ಗುಜರಾತಿನಲ್ಲಿ ಚರಂಡಿಗೆ ಉರುಳಿದ ಲಾರಿ: 26 ಜನ ದುರ್ಮರಣ
ಭಾವ್ನಗರ್, ಮಾರ್ಚ್ 06: ಲಾರಿಯೊಂದು ಸ್ಕಿಡ್ ಆಗಿ ಬೃಹತ್ ಚರಂಡಿಗೆ ಬಿದ್ದ ಪರಿಣಾಮ 26 ಜನ ಸಾವಿಗೀಡಾದ ದಾರುಣ ಘಟನೆ ಗುಜರಾತಿನ ಭಾವ್ನಗರದಲ್ಲಿ ನಡೆದಿದೆ.
ಭಾವ್ನಗರದ ರಂಘೋಲಾದ ರಾಜ್ ಕೋಟ್-ಭಾವ್ನಗರ ಹೆದ್ದಾರಿಯಲ್ಲಿ ಇಂದು(ಮಾ.6) ಬೆಳಿಗ್ಗೆ ಈ ದುರ್ಘಟನೆ ನಡೆದಿದೆ. ಲಾರಿಯಲ್ಲಿದ್ದವರೆಲ್ಲ ಮದುವೆ ಸಮಾರಂಭವೊಂದನ್ನು ಮುಗಿಸಿ ವಾಪಸ್ಸಾಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
#UPDATE: Total 26 people dead, 12 injured after a truck they were travelling in fell into a drain in Bhavnagar, says Police #Gujarat
— ANI (@ANI) March 6, 2018
ಗಾಯಗೊಂಡ 12 ಜನರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಆಗಮಿಸಿರುವ ಪೊಲಿಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications