ಥಾಣೆ: ಕುಟುಂಬದ 14 ಜನರನ್ನು ಕೊಂದು ನೇಣಿಗೆ ಶರಣಾದ ವ್ಯಕ್ತಿ

Posted By:
Subscribe to Oneindia Kannada

ಥಾಣೆ(ಮಹಾರಾಷ್ಟ್ರ), ಫೆ.28: ಮಹಾರಾಷ್ಟ್ರದ ಥಾಣೆಯಲ್ಲಿ ಭೀಕರ ಹತ್ಯಾಕಾಂಡ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬದ 14 ಮಂದಿಯನ್ನು ಕೊಲೆಗೈದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ.

14 ಮಂದಿ ಸಂಬಂಧಿಕರನ್ನು ಕೊಂದು ವ್ಯಕ್ತಿಯನ್ನು ಹಸನಾಯಿನ್ ಅನ್ವರ್ ವಾರೆಕರ್ ಎಂದು ಗುರುತಿಸಲಾಗಿದೆ. 32 ವರ್ಷದ ಹಸನ್ ಥಾಣೆಯ ಕಾಸರವಾಡವಲ್ಲಿ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಈ ಕೃತ್ಯ ಎಸಗಿದ್ದಾನೆ.

ಒಂದು ಉದ್ದ ಚಾಕು ತೆಗೆದುಕೊಂಡು ಎಲ್ಲರ ಕತ್ತು ಸೀಳಿದ್ದಾನೆ. ಕೊಲೆಯಾದವರಲ್ಲಿ ಏಳು ಮಕ್ಕಳು, ಆರು ಮಹಿಳೆಯರೂ ಸೇರಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Man kills 14 family members, commits suicide in Thane

ಕೊಲೆ ಮಾಡಲು ಆಸ್ತಿ ಕಲಹ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಮೃತಪಟ್ಟವರ ಪೈಕಿ ಅನ್ವರ್ ಅವರ ತಂದೆ ತಾಯಿ, ಸೋದರಿಯರು, ಕಸಿನ್ ಇದ್ದಾರೆ.

ಅನ್ವರ್ ಅವರ ತಂಗಿ ಗಾಯಗೊಂಡು ಪ್ರಾಣಪ್ರಾಯದಿಂದ ಬದುಕುಳಿದಿರುವ ಸಾಬಿಯಾ ಭರ್ಮಲ್ (22) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿದ್ದ ಎಲ್ಲರೂ ಊಟ ಮಾಡಿ ಮಲಗಿದ್ದ ವೇಳೆಯಲ್ಲಿ ಅನ್ವರ್ ಈ ಕೃತ್ಯ ಎಸಗಿದಾನೆ. ನಂತರ ಮನೆಯ ಮೆಟ್ಟಿಲ ಬಳಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಥಾಣೆಯ ಜಂಟಿ ಪೊಲೀಸ್ ಆಯುಕ್ತ ಆಶುತೋಷ್ ದಂಬಾರೆ ಹೇಳಿದ್ದಾರೆ. (ಐಎಎನ್ ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Man kills 14 family members
English summary
A 32-year old man killed 14 members of his family, including seven children, and later hanged himself in a house here on Sunday, police said.
Please Wait while comments are loading...