15 ಲಕ್ಷ ಉಳಿತಾಯ ಮಾಡಿದ ವ್ಯಕ್ತಿಯ ಪೋಷಕರು ಬದುಕುತ್ತಿರುವುದು ಹೀಗೆ: ಕಾಡುತ್ತಿದೆಯಂತೆ ಅಪರಾಧಿ ಭಾವ

ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎನ್ನುವುದನ್ನು ನೀವೂ ಕೇಳಿರುತ್ತೀರಿ. ಆದರೆ ಈಗಿನ ಕಾಲದಲ್ಲಿ ಇವತ್ತಿನ ಹೊಟ್ಟೆ , ಬಟ್ಟೆ ನೋಡಿದರೆ ಸಾಕಾಗುವುದಿಲ್ಲ, ಭವಿಷ್ಯದ ಬಗ್ಗೆಯೂ ಯೋಚನೆ ಇರಬೇಕು. ಅದಕ್ಕಾಗಿ ಎಲ್ಲರೂ ಈಗ ಸಂಬಳ ಬಂದ ಕೂಡಲೇ ಒಂದು ಪುಟ್ಟ ಬಜೆಟ್‌ ಮಾಡಿಕೊಳ್ಳುತ್ತಾರೆ. ಆದಾಯ ಎಷ್ಟು? ಖರ್ಚು ಎಷ್ಟು? ಉಳಿತಾಯ ಮಾಡಬೇಕಾಗಿರುವುದು ಎಷ್ಟು ಎನ್ನುವುದರ ಪಕ್ಕಾ ಲೆಕ್ಕ ಹಾಕಿಕೊಂಡಿರುತ್ತಾರೆ.

15 ಲಕ್ಷ ರೂಪಾಯಿ ಸೇವಿಂಗ್‌ ಇದ್ದರೂ ನೆಮ್ಮದಿ ಇಲ್ಲ

ಇಲ್ಲೊಬ್ಬ ವ್ಯಕ್ತಿ ಇದೇ ಲೆಕ್ಕಾಚಾರದಲ್ಲಿ ಬದುಕಿ 15 ಲಕ್ಷ ರೂಪಾಯಿಗಳನ್ನು ಉಳಿಸಿದ್ದಾರೆ. 15 ಲಕ್ಷ ರೂಪಾಯಿ ಸೇವಿಂಗ್‌ ಆಗಬೇಕು ಎನ್ನುವ ಟಾರ್ಗೆಟ್‌ ರೀಚ್‌ ಆಗಿದ್ದಾರೆ. ಆದರೂ ಅವರಿಗೆ ಖುಷಿ ಇಲ್ಲ, ನೆಮ್ಮದಿ ಇಲ್ಲ. ಅಪರಾಧಿ ಭಾವ ಕಾಡುತ್ತಿದೆಯಂತೆ. ಈ ಬಗ್ಗೆ ಅವರು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ತಾನು ಇಷ್ಟು ದೊಡ್ಡ ಮೊತ್ತದ ಹಣವನ್ನು ಕೂಡಿಟ್ಟರೂ ತನ್ನ ಹೆತ್ತವರು ಇವತ್ತಿಗೂ ಪೈಸೆ ಪೈಸೆಗೆ ಪಡುತ್ತಿರುವ ಪಾಡು ಕಂಡು ಅವರು ಮರುಗಿದ್ದಾರೆ. ಅವರ ತಂದೆ ತಾಯಿ ದೈನಂದಿನ ಖರ್ಚುಗಳಲ್ಲಿಯೂ ಮಿತವ್ಯಯ ಮಾಡುವುದನ್ನು ನೋಡಿ ನೊಂದುಕೊಂಡಿದ್ದಾರೆ.

