3 ಬೆಡ್ ರೂಮ್ ಮನೆಯ ವಿದ್ಯುತ್ ಬಿಲ್ ಬರೀ 3,800 ಕೋಟಿ
ರಾಂಚಿ, ಆಗಸ್ಟ್ 14 : ಈ ಸುದ್ದಿಯನ್ನು ನೀವು ನಂಬಲೇ ಬೇಕು. ಜಮ್ಷೆಡ್ ಪುರ್ ನ ಮೂರು ಕೋಣೆಯ ಮನೆಯೊಂದರಲ್ಲಿ ಕೆಲವು ಟ್ಯೂಬ್ ಲೈಟ್ ಗಳಿವೆ. ಒಂದು ಟಿವಿ ಇದೆ. ಕೆಲವು ಫ್ಯಾನ್ ಗಳಿವೆ. ಆ ಮನೆಯ ವಿದ್ಯುತ್ ಬಿಲ್ ಎಷ್ಟು ಬರಬಹುದು ಹೇಳಿ? ಬರೀ 3,800 ಕೋಟಿ ರುಪಾಯಿ ಬಂದಿದೆ.
ಜಮ್ಷೆಡ್ ಪುರ್ ನ ಬಿ.ಆರ್.ಗುಹಾ ಅವರಿಗೆ ಇಷ್ಟು ಪ್ರಮಾಣದ ಬಿಲ್ ಬಂದಿದೆ. ಪ್ರಾಯಶಃ ಇಡೀ ಕರ್ನಾಟಕ ರಾಜ್ಯದ ಎಲ್ಲ ಮನೆಗಳದು ಸೇರಿದರೂ ಇಷ್ಟು ಮೊತ್ತ ಬರುವುದು ಅನುಮಾನ. ಇರಲಿ, ಅಷ್ಟು ಮೊತ್ತ ಕಟ್ಟಲು ಗುಹಾ ಅವರಿಗೆ ಸಾಧ್ಯವಾಗಿಲ್ಲ. ವಿದ್ಯುತ್ ನಿಗಮದವರು ಸಂಪರ್ಕ ಕಡಿತ ಮಾಡಿದ್ದಾರೆ.

ಎಎನ್ ಐ ಸುದ್ದಿ ಮಾಧ್ಯಮದವರ ಜತೆ ಗುಹಾ ಅವರು ಮಾತನಾಡಿದ್ದು, "ನಮಗೆ ಇದು ಅಚ್ಚರಿ ತಂದಿದೆ. ನಾವಿದನ್ನು ನಿರೀಕ್ಷೆ ಮಾಡಿರಲಿಲ್ಲ. ನಮಗೆ ಮೂರು ಕೋಣೆಯ ಮನೆಯಿದೆ. ನಾವು ಮೂರು ಫ್ಯಾನ್, ಮೂರು ಟ್ಯೂಬ್ ಲೈಟ್ ಮತ್ತು ಟಿವಿ ಬಳಸ್ತಿದ್ದಿವಿ. ಅಷ್ಟಕ್ಕೆ ಇಷ್ಟು ದೊಡ್ಡ ಮೊತ್ತದ ಬಿಲ್ ಸಾಧ್ಯವಾ?" ಎಂದಿದ್ದಾರೆ.

ಇನ್ನು ಈ ಬಿಲ್ ಮೊತ್ತಕ್ಕೆ ಗುಹಾ ಅವರ ಮಗಳು ರತ್ನಾ ಬಿಸ್ವಾಸ್ ಪ್ರತಿಕ್ರಿಯಿಸಿದ್ದು, "ನನ್ನ ತಾಯಿಗೆ ಮಧುಮೇಹ ಇದೆ ಮತ್ತು ತಂದೆಗೆ ರಕ್ತದೊತ್ತಡ ಇದೆ. ನಮ್ಮ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಬಂದ ಮೇಲಷ್ಟೇ ಏನಾದರೂ ಮಾಡಲು ಸಾಧ್ಯವಾಗುತ್ತಿತ್ತು" ಎಂದು ಹೇಳಿದ್ದಾರೆ.
ಸದ್ಯಕ್ಕೆ ದೂರು ದಾಖಲಿಸಲಾಗಿದೆ. ವಿಚಾರಣೆ ನಡೆಯುತ್ತಿದೆ.












Click it and Unblock the Notifications