ಮೋದಿ ವಿರುದ್ಧ ಅನಾಗರಿಕ ಪದ ಬಳಕೆ, ವಿವಾದದಲ್ಲಿ ಮನೀಷ್ ತಿವಾರಿ
ನವದೆಹಲಿ, ಸೆಪ್ಟೆಂಬರ್ 18: ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಅನಾಗರಿಕ ಪದ ಬಳಕೆ ಮಾಡಿ ವಿವಾದದಲ್ಲಿ ಸಿಲುಕಿದ್ದಾರೆ.
ಆದರೆ ತಾವು ಕ್ಷಮೆ ಕೇಳಲು ಸಿದ್ದ ಎಂದಿರುವ ಮನೀಷ್ ತಿವಾರಿ ಇದಕ್ಕೆ ಷರತ್ತು ವಿಧಿಸಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿವವರನ್ನು ಪ್ರಧಾನಿ ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಬೇಕು. ಆಗ ಮಾತ್ರ ತಾವು ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಮನೀಷ್ ತಿವಾರಿ, ಪ್ರಧಾನಿ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. "ಮಹಾತ್ಮಾ ಗಾಂಧಿಯಿಂದಲೂ ಮೋದಿಗೆ ದೇಶ ಭಕ್ತಿ ಪಾಠ ಮಾಡಲು ಸಾಧ್ಯವಿಲ್ಲ," ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದರು.
ವಿದೇಶದಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಾಗಲೇ ಪ್ರಧಾನಿ ನಡೆದು ಹೋಗುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದ ಮನೀಷ್ ತಿವಾರಿ ಹಿಂದಿಯ ನುಡಿಗಟ್ಟನ್ನು ತಮ್ಮ ಟ್ವೀಟ್ ನಲ್ಲಿ ಬಳಸಿದ್ದರು. ಇದೇ ರೀತಿಯ ಟ್ವೀಟನ್ನು ಮೊನ್ನೆಯಷ್ಟೇ ದಿಗ್ವಿಜಯ್ ಸಿಂಗ್ ಮಾಡಿ ವಿವಾದದಲ್ಲಿ ಸಿಲುಕಿದ್ದರು.
ಇದೀಗ ತಾವು ಕ್ಷಮೆ ಕೇಳಲು ಸಿದ್ದವಾಗಿದ್ದೇನೆ ಎಂದು ಹೇಳಿರುವ ಮನೀಷ್ ತಿವಾರಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರನ್ನು ಪ್ರಧಾನಿ ಅನ್ ಫಾಲೋ ಮಾಡುತ್ತಾರೋ ಎಂದು ಸರಣಿ ಟ್ವೀಟ್ ಗಳಲ್ಲಿ ಪ್ರಶ್ನೆ ಎತ್ತಿದ್ದಾರೆ.
Willing to apologise for using a 'colloquial' Hindi phraseHowever will PM promise to unfollow those who heap unmentionable abuse on women???
— Manish Tewari (@ManishTewari) September 17, 2017












Click it and Unblock the Notifications