Maldives-India Row: ಬಿಕ್ಕಟ್ಟು ವೇಳೆ ಮೊದಲು ಸ್ಪಂದಿಸುವುದೇ ಭಾರತ: ನಾವು ಕೃತಜ್ಞ- MATI
ಬೆಂಗಳೂರು, ಜನವರಿ 09: ಲಕ್ಷದ್ವೀಪ ಭೇಟಿ ಬಳಿಕ ಭಾರತದ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತಗೊಂಡ ಮಾಲ್ಡೀವ್ಸ್ ಸಚಿವ ವಿಚಾರ ಕುರಿತು ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI) ಇದೀಗ ಮೊದಲ ಪ್ರತಿಕ್ರಿಯೆ ನೀಡಿದೆ. ಇದರಲ್ಲಿ ಭಾರತ ಗುಣವನ್ನು ಈ ಪ್ರವಾಸೋದ್ಯಮ ಸಂಸ್ಥೆ ಶ್ಲಾಘಿಸಿದೆ. ಇತ್ತ ಮಾಲ್ಡೀವ್ಸ್ ಸಂಸದರೊಬ್ಬರು ಘಟನೆ ಕುರಿತು ಭಾರತಕ್ಕೆ ಕ್ಷಮೆ ಕೋರಿದ್ದಾರೆ.
ಸದ್ಯದ ಬೆಳವಣಿಗೆ ಕುರಿತು ಹಾಗೂ ಪ್ರಧಾನಿ ಮೋದಿ, ಭಾರತದ ವಿರುದ್ಧ ನೀಡಿರುವ ಮಾಲ್ಡೀವ್ ಸಚಿವರ ಹೇಳಿಕೆಗಳನ್ನು ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI) ಬಲವಾಗಿ ಖಂಡಿಸಿದೆ. ಭಾರತವು ನಮ್ಮ ನೆರೆಹೊರೆಯವರು ಮತ್ತು ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ಎಂತದ್ದೇ ಸಂದರ್ಭ, ವಿವಿಧ ಬಿಕ್ಕಟ್ಟುಗಳಲ್ಲಿ ನಮಗೆ ಮೊದಲು ಸ್ಪಂದಿಸುವ ದೇಶದ ಪೈಕಿ ಭಾರತ ಮೊದಲಿದೆ ಎಂದು ತಿಳಿಸಿದೆ.

ಬಿಕ್ಕಟ್ಟು ಬಂದಾಗ ಮೊದಲು ಸ್ಪಂದಿಸುವುದೇ ಭಾರತ
ಮಾಲ್ಡೀವ್ ಇತಿಹಾಸ ನೋಡಿದರೆ, ಆಗ ಎದುರಾದ ವಿವಿಧ ಬಿಕ್ಕಟ್ಟುಗಳಿಗೆ ಭಾರತ ಮೊದಲ ಪ್ರತಿಸ್ಪಂದಕವಾಗಿದೆ. ಭಾರತ ಜನರು ಮತ್ತು ಅಲ್ಲಿನ ಸರ್ಕಾರ ಮಾಲ್ಡೀವ್ ಜೊತೆಗೆ ನಿಕಟ ಸಂಬಂಧ ಹೊಂದಿದ್ದಕ್ಕೆ ನಾವು ಅಪಾರವಾಗಿ ಕೃತಜ್ಞತೆ ತಿಳಿಸುತ್ತೇವೆ ಎಂದು MATI ಮಾಧ್ಯಮ ಹೇಳಿಕೆ ಹೊರಡಿಸಿದೆ ಎಂದ ಎಎನ್‌ಐ ವರದಿ ಮಾಡಿದೆ.
ಈ ಹಿಂದೆ ಎದುರಾಗಿದ್ದ ಮಹಾಆರೋಗ್ಯ ಬಿಕ್ಕಟ್ಟು ಕೋವಿಡ್-19ರ ನಂತರ ಮಾಲ್ಡೀವ್ಸ್‌ನ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಭಾರತವು ಮಹತ್ವದ ಪಾತ್ರ ವಹಿಸಿದೆ ಎಂದು ಪ್ರವಾಸೋದ್ಯಮ ಸಂಸ್ಥೆ (MATI) ಹೇಳಿದೆ. ಅಂದಿನಿಂದ, ಭಾರತವು ಮಾಲ್ಡೀವ್ಸ್‌ಗೆ ಪ್ರಮುಖ ಮಾರುಕಟ್ಟೆಯಾಗಿ ಉಳಿದಿದೆ, ಭಾರತವು ಮಾಲ್ಡೀವ್ಸ್ ಪ್ರವಾಸೋಧ್ಯಮಕ್ಕೆ ಸತತ ಕೊಡುಗೆ ನೀಡುತ್ತಾ ಬಂದಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
The Maldives Association of Tourism Industry (MATI) strongly condemns the derogatory comments made by some Deputy Ministers on social media platforms, directed towards the Prime Minister of India, His Excellency Narendra Modi as well as the people of India: Maldives Association… pic.twitter.com/QJkAWBkKq6
— ANI (@ANI) January 9, 2024
ಮಾಲ್ಡೀವ್ಸ್ ವಿರುದ್ಧ ಭಾರತ ಆಕ್ರೋಶ: ಅಭಿಯಾನ
ಒಂದು ವಾರದ ಹಿಂದಷ್ಟೇ ಭಾರತದ ಪ್ರಧಾನಮಂತ್ರಿಗಳು ಲಕ್ಷದ್ವೀಪದ ಪ್ರಾಚೀನ ಕಡಲತೀರದ ಭೇಟಿ ನೀಡಿದ್ದರ ಫೋಟೊಗಳನ್ನು ಒಂದೆರಡು ದಿನಗಳ ಹಿಂದೆ ಮಾಲ್ಡೀವ್ಸ್‌ನ ಸಚಿವರು ಮತ್ತು ಇತರ ಕೆಲವು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಇದು ಭಾರತೀಯರನ್ನು ಕೆರಳುವಂತೆ ಮಾಡಿತ್ತು.
