ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ ಚುನಾವಣೆ: 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಫೆಬ್ರವರಿ 14: ಮಾರ್ಚ್ 5ರಂದು ನಡೆಯಲಿರುವ ಎರಡನೇ ಹಂತದ ಮಣಿಪುರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಬಿಡುಗಡೆ ಮಾಡಿದೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಮಾಜಿ ಸಿಎಂ ಒಕ್ರಾಮ್ ಇಬೋಬಿ ಸಿಂಗ್ ಮತ್ತು ಕನ್ಹಯ್ಯ ಕುಮಾರ್ ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ.

ಟಿಕೆಟ್ ರಾಜಕೀಯ: ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆಗೆ ಆಕಾಂಕ್ಷಿಗಳುಟಿಕೆಟ್ ರಾಜಕೀಯ: ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆಗೆ ಆಕಾಂಕ್ಷಿಗಳು

ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ನಡೆಯಲಿದೆ. ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಎಣಿಕೆ ಕಾರ್ಯ ನಡೆಯಲಿದೆ.

Manipur Assembly Election 2022: Congress Releases List of 30 Star Campaigners

ಏತನ್ಮಧ್ಯೆ, ಭಾನುವಾರ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಕೆ.ದೇವಬ್ರತ ಸಿಂಗ್ ಅವರು ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕಾಂಗ್ರೆಸ್ ಐದು ಪಕ್ಷಗಳಾದ ಸಿಪಿಐ, ಸಿಪಿಎಂ, ಫಾರ್ವರ್ಡ್ ಬ್ಲಾಕ್, ಆರ್‌ಎಸ್‌ಪಿ ಮತ್ತು ಜೆಡಿ(ಎಸ್) ಜೊತೆಗೆ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಈ ಮೈತ್ರಿಕೂಟವನ್ನು ಪ್ರಗತಿಪರ ಜಾತ್ಯತೀತ ಒಕ್ಕೂಟ (MPSA) ಎಂದು ಹೆಸರಿಸಲಾಗಿದೆ.

ಮಣಿಪುರ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ
ಮಣಿಪುರ ವಿಧಾನಸಭೆ ಚುನಾವಣೆ ದಿನಾಂಕಗಳನ್ನು ಪರಿಷ್ಕರಿಸಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರದಂದು ಪ್ರಕಟಣೆ ಹೊರಡಿಸಿದೆ. ಇದಕ್ಕೂ ಮೊದಲು ಮೊದಲ ಹಂತದ ಚುನಾವಣೆ ಫೆಬ್ರವರಿ 27ಕ್ಕೆ ನಿಗದಿಯಾಗಿತ್ತು, ಈಗ ಬದಲು ಫೆಬ್ರವರಿ 28 ರಂದು ಮತ್ತು ಎರಡನೇ ಹಂತದ ಮತದಾನ ಮಾರ್ಚ್ 3 ರ ಬದಲು ಮಾರ್ಚ್ 5 ರಂದು ನಡೆಯಲಿದೆ.

ಈ ನಿರ್ಧಾರವು ಒಳಹರಿವು, ಪ್ರಾತಿನಿಧ್ಯಗಳು, ಹಿಂದಿನ ಪೂರ್ವನಿದರ್ಶನ, ಲಾಜಿಸ್ಟಿಕ್ಸ್, ನೆಲದ ಸನ್ನಿವೇಶಗಳು ಮತ್ತು "ವಿಷಯದ ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳನ್ನು" ಆಧರಿಸಿದೆ ಎಂದು ಚುನಾವಣೆ ಆಯೋಗ ಹೇಳಿದೆ.

ಈ ಹಿಂದೆ, ಆಲ್-ಮಣಿಪುರ ಕ್ರಿಶ್ಚಿಯನ್ ಆರ್ಗನೈಸೇಶನ್ (AMCO) ವಿಧಾನಸಭೆ ಚುನಾವಣೆಯ ಮೊದಲ ಹಂತದ ವೇಳಾಪಟ್ಟಿಯನ್ನು ಮರುಹೊಂದಿಸಲು ECI ಗೆ ಕೇಳಿಕೊಂಡಿತ್ತು. "ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಒಗ್ಗಟ್ಟು ಮತ್ತು ಗೌರವವನ್ನು ತೋರಿಸಲು ಮೊದಲ ಹಂತದ ಮತದಾನದ ದಿನಾಂಕವನ್ನು ಮರು ನಿಗದಿಪಡಿಸುವಂತೆ ನಾವು ಚುನಾವಣಾ ಆಯೋಗಕ್ಕೆ ಶ್ರದ್ಧೆಯಿಂದ ಮನವಿ ಮಾಡುತ್ತೇವೆ" ಎಂದು AMCO ಹೇಳಿಕೆಯಲ್ಲಿ ತಿಳಿಸಿದೆ. ನಂತರ, (AMCO) ನಾಯಕರು ದಿನಾಂಕವನ್ನು ಬದಲಾಯಿಸಲು ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಮನವಿ ಸಲ್ಲಿಸಿದ್ದರು.

English summary
On Monday, Congress released a list of 30 star campaigners ahead of the second phase of the Manipur assembly elections on March 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X