Man Saved 15 Lakh Rupees But No Happiness Feeling Guilty To Watch How Parents Economise Their Living

ಕಾಡುತ್ತಿದೆ ಅಪರಾಧಿ ಭಾವ

ಇವತ್ತಿಗೆ ನಾನು ರಹಸ್ಯವಾಗಿ 15 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದೇನೆ. ಆದರೂ ಮನಸ್ಸಿಗೆ ಸಂತೋಷ ಇಲ್ಲ. ತಾನು ಈ ಮೈಲಿಗಲ್ಲು ತಲುಪುವುದರಿಂದ ತನ್ನ ಮೇಲೆ ತನಗೆ ಹೆಮ್ಮೆಯ ಭಾವನೆ ಮೂಡುತ್ತದೆ ಎಂದು ಅವರು ನಿರೀಕ್ಷಿಸಿದ್ದರಂತೆ. ಬದಲಾಗಿ, ಅವರನ್ನು ಈಗ ಅಪರಾಧಿ ಭಾವನೆ ಕಾಡುತ್ತಿದೆಯಂತೆ. ಈ ತೊಳಲಾಟದಿಂದ ಹೊರ ಬರುವುದು ಹೇಗೆ ಎನ್ನುವುದ ಅವರಿಗೆ ಅರ್ಥವಾಗುತ್ತಿಲ್ಲವಂತೆ.

ನನ್ನ ಹೆತ್ತವರು ಹೊರಗೆ ಟಿವಿ ನೋಡುತ್ತಿರುವಾಗ ನಾನು ನನ್ನ ಕೋಣೆಯಿಂದಲೇ ಇದನ್ನೆಲ್ಲಾ ಟೈಪ್ ಮಾಡುತ್ತಿದ್ದೇನೆ. ಇವತ್ತಿಗೆ ನನ್ನ ವೈಯಕ್ತಿಕ ಉಳಿತಾಯದ ಮೈಲಿಗಲ್ಲನ್ನು ತಲುಪಿದ್ದೇನೆ. ಈ ಬಗ್ಗೆ ಖುಷಿ ಪಡುವ ಬದಲು ತಪ್ಪಿತಸ್ಥ ಭಾವನೆ ಮತ್ತು ಖಿನ್ನತೆ ಕಾಡುತ್ತಿದೆ ಎಂದು ಅವರು ಬರೆದಿದ್ದಾರೆ.

ಜೀವನದುದ್ದಕ್ಕೂ ಕಷ್ಟವನ್ನೇ ಅನುಭವಿಸಿದ ತಂದೆ

ಎಲ್ಲರೂ ಜೊತೆಯಾಗಿ ಊಟಕ್ಕೆ ಕುಳಿತಿರುವಾಗ ಅವರ ತಂದೆ ವಿದ್ಯುತ್ ಬಿಲ್ ಕಟ್ಟುವುದಕ್ಕೆ ಬಾಕಿ ಇದೆ ಎನ್ನುವ ಬಗ್ಗೆ ಚಿಂತಿಸುತ್ತಿದ್ದರಂತೆ. ತಾಯಿ ಹಣ ಉಳಿಸಲು ಹೊಸ ಕನ್ನಡಕ ಖರೀದಿಸುವುದನ್ನೇ ಮುಂದಕ್ಕೆ ಹಾಕುತ್ತಿದ್ದರಂತೆ. ತಂದೆ ತಮ್ಮ ಇಡೀ ಜೀವನದುದ್ದಕ್ಕೂ ಕಷ್ಟವನ್ನೇ ಅನುಭವಿಸಿದ್ದಾರೆ. ಶ್ರಮ ಪಟ್ಟು ಕೆಲಸ ಮಾಡಿದ್ದಾರೆ, ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ನಾನು ಇವತ್ತು ಚೆನ್ನಾಗಿ ಸಂಪಾದಿಸುತ್ತಿರಬಹುದು. ಇದಕ್ಕೆಲ್ಲಾ ಅಪ್ಪನ ಶ್ರಮ,, ತ್ಯಾಗವೇ ಕಾರಣ ಎಂದು ಬರೆದಿದ್ದಾರೆ.

