ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ದೊರೆಗೆ ಇದೀಗ ಘೋಷಿತ ಅಪರಾಧಿ ಪಟ್ಟ

By Madhusoodhan
|
Google Oneindia Kannada News

ಮುಂಬೈ, ಜೂನ್. 14: ಸಾಕಷ್ಟು ಸಾಲ ಮಾಡಿ ಮರೆಯಾಗಿರುವ ವಿಜಯ್ ಮಲ್ಯ ಅವರಿಗೆ ಇದೀಗ ಘೋಷಿತ ಅಪರಾಧಿ ಪಟ್ಟ. ಜಾರಿ ನಿರ್ದೇಶನಾಲಯದ(ಇಡಿ) ಮನವಿ ಪುರಸ್ಕರಿಸಿದ ಮನಿ ಲಾಂಡರಿಂಗ್ ನ್ಯಾಯಾಲಯ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಮಂಗಳವಾರ ಘೊಷಣೆ ಮಾಡಿದೆ.

ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ನ್ಯಾಯಾಲಯ ನೀಡಿರುವ ಯಾವ ಸಮಸ್ಸ್ ಗಳಿಗೂ ಮಲ್ಯ ಸಮರ್ಪಕ ಉತ್ತರ ನೀಡಿಲ್ಲ ಈ ಎಲ್ಲ ಕಾರಣ ಇಟ್ಟುಕೊಂಡು ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣನೆ ಮಾಡಬೇಕು ಎಂದು ಇಡಿ ಒತ್ತಾಯ ಮಾಡಿತ್ತು.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

vijay mallya

ಸಿಬಿಐ ಮತ್ತು ಇಡಿ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಐಡಿಬಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿಕೊಂಡ ಮಲ್ಯ ಸದ್ಯ ಇಂಗ್ಲೆಂಡ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಮಲ್ಯ ಮುಂದಿನ ದಾರಿ
ಸೆಕ್ಷನ್‌ 82ರ ಅಡಿಯಲ್ಲಿ ನ್ಯಾಯಾಲಯ ಘೋಷಿತ ಅಪರಾಧಿ ಎಂದು ಹೇಳಿದೆ. ಪರಿಣಾಮ ಅಪರಾಧಿ 30 ದಿನಗಳೊಳಗೆ ಪ್ರಕರಣದ ವಿಚಾರಣೆಗೆ ಹಾಜರಾಗಲೇಬೇಕು. ಹಾಗಾಗಿ ಇಂಗ್ಲೆಂಡಿನಲ್ಲಿರುವ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಕೇಳಿಕೊಳ್ಳಲಿದೆ.

ವಿದೇಶಕ್ಕೆ ಮಲ್ಯ ಹಾರಿದ್ದರೂ ಭಾರತದಲ್ಲಿದ್ದ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದರು, ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗುವ ಮುನ್ನವೇ ಮಲ್ಯ ಆಸ್ತಿ ಮಾರಾಟ ಮಾಡಿದ್ದರು.

English summary
In what could give the Enforcement Directorate a shot in the arm, the special Prevention of Money Laundering Court has declared liquor baron, Vijay Mallya a proclaimed offender. The court passed the order following an application filed by the Enforcement Directorate which is probing the IDBI bank loan fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X