Viral Video: ರೀಲ್ಸ್ ಚಟಕ್ಕೆ ಚಲಿಸುವ ರೈಲು ಕೆಳಗೇ ಮಲಗಿದ ಭೂಪ! ಮುಂದೇನಾಯ್ತು...?

ಸಾಮಾಜಿಕ ಜಾಲತಾಣ ಬಂದ ಮೇಲಂತೂ ಜನರ ಉದ್ಧಟತನ, ಅತಿರೇಕದ ವರ್ತನೆಗಳು ಮಿತಿ ಮೀರುತ್ತಿವೆ. ಮೊದಲು ಸೆಲ್ಫಿ ತೆಗೆಯುವ ಹುಚ್ಚಿತ್ತು. ಇದೀಗ ರೀಲ್ಸ್ ಮಾಡುವ ಹುಚ್ಚು ಶುರುವಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್, ಫೋಟೋ ತೆಗೆಯಲು ಹೋಗಿ ಜೀವ ಕಳೆದುಕೊಂಡ ಎಷ್ಟೋ ನಿದರ್ಶನಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ರೀಲ್ಸ್ ಚಟಕ್ಕೆ ಚಲಿಸುವ ರೈಲ್ವೆ ಕೆಳಗೆ ಮಲಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿಡಿಯೋದಲ್ಲಿ ಕಾಣುವಂತೆ ಈ ಯುವಕನನ್ನು ಈ ಸಾಹಸ ದೃಶ್ಯ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆ ಏಪ್ರಿಲ್ 2025 ರಲ್ಲಿ ಭಾರತದ ಉತ್ತರ ಪ್ರದೇಶದ ಉನ್ನಾವೊದಲ್ಲಿರುವ ಕುಸುಂಬಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ ಎನ್ನಲಾಗಿದೆ. ಅಪಾಯಕಾರಿ ಕೃತ್ಯ ಮಾಡಿದ್ದಕ್ಕಾಗಿ ರಂಜೀತ್ ಚೌರಾಸಿಯಾ ಎಂಬ ವ್ಯಕ್ತಿಯನ್ನು ರೈಲ್ವೆ ಪೊಲೀಸರ ಸಹಕಾರದಲ್ಲಿ ಸ್ಥಳೀಯ ಪೊಲೀಸರು ಬಂಧಿಸಲಾಗಿದೆ.

Man Lies on Railway Track for Instagram Reels Arrested After Dangerous Stunt Goes Viral Watch

ಆಗಿದ್ದೇನು? ವೈರಲ್ ವಿಡಿಯೋದಲ್ಲಿ ಏನಿದೆ?

ಚಲಿಸುವ ರೈಲು ಬರುವುದನ್ನು ನೋಡಿದ ಈ ಬಂಧಿತ ವ್ಯಕ್ತಿ ಮೊಬೈಲ್ ವಿಡಿಯೋ ಆನ್ ಮಾಡಿಕೊಂಡು ಟ್ರ್ಯಾಕ್ ಮೇಲೆ ಮಲಗುತ್ತಾನೆ. ನೋಡ ನೋಡುತ್ತಿದ್ದಂತೆ ರೈಲು ಸರಾಗವಾಗಿ ತೆರಳಿ ಬಿಡುತ್ತದೆ. ವಿಡಿಯೋ ನೋಡುವವರಿಗೆ ನಾವೇ ರೈಲು ಕೆಳಗೆ ಇದ್ದಿವೆನೋ ಎಂಬಂತೆ ಭಯ ಹುಟ್ಟಿಸುವಂತೆ ವಿಡಿಯೋ ಕಾಣುತ್ತದೆ. ಒಂದು ಕ್ಷಣ ಮೈ ಮೇಲೆ ರೈಲು ಹೋದಂತಹ ಅನುಭವ ಈ ವಿಡಿಯೋ ನೋಡಿದವರಿಗೆ ಆಗುತ್ತದೆ. ಅಷ್ಟು ಭಯಾನಕವಾಗಿದೆ.

ಇಂತಹ ಅಪಾಯಕಾರಿ ರೀಲ್ಸ್ ಮಾಡಿ ಬಂಧೀತ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಯಾರು ಅನುಸರಿಸದಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ವೈರಲ್ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿ ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಶೌಚಾಲಯ ಬಳಸುತ್ತಿದ್ದರೆ ಏನಾಗುತ್ತಿತ್ತು..!

ಇಂಟರ್‌ನೆಟ್‌ ಖ್ಯಾತಿಗಾಗಿ, ಹೆಚ್ಚು ಲೈಕ್ಸ್ ವೀಕ್ಷಣೆ ಪಡೆಯಲು ಜನರು ಹೇಗೆ ತಮ್ಮ ಅಮೂಲ್ಯ ಜೀವವನ್ನು ಪಣ್ಣಕ್ಕಿಡುತ್ತಿದ್ದಾರೆ. ಇದು ಇಂದಿನ ಯುವಪೀಳಿಗೆಗೆ ಆತಂಕಕಾರಿ ಸಂಕೇತವಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಈ ಸಮಯದಲ್ಲಿ ಪ್ರಯಾಣಿಕರು ಶೌಚಾಲಯ ಬಳಸುತ್ತಿದ್ದರೆ ಏನಾಗುತ್ತಿತ್ತು..! ಎಂದು ನನಗೆ ಆಶ್ಚರ್ಯವಾಗುತ್ತದೆ! ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಆ ವ್ಯಕ್ತಿ ಮತ್ತು ಸ್ಥಳದಲ್ಲಿದ್ದ ಅನುಯಾಯಿಗಳನ್ನು ಹಾಗೂ ವಿಡಿಯೋ ಲೈಕ್ ಮಾಡಿದವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಂತಹ ನಡೆ ಸಮಾಜಕ್ಕೆ ಅಪಾಯಕಾರ ಕೂಡಲೇ ಬಂಧಿಸಿ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+