ತಾಯಿಯ ರುಂಡ ಹೊತ್ತೊಯ್ತಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ಹಳ್ಳಿಗರು

ರಕ್ಷಾಬಂಧನದ ದಿನ ಹೃದಯ ಕಲಕುವಂಥ ವರದಿಯೊಂದು ಜಾರ್ಖಂಡ್ ರಾಜ್ಯದ ದಮ್ಕಾ ಜಿಲ್ಲೆಯಿಂದ ಭಾನುವಾರ ಬಂದಿದೆ. ಅರವತ್ತೈದು ವರ್ಷದ ತಾಯಿಯ ರುಂಡವನ್ನು ಕಡಿದ ಮಗನೊಬ್ಬ, ಅದನ್ನು ಬಟ್ಟೆಯಲ್ಲಿ ಸುತ್ತಿ ಹೊತ್ತೊಯ್ಯುವಾಗ ಹಳ್ಳಿಯ ಜನರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂವತ್ತೈದು ವರ್ಹದ ಚಂಪೈ ಮರಾಂಡಿ ತಾಯಿಯನ್ನು ಕೊಂದ ದುರುಳ. ತನ್ನ ತಾಯಿಯ ತಲೆಯನ್ನು ಕಡಿದು, ಅದರೊಂದಿಗೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಮರಾಂಡಿಯನ್ನು ಸಿಲ್ಥಾ ಬಿ ಹಳ್ಳಿಗರು ಹಿಡಿದಿದ್ದಾರೆ. ಆ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಮಹಿಳೆಯ ರುಂಡ ಹಾಗೂ ದೇಹವನ್ನು ಪೊಲೀಸರು ವಶಪಡಿಸಿಕೊಂಡು, ಕ್ರಮಕ್ಕೆ ಮುಂದಾಗಿದ್ದಾರೆ.

Man who beheaded mother arrested by police

ರಾಮಗಢ ಪೊಲೀಸ್ ಠಾಣೆಯ ಸಂಜಯ್ ಕುಮಾರ್ ಈ ಪ್ರಕರಣದ ಬಗ್ಗೆ ಮಾತನಾಡಿ, ಮನೆಯ ಮುಂದೆ ಕೂತಿದ್ದ ಮಹಿಳೆಯನ್ನು ಚೂಪಾದ ಆಯುಧದಿಂದ ಮರಾಂಡಿ ಕೊಂದಿದ್ದಾನೆ. ಆತನಿಗೆ ಕುಡಿಯುವ ಅಭ್ಯಾಸ ಇತ್ತು. ಜತೆಗೆ ನಿರುದ್ಯೋಗ ಆಗಿದ್ದ ಮರಾಂಡಿ ಇಂಥ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+