ಮಾಲ್ಡೀವ್ಸ್‌ನ ಮೂವರು ಉಪಮಂತ್ರಿಗಳು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಕುರಿತು ಟೀಕಿಸಿದ್ದರು. ಮಾಲ್ಡೀವ್ಸ್‌ಗೆ ಲಕ್ಷದ್ವೀಪವನ್ನು ಪರ್ಯಾಯ ಪ್ರವಾಸಿ ತಾಣವಾಗಿ ಮಾಡಲು ಬಿಂಬಿಸುತ್ತಿದ್ದಾರೆ ಎಂದು ಊಹಿಸಿ ಅವರು ಆರೋಪ ಮಾಡಿದ್ದರು.

ಇಂತಹ ಹೇಳಿಕೆ ಪ್ರಚೋದಿಸಲ್ಲ ಎಂದ ಮಾಲ್ಡೀವ್ಸ್
ಇದಕ್ಕೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದ್ದಂತೆ ಕೂಡಲೇ ಎಚ್ಚೆತ್ತ ಮಾಲ್ಡೀವ್ಸ್ ಸರ್ಕಾರವು ಮೋದಿ ವಿರುದ್ಧ "ಅವಹೇಳನಕಾರಿ ಟೀಕೆಗಳನ್ನು" ಪೋಸ್ಟ್ ಮಾಡಿದ ಮೂವರು ಮಂತ್ರಿಗಳನ್ನು ಭಾನುವಾರ ಅಮಾನತು ಮಾಡಿತು. ಅಲ್ಲದೇ ಇದು ಅವರ ವೈಯಕ್ತಿಕ ಹೇಳಿಕೆ ಹೊರತು ಸರ್ಕಾರದ್ದಲ್ಲ. ಇಂತವುಗಳನ್ನು ನಾವು ಪ್ರಚೋದಿಸುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿತ್ತು.
ಮಾಲ್ಡೀವ್ಸ್ ಸಚಿವರ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಖ್ಯಾತ ಕ್ರಿಕೇಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಭಾರತೀಯರು ಸಚಿವರ ಹೇಳಿಕೆ ಖಂಡಿಸಿದರು. ಪ್ರವಾಸಿಗರಿಂದಲೇ ಬದುಕುತ್ತಿರುವ ಮಾಲ್ಡೀವ್ಸ್ ಗೆ ತೆರಳುವ ಯೋಜನೆ ಕೈ ಬಿಟ್ಟರು. ಭಾರತೀಯ ಅನೇಕ ಮಾಲ್ಡೀವ್ಸ್ ಪ್ಲಾನ್‌ಗಳು, ಮಾಲ್ಡೀವ್ ಗೆ ಬುಕ್ ಆಗಿದ್ದ ವಿಮಾನ ಟಿಕೆಟ್ ರದ್ದಾದವು. ಹೀಗೆ ಒಂದು ಹಿಂದೊಂದರಂತೆ ಭಾರತ ತ್ವರಿತಗತಿಯಲ್ಲಿ ಪೆಟ್ಟು ಕೊಟ್ಟಿತು.
ಮಾಲ್ಡೀವ್ಸ್ ಸಂಸದೆ ಭಾರತಕ್ಕೆ ಕ್ಷಮೆ
ಇದೀಗ ಎಚ್ಚೆತ್ತಿರುವ ಮಾಲ್ಡೀವ್ಸ್ ಸಂಸದೆ ಇವಾ ಅಬ್ದುಲ್ಲಾ ಅವರು ಕ್ಷಮೆ ಕೇಳಿದ್ದಾರೆ. '' ಭಾರತೀಯರ ಕೋಪಗೊಂಡಿರುವುದು ಸರಿಯಾಗಿದೆ. ನಮ್ಮ ಹೇಳಿಕೆ ಅವರನ್ನು ಕೆರಳಿಸಿದೆ. ಈ ಹೇಳಿಕೆಗಳನ್ನು ಮಾಲ್ಡೀವ್ಸ್ ಜನರ ಹೇಳಿಕೆಗಳಲ್ಲ. ಈ ಬಗ್ಗೆ ನಾನು ವೈಯಕ್ತಿಕವಾಗಿ ಭಾರತೀಯರನ್ನು ಕ್ಷಮೆ ಕೇಳುತ್ತೇನೆ. ಭಾರತೀಯ ಇಲ್ಲಿಗೆ ಪ್ರವಾಸ ಕೈಗೊಳ್ಳುವುದನ್ನು ಬಿಡಬಾರದು ಎಂದು ಇವಾ ಅಬ್ದುಲ್ಲಾ ಮನವಿ ಮಾಡಿದ್ದಾರೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications