Tirupati: ದಾಂಪತ್ಯ ಜೀವನಕ್ಕೆ ಕಾಲಿಡುವಿರಾ? ತಿರುಪತಿಯಲ್ಲಿ ಸಿಗುತ್ತೆ ಮಂಗಳಸೂತ್ರ

ಶ್ರೀವಾರಿ ಭಕ್ತರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಭಕ್ತರಿಗಾಗಿ ಮಂಗಳಸೂತ್ರಗಳನ್ನು ಮಾರಾಟ ಮಾಡಲು ತಿರುಮಲ ತಿರುಪತಿ ಟ್ರಸ್ಟ್ ನಿರ್ಧಾರ ಮಾಡಿದೆ.

ವಿಜಯವಾಡ ದುರ್ಗದ ಗುಡಿಯ ಆಡಳಿತ ಮಂಡಳಿ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ದುರ್ಗದ ದೇವಸ್ಥಾನದ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಕಳೆದ ದಿನ ನಡೆದ ಸಭೆಯಲ್ಲಿ ಭಕ್ತರಿಗಾಗಿ ಮಂಗಳಸೂತ್ರ ಮಾರಾಟ ಮಾಡಲು ತಿರುಮಲ ತಿರುಪತಿ ದೇವಸ್ಥಾನಂ ನಿರ್ಧರಿಸಿದೆ. ಇದರಿಂದ ದಾಂಪತ್ಯ ಜೀವನಕ್ಕೆ ಕಾಲಿಡುವವರು ತಿರುಪತಿಯಲ್ಲಿ ಮಂಗಳಸೂತ್ರವನ್ನು ಖರೀದಿ ಮಾಡಬಹುದು. ಇದರೊಂದಿಗೆ ತಿರುಪತಿ ತಿಮ್ಮಪ್ಪನ ಆಶೀರ್ವಾದ ಕೂಡ ಪಡೆಯಬಹುದು.

Mangalsutras blessed by Thimmappa are available for devotees in Tirupati

ಈ ಸಭೆಯಲ್ಲಿ ಆಡಳಿತ ಮಂಡಳಿಯು 5,141 ಕೋಟಿಗಳೊಂದಿಗೆ 2024-25ರ ವಾರ್ಷಿಕ ಬಜೆಟ್ ಅನ್ನು ಅನುಮೋದಿಸಿದೆ. ಶ್ರೀಗಳ ಪಾದಪೂಜೆಯ ನಂತರ ನವ ದಂಪತಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ಶ್ರೀಗಳಿಗೆ ಬರುವ ಬಂಗಾರದ ಕಾಣಿಕೆಯಿಂದ 5 ಮತ್ತು 10 ಗ್ರಾಂ ಮಂಗಳಸೂತ್ರವನ್ನು ತಯಾರಿಸಲಾಗುತ್ತದೆ ಎಂದು ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಹೇಳಿದೆ.

ಜೊತೆಗೆ ಈ ಸಭೆಯಲ್ಲಿ ಬೆಟ್ಟದ ಮೇಲೆ ಪೂಜಾ ಮಂಟಪ ನಿರ್ಮಾಣ ಮಾಡಲು ಚಿಂತನೆಗಳು ನಡೆದಿವೆ. ನೌಕರರ ವಸತಿ ಪ್ರದೇಶಗಳಲ್ಲಿ ಜಲ್ಲಿಕಲ್ಲು ರಸ್ತೆ ನಿರ್ಮಾಣಕ್ಕೆ ಟಿಟಿಡಿ ಅನುಮೋದನೆ ನೀಡಿದೆ. ಮಾತ್ರವಲ್ಲದೆ ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ನೌಕರರ ವೇತನ ಹೆಚ್ಚಳಕ್ಕೆ ಆಡಳಿತ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಟಿಟಿಡಿ ಅಧೀನದಲ್ಲಿ ನಡೆಯುತ್ತಿರುವ 60 ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿದೆ.

ಇದಲ್ಲದೆ ಆಸ್ಪತ್ರೆಯ 300 ಹಾಸಿಗೆಗಳನ್ನು 1200 ಹಾಸಿಗೆಗಳಿಗೆ ವಿಸ್ತರಿಸಲು ಟಿಟಿಡಿ ಮಂಡಳಿಯು ಅನುಮೋದನೆ ನೀಡಿದೆ. ಅನ್ನಮಯ್ಯ ಭವನದ ಜತೆಗೆ ಕುಟೀರಗಳ ಆಧುನೀಕರಣಕ್ಕೆ ಹಾಗೂ ಸಪ್ತಗಿರಿ ಸತ್ರಗಳ ಅಭಿವೃದ್ಧಿಗೆ ಅಪಾರ ಹಣ ಮೀಸಲಿಟ್ಟಿದೆ. ಅದಲ್ಲದೆ ಶೀಘ್ರವೇ ಬೆಟ್ಟ ಪ್ರದಕ್ಷಿಣೆ ಮಾರ್ಗದಲ್ಲಿ ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

Mangalsutras blessed by Thimmappa are available for devotees in Tirupati

ತಿರುಮಲ ದೇವಸ್ಥಾನದ ಆವರಣದಲ್ಲಿ ಸಚಿವೆ ರೋಜಾಗೆ ಕಹಿ ಅನುಭವ

ಸಚಿವೆ ರೋಜಾ ಅವರು ತಿಂಗಳಿಗೊಮ್ಮೆ ಶ್ರೀವಾರಿ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ರೋಜಾ ಶ್ರೀಗಳ ದರ್ಶನ ಪಡೆಯುತ್ತಲೇ ಇರುತ್ತಾರೆ. ಎಂದಿನಂತೆ ಸ್ವಾಮಿಯ ದರ್ಶನಕ್ಕೆಂದು ಸಚಿವರು ತಿರುಮಲಕ್ಕೆ ಬಂದಾಗ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಶ್ರೀವಾರಿ ದೇವಸ್ಥಾನದ ಬಳಿ ಸಚಿವೆ ರೋಜಾಗೆ ಕಹಿ ಅನುಭವವಾಗಿದೆ.

ಸ್ವಾಮಿಯ ದರ್ಶನ ಪಡೆದು ದೇವಸ್ಥಾನದ ಹೊರಗೆ ಬಂದ ಸಚಿವರು, ಶ್ರೀಗಳ ಭಕ್ತರು ಜೈ ಅಮರಾವತಿ ಎಂದು ಘೋಷಣೆ ಕೂಗಿದ್ದಾರೆ. ಒಂದು ರಾಜ್ಯ ಒಂದೇ ರಾಜಧಾನಿ. ಅಮರಾವತಿ.. ಜೈ ಅಮರಾವತಿಗೆ ಬೆಂಬಲ ನೀಡುವಂತೆ ಶ್ರೀವಾರಿಯ ದಾಸರು ರೋಜಾಗೆ ಮನವಿ ಮಾಡಿದರು. ಈ ಘಟನೆಯಿಂದ ಅಚ್ಚರಿಗೊಂಡ ಸಚಿವೆ ರೋಜಾ, 'ಶ್ರೀಗಳ ಸೇವೆಗೆ ಬಂದಿದ್ದಕ್ಕೆ ಇದೇನು ಒತ್ತಾಯ?' ಎಂದು ಪ್ರಶ್ನಿಸಿದರು. ಬಳಿಕ ಸಚಿವರು ಅಲ್ಲಿಂದ ನಿರ್ಗಮಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+