ಕಾಡುತ್ತಿರುವ ಭಯ

ಆ ವ್ಯಕ್ತಿ ತನ್ನ ಹೆತ್ತವರಿಗೆ ಹಣವನ್ನು ಧಾರಾಳವಾಗಿ ಖರ್ಚು ಮಾಡಿ, ಆ ಖರ್ಚುಗಳನ್ನು ತಾನು ಭರಿಸುತ್ತೇನೆ ಎಂದು ಹೇಳಬೇಕು ಅಂದುಕೊಂಡನಂತೆ. ಒಂದು ವೇಲೆ ಅಪ್ಪ ಅಮ್ಮನಿಎ ತನ್ನಲ್ಲಿದ್ದ ಹಣವನು ಕೊಟ್ಟರೆ ಅವರು ಆ ಹಣವನ್ನು ಎಫ್‌ಡಿ ಮಾಡಬಹುದು. ಅಥವಾ ಸಂಬಂಧಿಕರು ತನ್ನ ಉಳಿತಾಯದ ಬಗ್ಗೆ ತಿಳಿದುಕೊಳ್ಳಬಹುದು ಎನ್ನುವ ಭಯದಿಂದ ತಾನು ಎಷ್ಟು ಉಳಿಸಿದ್ದೇನೆ ಎಂಬುದನ್ನು ಅವರ ಬಳಿ ಬಹಿರಂಗಪಡಿಸಲು ಹಿಂಜರಿಯುತ್ತಿದ್ದಾರೆಯಂತೆ.

ಹಾಗಾಗಿ ಅಪ್ಪ-ಅಮ್ಮ ಡೈನಿಂಗ್‌ ಟೇಬಲ್‌ನಲ್ಲಿ ಹಣದ ಬಗ್ಗೆ ಮಾತನಾಡುತ್ತಿದ್ದಾಗಲೂ ಏನೂ ಉತ್ತರಿಸದೆ ಮೌನವಾಗಿದ್ದರಂತೆ. ನನ್ನ ಹೆತ್ತವರು 2,000 ರೂ. ಖರ್ಚು ಮಾಡುವುದಕ್ಕಾಗಿ ಹಿಂದೆ ಮುಂದೆ ನೋಡುತ್ತಿರುವುದನ್ನು ಕಂಡು ಮನಸ್ಸಿಗೆ ಹಿಂಸೆಯಾಗಿದೆ ಎಂದು ಅವರು ಬರೆದಿದ್ದಾರೆ. ತನ್ನನ್ನು ಕಾಡುತ್ತಿರುವ ಅಪರಾಧಿ ಪ್ರಜ್ಞೆಯಿಂದ ಹೊರಕ್ಕೆ ಬರುವುದು ಹೇಗೆ ಎನ್ನುವುದನ್ನು ಅವರು ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಂದ ಪ್ರತಿಕ್ರಿಯೆ

ಈ ಪೋಸ್ಟ್ ಹಲವಾರು ಬಳಕೆದಾರರ ಕಣ್ಣು ತೆರೆಸಿದೆ. ಸಂಪೂರ್ಣ ಉಳಿತಾಯವನ್ನು ತಂದೆ ತಾಯಿ ಮುಂದೆ ಹೇಳಬೇಕೆಂದಿಲ್ಲ. ಆದರೆ ನಿರ್ದಿಷ್ಟ ವೆಚ್ಚಗಳಿಗೆ ಪೋಷಕರಿಗೆ ಸಹಾಯ ಮಾಡಬಹುದು ಎನ್ನುವುದನ್ನು ಸೂಚಿಸಿದೆ.

