ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ಡೀವ್ಸ್‌ ಅಗ್ನಿ ಅವಘಡ: 9 ಭಾರತೀಯರು, 1 ಬಾಂಗ್ಲಾದೇಶದ ಪ್ರಜೆ ಸಾವು

|
Google Oneindia Kannada News

ಮಾಲ್ಡೀವ್ಸ್ ನವೆಂಬರ್ 10: ಮಾಲ್ಡೀವ್ಸ್ ರಾಜಧಾನಿ ಮಾಲೆಯ ಗ್ಯಾರೇಜ್‌ನಲ್ಲಿ ಗುರುವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಗುರುವಾರ ಬೆಳಿಗ್ಗೆ ಮಾಲ್ಡೀವ್ಸ್‌ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. "ಮಾಲೆಯಲ್ಲಿ ಅಗ್ನ ಅವಘಡದಿಂದ ಸ್ಥಳಾಂತರಗೊಂಡ ಮತ್ತು ಹಾನಿಗೊಳಗಾದವರಿಗೆ NDMA ಕ್ರೀಡಾಂಗಣದಲ್ಲಿ ಸ್ಥಳಾಂತರಿಸುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪರಿಹಾರ ನೆರವು ಮತ್ತು ಬೆಂಬಲ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅದರಲ್ಲಿ ಪ್ರಾಣಹಾನಿಗಳ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ''.

 ಮಾಲ್ಡೀವ್ಸ್‌ನ ಹಸಿದ ಜೀವಗಳಿಗೆ ಆಹಾರ ಒದಗಿಸಿದ ಭಾರತ ಮಾಲ್ಡೀವ್ಸ್‌ನ ಹಸಿದ ಜೀವಗಳಿಗೆ ಆಹಾರ ಒದಗಿಸಿದ ಭಾರತ

ದ್ವೀಪಸಮೂಹದ ರಾಜಧಾನಿ ಮಾಲೆ ಉನ್ನತ ಮಾರುಕಟ್ಟೆಯ ರಜಾ ತಾಣವೆಂದು ಪ್ರಸಿದ್ಧವಾಗಿದೆ. ಇದು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಈ ಪ್ರದೇಶದ ನೆಲ ಅಂತಸ್ತಿನ ವಾಹನ ರಿಪೇರಿ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Maldives fire accident: 9 Indians, 1 Bangladeshi killed

"ನಾವು 10 ಶವಗಳನ್ನು ಕಂಡುಕೊಂಡಿದ್ದೇವೆ" ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳಲಾಯಿತು. ಮೃತರಲ್ಲಿ ಒಂಬತ್ತು ಭಾರತೀಯರು ಮತ್ತು ಓರ್ವ ಬಾಂಗ್ಲಾದೇಶ ಪ್ರಜೆಯೂ ಸೇರಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಲ್ಡೀವಿಯನ್ ರಾಜಕೀಯ ಪಕ್ಷಗಳು ಘಟನೆಯನ್ನು ಟೀಕಿಸಿವೆ. ಮಾತ್ರವಲ್ಲದೆ ಇಲ್ಲಿನ ವ್ಯವಸ್ಥೇ ವಿರುದ್ಧವೂ ವಾಗ್ದಾಳಿ ನಡೆಸುತ್ತಿರುತ್ತವೆ. ಮಾಲ್ಡೀವಿನಲ್ಲಿರುವ ಜನಸಂಖ್ಯೆಯ ಅರ್ಧದಷ್ಟು ಭಾಗ ಹೆಚ್ಚಾಗಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬಂದವರು ಎಂದು ಭಾವಿಸಲಾಗಿದೆ. ಸ್ಥಳೀಯರಿಗೆ ಹೋಲಿಸಿದರೆ ವಿದೇಶಿ ಕಾರ್ಮಿಕರಿಗೆ ಸೋಂಕು ಮೂರು ಪಟ್ಟು ಹೆಚ್ಚು. ಇದರಿಂದ ಅವರ ಕಳಪೆ ಜೀವನ ಪರಿಸ್ಥಿತಿಗಳು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇನ್ನಷ್ಟು ಹದಗೆಟ್ಟಿದ್ದವು.

English summary
A fire accident occurred early Thursday morning at a garage in Malé, the capital of the Maldives. Officials said that ten people were killed and many others were injured in the tragedy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X