ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ, ಪಶ್ಚಿಮ ಭಾರತದಲ್ಲಿ ರಾತ್ರಿ ವೇಳೆ ದಾಖಲಾಗುತ್ತಿದೆ ಅತ್ಯಧಿಕ ತಾಪಮಾನ

|
Google Oneindia Kannada News

ನವದೆಹಲಿ,ಫೆಬ್ರವರಿ 19: ದೇಶಾದ್ಯಂತ ಚಳಿ ಮುಂದುವರೆದಿದ್ದರೂ ಕೂಡ ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ರಾತ್ರಿಹೊತ್ತು ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಫೆಬ್ರವರಿ 22ರವರೆಗೆ ಉತ್ತರ ಭಾರತ,ಮಧ್ಯ ಭಾರತ ಹಾಗೂ ಪೂರ್ವ ಭಾರತದ ಕೆಲವು ಭಾಗಗಳಲ್ಲಿ ರಾತ್ರಿ ಸಂದರ್ಭದಲ್ಲಿ ಬೆಚ್ಚಗಿನ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ(ಫೆ.18) ದೆಹಲಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಇದು ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿತ್ತು.ಮತ್ತು ಕನಿಷ್ಠ ಉಷ್ಣಾಂಶ 9.6 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಇದು ಸಾಮಾನ್ಯಕ್ಕಿಂತ ಒಂದು ಡಿಗ್ರಿಯಷ್ಟು ಹೆಚ್ಚಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು ಗಾಳಿ ಸಹಿತ ಅಕಾಲಿಕ ಮಳೆಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು ಗಾಳಿ ಸಹಿತ ಅಕಾಲಿಕ ಮಳೆ

ಅಮೃತಸರದಲ್ಲಿ 22 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 10.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇದು ಸಾಮಾನ್ಯಕ್ಕಿಂತ 3 ಡಿಗ್ರಿಯಷ್ಟು ಹೆಚ್ಚು. ಅಹಮದಾಬಾದ್ ನಲ್ಲಿ ಗರಿಷ್ಠ ತಾಪಮಾನ 33.2 ಡಿಗ್ರಿ ಸೆಲ್ಸಿಯಸ್, ಇದು ಸಾಮಾನ್ಯಕ್ಕಿಂತ 2 ಡಿಗ್ರಿಯಷ್ಟು, ಮತ್ತು ಕನಿಷ್ಠ 17.8 ಡಿಗ್ರಿ ಸೆಲ್ಸಿಯಸ್ ಇದು ಸಾಮಾನ್ಯಕ್ಕಿಂತ 3ಡಿಗ್ರಿಯಷ್ಟು ಹೆಚ್ಚಿದೆ.

ಕನಿಷ್ಠ ತಾಮಾನದಲ್ಲಿ ಹೆಚ್ಚಳ

ಕನಿಷ್ಠ ತಾಮಾನದಲ್ಲಿ ಹೆಚ್ಚಳ

ಗುಜರಾತ್,ಜಮ್ಮು ಮತ್ತು ಕಾಶ್ಮೀರ, ಮಧ್ಯ ಹಾಗೂ ಪೂರ್ವ ಭಾರತದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನ 2 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇವು ಭಾರತದ ಉಳಿದ ಭಾಗಗಳಿಗಿಂತ ಸಾಮಾನ್ಯ ಅಥವಾ ಸ್ವಲ್ಪ ಕಡಿಮೆ ಉಷ್ಣಾಂಶವಾಗಿದೆ.

ಹರ್ಯಾಣ,ಪಂಜಾಬ್‌ನಲ್ಲಿ ದಟ್ಟ ಮಂಜುಕವಿದ ವಾತಾವರಣ

ಹರ್ಯಾಣ,ಪಂಜಾಬ್‌ನಲ್ಲಿ ದಟ್ಟ ಮಂಜುಕವಿದ ವಾತಾವರಣ

ಪಂಜಾಬ್‌ನ ವಾಯುವ್ಯ ಭಾಗ, ರಾಜಸ್ಥಾನ,ಹರ್ಯಾಣ,ಚಂಡೀಗಢ ಹಾಗೂ ದೆಹಲಿಯ ಕೆಲವು ಭಾಗಗಳಲ್ಲಿ ಶುಕ್ರವಾರ ದಟ್ಟ ಮಂಜು ಕಂಡುಬಂದಿದೆ. ಅಮೃತಸರ,ಪಟಿಯಾಲ ಮತ್ತು ಗಂಗನಗರದಲ್ಲಿ 25 ಮೀಟರ್‌ಗಿಂತ ಕಡಿಮೆ ಗೋಚರತೆಯನ್ನು ದಾಖಲಿಸಿದೆ. ಫೆಬ್ರವರಿ 18 ರಿಂದ ಮಾರ್ಚ್ 3ರವರೆಗೆ ರಾಜಸ್ಥಾನದ ಪಶ್ಚಿಮ ಭಾಗಗಳನ್ನು ಹೊರತುಪಡಿಸಿ ವಾಯುವ್ಯ ,ಮಧ್ಯ ಭಾರತ, ಈಶಾನ್ಯ ರಾಜ್ಯಗಳಲ್ಲಿ ಉಷ್ಣಾಂಶ ಕಡಿಮೆ ಇರಲಿದೆ.

ದೇಶದ ಯಾವ್ಯಾವ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ

ದೇಶದ ಯಾವ್ಯಾವ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ

ಮುಂದಿನ 24 ಗಂಟೆಗಳಲ್ಲಿ ಮಶ್ಚಿಮ ಮಧ್ಯಪ್ರದೇಶ,ವಿದರ್ಭ,ಮರಾಠವಾಡ ಮತ್ತು ಮಧ್ಯ ಮಹಾರಾಷ್ಟ್ರಗಳಲ್ಲಿ ಗುಡುಗು,ಮಿಂಚು ಹಾಗೂ ಆಲಿಕಲ್ಲು ಮಳೆ ಸುರಿಯುವ ಸಾಧ್ಯತೆಗಳಿವೆ.

ಉತ್ತರಾಖಂಡ್ ಪರಿಸ್ಥಿತಿ ಹೇಗಿದೆ?

ಉತ್ತರಾಖಂಡ್ ಪರಿಸ್ಥಿತಿ ಹೇಗಿದೆ?

ಉತ್ತರಾಖಂಡ್‌ನಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಬರುವ ಸಾಧ್ಯತೆ ಇದೆ. ಹಿಮಪಾತವೂ ಮುಂದುವರೆಯುವ ಎಲ್ಲಾ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಎಚ್ಚರಿಕೆ ಸಂದೇಶ ರವಾನಿಸಿದೆ.

English summary
Many parts of north and west India have been recording warmer nights for the past few days, according to India Meteorological Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X