ಈ ಪೋಸ್ಟ್‌ಗೆ ಅನೇಕ ಮಂದಿ ಕಾಮೆಂಟ್‌ ಮಾಡಿದ್ದಾರೆ. ಒಬ್ಬ ಬಳಕೆದಾರರು, ತಪ್ಪಿತಸ್ಥ ಭಾವನೆ ಹೊಂದುವ ಬದಲು, ಅಮ್ಮನಿಗೆ ಹೊಸ ಕನ್ನಡಕವನ್ನು ಖರೀದಿಸಿ ಕೊಡಬಹುದು, ಕೆಲವು ಬಿಲ್‌ಗಳನ್ನು ಪಾವತಿಸಬಹುದು, ಮನೆಗೆ ಅಗತ್ಯವಾಗಿ ಬೇಕಾದ ವಸ್ತುಗಳನ್ನು ಖರೀದಿಸಬಹುದು ಎಂದು ಸಲಹೆ ನೀಡಿದ್ದಾರೆ. ಇದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚಾಗುವುದಿಲ್ಲ. ಕೆಲವು ಸಾವಿರಗಳು ವೆಚ್ಚವಾಗಬಹುದು. ಅದಕ್ಕಾಗಿ ನಿಮ್ಮಲ್ಲಿರುವ ಸಂಪೂರ್ಣ ಉಳಿತಾಯದ ಹಣದ ಬಗ್ಗೆ ಹೇಳಬೇಕಿಲ್ಲ ಎಂದು ಬರೆದಿದ್ದಾರೆ.

ನಿಮ್ಮ ಬಳಿ 15 ಲಕ್ಷ ಇದೆ ಎಂದು ಹೇಳಬೇಕಿಲ್ಲ, ಕನ್ನಡಕ ಮತ್ತು ವಿದ್ಯುತ್ ಬಿಲ್ ನಂತಹ ತಕ್ಷಣದ ಖರ್ಚುಗಳನ್ನು ಭರಿಸಿ. ಕಳೆದ ತ್ರೈಮಾಸಿಕದ ಕೆಲಸಕ್ಕೆ ನನಗೆ ಬೋನಸ್ ಸಿಕ್ಕಿದೆ ಅಂತ ಹೇಳಿಕೊಳ್ಳಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರಿಗೆ ಪೂರ್ಣ ಹೃದಯದಿಂದ ಸಹಾಯ ಮಾಡಿ ಅಥವಾ ನಿಮ್ಮ ಬಳಿ ಸ್ವಲ್ಪ ಹಣ ಇದೆ ಎಂದು ಹೇಳಿ ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ಅವರಿಗೆ ನೀಡಬಹುದು ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.

ಕುಟುಂಬ ಬಜೆಟ್ ಬಗ್ಗೆ ಅಥವಾ ನಿಮ್ಮ ಹಣಕಾಸಿನ ಬಗ್ಗೆ ನಿರ್ದಿಷ್ಟವಾಗಿ ಹೇಳಬೇಕೆಂದಿಲ್ಲ. ಆದರೆ ಪ್ರತಿ ತಿಂಗಳು ನಿಮ್ಮ ತಾಯಿಗೆ ನಿಮ್ಮ ಆದಾಯದಿಂದ ಒಂದು ನಿಗದಿತ ಮೊತ್ತವನ್ನು ಕೊಡಿ. ಅದನ್ನು ಎಲ್ಲಿ ಖರ್ಚು ಮಾಡಬೇಕೆನ್ನುವುದು ಅವರಿಗೆ ಬಿಟ್ಟ ವಿಚಾರ. ನೀವು 1 ಲಕ್ಷಕ್ಕಿಂತ ಹೆಚ್ಚು ಗಳಿಸಿದರೆ 15 ಸಾವಿರ ರೂಪಾಯಿಯನ್ನು ತಂದೆ ತಾಯಿಗೆ ನೀಡಬಹುದು. ಇಲ್ಲದಿದ್ದರೆ ಮೊತ್ತವನ್ನು ಕಡಿಮೆ ಮಾಡಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+