ಪುರುಷ ನೌಕರರಿಗೂ ಇನ್ನು ಮುಂದೆ ಚೈಲ್ಡ್ ಕೇರ್ ಲೀವ್!
ನವದೆಹಲಿ, ಅಕ್ಟೋಬರ್ 26: ಪುರುಷ ಕೇಂದ್ರ ಸರ್ಕಾರಿ ನೌಕರರಿಗೂ ಇನ್ನು ಮುಂದೆ ಚೈಲ್ಡ್ ಕೇರ್ ಲೀವ್ ಸಿಗಲಿದೆ. ಏಕಾಂಗಿಯಾಗಿ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ರಜೆ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಮಕ್ಕಳ ಪೋಷಣೆ ವಿಚಾರದಲ್ಲಿ ಪತಿಯೂ ಸಹ ಪತ್ನಿಯಷ್ಟೇ ಜವಾಬ್ದಾರಿ ಹೊಂದಿರುತ್ತಾರೆ" ಎಂದು ಹೇಳಿದ್ದಾರೆ.
"ಸಿಂಗಲ್ ಪೇರೆಂಟ್ ಆಗಿರುವ ಪುರುಷ ಸರ್ಕಾರಿ ನೌಕರರಿಗೂ ಮಕ್ಕಳ ಪಾಲನೆ ಪೋಷಣೆಗೆ ರಜೆ ನೀಡಲು ನಿರ್ಧರಿಸಲಾಗಿದೆ. ವಿಚ್ಚೇಧನ ಪಡೆದವರು, ಪತ್ನಿ ಮೃತಪಟ್ಟವರು ಈ ರಜೆಯ ಉಪಯೋಗ ಪಡೆದುಕೊಳ್ಳಬಹುದು" ಎಂದು ಸಚಿವರು ಹೇಳಿದ್ದಾರೆ.

ಈ ರಜೆ ಸೌಲಭ್ಯವನ್ನು ಪಡೆಯುವ ನೌಕರರು ಕಾರ್ಯ ನಿರ್ವಹಣೆ ಮಾಡುತ್ತಿರುವ ಸ್ಥಳವನ್ನು ತೊರೆಯಲು ಸಹ ಅವಕಾಶ ನೀಡಲಾಗಿದೆ. ಪ್ರವಾಸ ಭತ್ಯೆ ವಿನಾಯಿತಿಯನ್ನು ಸಹ ಪಡೆಯಬಹುದಾಗಿದೆ.
ವಿಕಲಾಂಗ ಮಕ್ಕಳ ಪೋಷಣೆ ವಿಚಾರದಲ್ಲಿ ಹಿಂದೆ ಇದ್ದ ಸಿಸಿಎಲ್ ಅಡಿಯಲ್ಲಿದ್ದಂತಹ 22 ವರ್ಷಗಳ ಮಿತಿಯನ್ನು ಸಹ ತೆಗೆದುಹಾಕಲಾಗಿದೆ. ಕೇಂದ್ರ ಸರ್ಕಾರದ ತೀರ್ಮಾನದಿಂದ ಏಕಾಂಗಿಯಾಗಿ ಮಕ್ಕಳ ಪಾಲನೆ ಮಾಡುತ್ತಿರುವ ಪೋಷಕರಿಗೆ ಸಮಾಧಾನವಾಗಿದೆ.












Click it and Unblock the Notifications