SRK ಹಾಡಿಗೆ ನೃತ್ಯ ಮಾಡುತ್ತಾ ಐಫೆಲ್ ಟವರ್ ಮುಂದೆ ಗೆಳೆಯನ ಪ್ರಪೋಸ್‌ಗೆ ಗೆಳತಿ ಫಿದಾ
ಅಂತರ್ಜಾಲದಲ್ಲಿ ಕೆಲವು ವಿಷಯಗಳು ತಕ್ಷಣವೇ ಜನಸಾಮಾನ್ಯರಲ್ಲಿ ಆಸ್ಚರ್ಯವನ್ನು ಮೂಡಿಸುತ್ತವೆ. ಟ್ವಿಟ್ಟರ್‌ನಲ್ಲಿನ ಈ ವಿಡಿಯೊ ನೋಡುಗರನ್ನು ಬೆರಗಾಗಿಸಿದೆ. ಅಲ್ಲದೆ, ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಅತಿರಂಜಿತ ರೀತಿಯಲ್ಲಿ ಪ್ರಪೋಸ್ ಮಾಡುತ್ತಿರುವುದು ಕ್ಲಿಪ್ ಆನ್‌ಲೈನ್‌ನಲ್ಲಿ ಕ್ರೇಜಿ ವೈರಲ್ ಆಗಿದೆ. ಯುವಕ ಐಫೆಲ್ ಟವರ್ ಮುಂದೆ ಕುಚ್ ಕುಚ್ ಹೋತಾ ಹೈ ಚಿತ್ರದ ಶಾರುಖ್ ಖಾನ್ ಅವರ ಹಿಟ್ ಹಾಡು ಕೋಯಿ ಮಿಲ್ ಗಯಾಗೆ ನೃತ್ಯ ಮಾಡುವ ಮೂಲಕ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಈ ವಿಭಿನ್ನ ಪ್ರಪೋಸ್ ಅನ್ನು ನಿರೀಕ್ಷಿಸದ ಗೆಳತಿ ಶಾಕ್ ಆಗಿದ್ದಾಳೆ. ಜೊತೆಗೆ ಗೆಳೆಯನ ಜೊತೆ ತಾನೂ ಕೂಡ ಸ್ಟೆಪ್ ಹಾಕಿದ್ದಾಳೆ. ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸುವಂತೆ ಆ ಕ್ಷಣದಲ್ಲಿ ತುಂತುರು ಮಳೆ ಕೂಡ ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಸಾಕಷ್ಟು ವಿಭಜಿತ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸಚಿನ್ ಟಂಡನ್ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ, ಐಫೆಲ್ ಟವರ್ ಮುಂದೆ ಕೋಯಿ ಮಿಲ್ ಗಯಾಗೆ ನೃತ್ಯ ಮಾಡುವಾಗ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಮಹಿಳೆ ದಿಗ್ಭ್ರಮೆಗೊಂಡು ಬಳಿಕ ತಾನೂ ಕೂಡ ನೃತ್ಯ ಮಾಡಿದ್ದಾಳೆ. ಸ್ಥಳವನ್ನು ಗುಲಾಬಿ ಹೂವು ಮತ್ತು ಮೇಣದಬತ್ತಿಗಳಿಂದ ಅಲಂಕರಿಸಲಾಗಿದೆ. ಜೊತೆಗೆ ಸ್ಥಳದಲ್ಲಿ "ನನ್ನನ್ನು ಮದುವೆಯಾಗು" ಎಂದು ಬರೆಯಲಾಗಿದೆ.

"ಈ ಸಂಭಾವಿತ ವ್ಯಕ್ತಿ ಯಾರೆಂದು ನನಗೆ ತಿಳಿದಿಲ್ಲ. ಆದರೆ ಅವನ್ನು ಅವಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ ಎಂದು ನನಗೆ ಖಾತ್ರಿಯಿದೆ" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೊವನ್ನು ಇಲ್ಲಿ ನೋಡಿ:
😭😭
— Sachin Tandon (@cugwmui) October 15, 2022
I don't know who this gentleman is. I'm sure he means well.
But no. JUST NO. pic.twitter.com/f5uibsTZCn
ಕ್ಲಿಪ್ ಸುಮಾರು 5 ಲಕ್ಷ ವೀಕ್ಷಣೆಗಳನ್ನು ಮತ್ತು ನೆಟಿಜನ್‌ಗಳಿಂದ ಹಲವಾರು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಕೆಲವು ಬಳಕೆದಾರರು ಗೆಳೆಯನ ಸೃಜನಶೀಲ ಪ್ರಸ್ತಾಪವನ್ನು ಇಷ್ಟಪಟ್ಟರೆ, ಇತರರು ಅಷ್ಟೊಂದು ಪ್ರಭಾವಿತರಾಗಲಿಲ್ಲ. ಕೋಯಿ ಮಿಲ್ ಗಯಾ ಶಾರುಖ್ ಖಾನ್, ರಾಣಿ ಮುಖರ್ಜಿ ಮತ್ತು ಕಾಜೋಲ್ ಅಭಿನಯದ 1998 ರ ಕುಚ್ ಕುಚ್ ಹೋತಾ ಹೈ ಚಿತ್ರದ ಹಾಡು.
ಕಾಮೆಂಟ್‌ಗಳನ್ನು ಇಲ್ಲಿ ನೋಡಿ:
What's wrong? It's his way! He doesn't have to know what you would prefer...
— Annu Tandon (@AnnuTandonUnnao) October 15, 2022
Arre! But why? Seems pretty resourceful - engagement, sangeet, phool, barsaat, phoren trip and ‘full focus’ on him - aur kya chahiye?
— Aanchal Verma (@aanch29) October 15, 2022












Click it and Unblock the Notifications