ಪುಲ್ವಮಾ ದಾಳಿ : ಹುತಾತ್ಮ ಸೈನಿಕರ ಸ್ಮರಣೆಗಾಗಿ ರಾಷ್ಟ್ರೀಯ ಸ್ಮಾರಕ

ಬೆಂಗಳೂರು, ಫೆಬ್ರವರಿ 24 : 'ಪುಲ್ವಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ನೆನಪಿಗಾಗಿ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಲಾಗುತ್ತದೆ' ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ 53ನೇ ಮನ್‌ ಕೀ ಬಾತ್ ತಿಂಗಳ ರೆಡಿಯೋ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಪುಲ್ವಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಬಲಿದಾನವನ್ನು ಮೋದಿ ನೆನಪಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.

'ನವದೆಹಲಿಯ ಇಂಡಿಯಾ ಗೇಟ್ ಬಳಿ ಹೊಸ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತದೆ. ಸ್ಮಾರಕದಲ್ಲಿನ ಗೋಡೆಯ ಮೇಲೆ ಹುತಾತ್ಮರಾದ ಎಲ್ಲಾ ಸೈನಿಕರ ಹೆಸರುಗಳನ್ನು ಬರೆಯಲಾಗುತ್ತದೆ' ಎಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಘೋಷಣೆ ಮಾಡಿದರು.

'10 ದಿನಗಳ ಹಿಂದೆ ಭಾರತ ಮಾತೆ ಧೈರ್ಯಶಾಲಿ ಮಕ್ಕಳನ್ನು ಕಳೆದುಕೊಂಡಳು. ದೇಶಾದ್ಯಂತ ಜನರು ಆಕ್ರೋಶಗೊಂಡರು. ಯೋಧರ ಪರವಾಗಿ ಜನರು ನಿಂತರು. ಹುತಾತ್ಮ ಯೋಧರ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಮ್ಮ ಯೋಧರು ಉಗ್ರರಿಗೆ ಅವರ ಭಾಷೆಯಲ್ಲಿಯೇ ತಕ್ಕ ಉತ್ತರ ನೀಡಿದರು' ಎಂದು ಮೋದಿ ಯೋಧರ ಶೌರ್ಯವನ್ನು ಶ್ಲಾಘಿಸಿದರು..

ಹೃದಯ ಭಾರವಾಗಿದೆ

ಹೃದಯ ಭಾರವಾಗಿದೆ

'ಇಂದು ಭಾರವಾದ ಹೃದಯದೊಂದಿಗೆ ನಾನು ಮನ್ ಕೀ ಬಾತ್ ಆರಂಭಿಸುತ್ತಿದ್ದೇನೆ. 10 ದಿನಗಳ ಹಿಂದೆ ಭಾರತ ಮಾತೆ ವೀರ ಮಕ್ಕಳನ್ನು ಕಳೆದುಕೊಂಡಳು. ಯೋಧರು ದೇಶದ 125 ಕೋಟಿ ಜನರನ್ನು ರಕ್ಷಣೆ ಮಾಡಲು ತಮ್ಮ ಜೀವವನ್ನು ತ್ಯಾಗ ಮಾಡಿದರು' ಎಂದು ಮೋದಿ ಹೇಳಿದರು.

ರಾಷ್ಟ್ರೀಯ ಸ್ಮಾರಕ ನಿರ್ಮಾಣ

ರಾಷ್ಟ್ರೀಯ ಸ್ಮಾರಕ ನಿರ್ಮಾಣ

'ನವದೆಹಲಿಯಲ್ಲಿ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತದೆ. ಸ್ಮಾರಕದಲ್ಲಿನ ಗೋಡೆಗಳ ಮೇಲೆ ಹುತಾತ್ಮರಾದ ಎಲ್ಲಾ ಸೈನಿಕರ ಹೆಸರುಗಳನ್ನು ಬರೆಯಲಾಗುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉಗ್ರವಾದವನ್ನು ತೊಲಗಿಸಿ

ಉಗ್ರವಾದವನ್ನು ತೊಲಗಿಸಿ

'ತಾಯಿ ನೆಲಕ್ಕಾಗಿ ತಮ್ಮ ಜೀವವನ್ನು ಅರ್ಪಿಸಿದ ಸೈನಿಕರಿಗೆ ನಾನು ನಮನವನ್ನು ಸಲ್ಲಿಸುತ್ತೇನೆ. ಯೋಧರ ತ್ಯಾಗ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂಬ ನಮ್ಮ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿದೆ' ಎಂದು ಮೋದಿ ಹೇಳಿದರು.

ತಕ್ಕ ಉತ್ತರವನ್ನು ನೀಡಿದ್ದಾರೆ

ತಕ್ಕ ಉತ್ತರವನ್ನು ನೀಡಿದ್ದಾರೆ

'ನಮ್ಮ ಯೋಧರು ಸಾಹಸ, ಶೌರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಶಾಂತಿ ನೆಲೆಸುವಂತೆ ಅವರು ತಕ್ಷಣ ಕಾರ್ಯ ನಿರ್ವಹಿಸಿದ್ದಾರೆ. ಮತ್ತೊಂದು ಕಡೆ ಉಗ್ರರಿಗೆ ಅವರ ಭಾಷೆಯಲ್ಲಿಯೇ ತಕ್ಕ ಉತ್ತರವನ್ನು ನೀಡಿದ್ದಾರೆ' ಎಂದು ಮೋದಿ ಹೇಳಿದರು.

ಮೋದಿ ಪೂರ್ಣ ಭಾಷಣ ಕೇಳಿ

53ನೇ ಮನ್‌ ಕೀ ಬಾತ್ ತಿಂಗಳ ರೆಡಿಯೋ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಭಾಷಣದ ಪೂರ್ಣ ಪಾಠ ಇಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+