• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧ್ವನಿಮತದ ಮೂಲಕ ವಿಶ್ವಾಸಮತ ಗೆದ್ದ ಮಣಿಪುರದ ಬಿರೇನ್

|

ಇಂಫಾಲ, ಆ. 11: ಬಿಜೆಪಿ ಬೆಂಬಲಿತ ಶಾಸಕರ ರಾಜೀನಾಮೆ, ಅಲ್ಪಮತಕ್ಕೆ ಕುಸಿದಿದ್ದ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದಿಂದ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ, ರಿವರ್ಸ್ ಆಪರೇಷನ್ ಕಮಲ ಮೂಲಕ ಮತ್ತೆ ಅಧಿಕಾರಕ್ಕೇರಲು ಯತ್ನಿಸಿದ್ದು ಎಲ್ಲಾ ರಾಜಕೀಯ ಬೆಳವಣಿಗೆ ನಡುವೆ ಬಿರೇನ್ ಸಿಂಗ್ ಅವರು ತಮ್ಮ ಸರ್ಕಾರವನ್ನು ಉಳಿಸಿಕೊಂಡಿದ್ದಾರೆ.

   Mumbai ಮಳೆಯಲ್ಲಿ ರಸ್ತೆ ನಡುವೆ ನಿಂತು ಮಾನವೀಯತೆ ಮೆರೆದ ಮಹಿಳೆ | Oneindia Kannada

   ಬೆಂಬಲ ಹಿಂಪಡೆದಿದ್ದ ಮಿತ್ರ ಪಕ್ಷ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ನಾಲ್ವರು ಶಾಸಕರು ಮಣಿಪುರದ ಬಿಜೆಪಿ ಸರ್ಕಾರಕ್ಕೆ ಮತ್ತೆ ಬೆಂಬಲ ನೀಡಿದ್ದು ಗೊತ್ತಿರಬಹುದು. ಈಗ ಸಿಎಂ ಎನ್ ಬಿರೇನ್ ಸಿಂಗ್ ಅವರು ಸೋಮವಾರದಂದು ಸದನದಲ್ಲಿ ವಿಶ್ವಾಸಮತಯಾಚಿಸಿದರು. ಧ್ವನಿಮತದ ಮೂಲಕ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದರು. 8 ಮಂದಿ ಕಾಂಗ್ರೆಸ್ ಶಾಸಕರು ವಿಶೇಷ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು. ಕಳೆದ ಶುಕ್ರವಾರವೇ ವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆ ಮಾಡಲಾಗಿತ್ತು.

   ಮಣಿಪುರ ಮತ್ತೆ ಬಿಜೆಪಿ ವಶಕ್ಕೆ, ಅಮಿತ್ ಶಾ ಸಂಧಾನ ಸಫಲ

   ''ನಾವು ಧ್ವನಿಮತದ ಮೂಲಕ ವಿಶ್ವಾಸ ಮತ ಗೆದ್ದಿದ್ದೇವೆ. ಸದನದ ನಿಯಮಾವಳಿಗೆ ಅನುಗುಣವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ. ವಿಪಕ್ಷ ಶಾಸಕರ ಹಾಜರಾತಿ ಸಂಖ್ಯೆ ಕಡಿಮೆಯಿತ್ತು'' ಎಂದು ಸಿಎಂ ಬಿರೇನ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ.

   ಬಿಜೆಪಿ ಸರ್ಕಾರದಲ್ಲಿ ಸಂಖ್ಯಾಬಲ ಕುಸಿದಿತ್ತು

   ಬಿಜೆಪಿ ಸರ್ಕಾರದಲ್ಲಿ ಸಂಖ್ಯಾಬಲ ಕುಸಿದಿತ್ತು

   ಎನ್ ಪಿಪಿ ಬೆಂಬಲ ಹಿಂಪಡೆದಿದ್ದು, ಇದರ ಬೆನ್ನಲ್ಲೇ ಟಿಎಂಸಿ ಹಾಗೂ ಪಕ್ಷೇತರ ಶಾಸಕ ಕೂಡಾ ಹಿಂದಕ್ಕೆ ಬಿಜೆಪಿ ಸರ್ಕಾರದಿಂದ ಹೊರ ನಡೆದಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರದಲ್ಲಿ ಸಂಖ್ಯಾಬಲ 23ಕ್ಕೆ ಕುಸಿದಿದೆ. ಈ ನಡುವೆ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಓ ಐಬೊಬಿ ಸಿಂಗ್ ಅವರು ಮುಖ್ಯಮಂತ್ರಿಯಾಗಲು ಮುಂದಾಗಿದ್ದರು. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ

