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದರು.

      ಐವರ ಪೈಕಿ ಒಬ್ಬಾತನ ಮನೆಯಲ್ಲಿ ವಶಪಡಿಸಿಕೊಳ್ಳಲಾದ ರಾಜೀವ್ ಹತ್ಯೆಯ ಮಾದರಿಯ ಮತ್ತೊಂದು ದಾಳಿಯ ಸುಳಿವು ದೊರೆತಿದೆ.

      maoists planned to kill prime minister modi

      ಮೋದಿ ಅವರು 15 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಮಾವೊವಾದಿ ಸಂಘಟನೆಗಳಿಗೆ ಎಲ್ಲ ರೀತಿಯಿಂದಲೂ ಭಾರಿ ಹೊಡೆತ ಬೀಳಲಿದೆ.

      ಈ ಕಾರಣಗಳಿಂದ ಅವರು ಮತ್ತೊಂದು ರಾಜೀವ್ ಗಾಂಧಿ ಹತ್ಯೆ ಮಾದರಿಯ ಸಂಚು ರೂಪಿಸಿದ್ದರು. ಮೋದಿ ಅವರ ರೋಡ್‌ ಶೋಗಳನ್ನು ಗುರಿಯನ್ನಾಗಿಸುವುದು ಪರಿಣಾಮಕಾರಿ ತಂತ್ರವೆಂದು ಅವರು ಚಿಂತನೆ ನಡೆಸಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+