   2017ರ ವಿಧಾನಸಭೆ ಚುನಾವಣೆ ಫಲಿತಾಂಶ

   2017ರ ವಿಧಾನಸಭೆ ಚುನಾವಣೆ ಫಲಿತಾಂಶ

   2017ರ ವಿಧಾನಸಭೆ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 28 ಸ್ಥಾನ ಪಡೆದು ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷ ಎನಿಸಿಕೊಂಡಿತ್ತು. ಬಿಜೆಪಿ 21 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಗಿತ್ತು.

   ಆದರೆ, ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ), ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಹಾಗೂ ಲೋಕ್ ಜನಸಕ್ತಿ ಪಾರ್ಟಿ (ಎಲ್ ಜೆಪಿ) ಬೆಂಬಲದಿಂದ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿಯ ಸ್ಥಾಪಿಸಿತು. ಬಿರೇನ್ ಸಿಂಗ್ ಮುಖ್ಯಮಂತ್ರಿಯಾದರು. ಒಬ್ಬ ಪಕ್ಷೇತರ ಹಾಗೂ ಟಿಎಂಸಿ ಶಾಸಕ ಕೂಡಾ ಬಿಜೆಪಿ ಬೆಂಬಲಕ್ಕೆ ನಿಂತಿದ್ದರು.

   ವಿಪಕ್ಷ ನಾಯಕರು ಧ್ವನಿಮತ ಒಪ್ಪುತ್ತಿಲ್ಲ

   ವಿಪಕ್ಷ ನಾಯಕರು ಧ್ವನಿಮತ ಒಪ್ಪುತ್ತಿಲ್ಲ

   ಧ್ವನಿಮತದ ಮೂಲಕ ವಿಶ್ವಾಸಮತ ಗೆದ್ದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಮತಗಳ ಡಿವಿಷನ್ ಆಗಬೇಕು ಎಂದು ನಾವು ಆಗ್ರಹಿಸುತ್ತೇವೆ. ಆದರೆ, ಮಣಿಪುರದಲ್ಲಿ ಈ ಕುರಿತಂತೆ ಸೂಕ್ತ ಕಾನೂನು ಇಲ್ಲ. ಆಡಳಿತ ಪಕ್ಷ ಗೆಲುವು ಸಾಧಿಸಿದ್ದರೂ ಜನರ ಅಭಿಮತ ಸರ್ಕಾರದ ವಿರುದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಐಬೊಬಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

   ಕಾಂಗ್ರೆಸ್ ಶಾಸಕರು ಗೈರು ಹಾಜರಿಯಾಗಿದ್ದು ಏಕೆ?

   ಕಾಂಗ್ರೆಸ್ ಶಾಸಕರು ಗೈರು ಹಾಜರಿಯಾಗಿದ್ದು ಏಕೆ?

   ಬಿಜೆಪಿ ಸರ್ಕಾರ ವಿಶ್ವಾಸಮತ ಪಡೆದು ಉಳಿಯುವುದು ನಿರೀಕ್ಷಿತವಾಗಿದ್ದರೂ ಕಾಂಗ್ರೆಸ್ ಶಾಸಕರು ಗೈರಾಗಿದ್ದು ಅನಿರೀಕ್ಷಿತವಾಗಿತ್ತು. 8 ಮಂದಿ ಕಾಂಗ್ರೆಸ್ ಶಾಸಕರು ಗೈರು ಆಗಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. 60 ಮಂದಿ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 21, ಕಾಂಗ್ರೆಸ್ ಬಂಡಾಯ 7 ಮಂದಿ ಶಾಸಕರು, ಎನ್ಪಿಪಿ ಹಾಗೂ ಎನ್ ಪಿಎಫ್ ನ ತಲಾ 4 ಮಂದಿ ಬೆಂಬಲ ಬಿಜೆಪಿಗೆ ಸಿಕ್ಕಿದೆ. ಕಾಂಗ್ರೆಸ್ ಶಾಸಕರ ಬಲ 20ಕ್ಕೆ ಕುಸಿದಿದೆ.

   English summary
   Manipur CM N Biren Singh won the confidence motion via voice vote on Monday, after eight Congress MLAs surprisingly skipped the day-long special Assembly session.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X