
ಪ್ರವಾದಿ ಕುರಿತು ಆಕ್ಷೇಪಾರ್ಹ ಹೇಳಿಕೆ: ಭಾರತ ಸರ್ಕಾರದ ವೆಬ್‌ಸೈಟ್ ಹ್ಯಾಕ್?
ನವದೆಹಲಿ, ಜೂನ್ 13; ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಇತ್ತೀಚಿನ ಹೇಳಿಕೆಗಳ ನಂತರ, ಮಲೇಷ್ಯಾ ಮೂಲದ ಹ್ಯಾಕ್ಟಿವಿಸ್ಟ್ ಗುಂಪು ಡ್ರ್ಯಾಗನ್‌ಫೋರ್ಸ್ ಭಾರತ ಸರ್ಕಾರದ ವಿರುದ್ಧ ಸರಣಿ ಸೈಬರ್ ದಾಳಿಯನ್ನು ಪ್ರಾರಂಭಿಸಿದೆ ಎಂದು ಹೇಳಿಕೊಂಡಿದೆ.
ಖಾಸಗಿ ಸುದ್ದಿವಾಹಿನಿಯೊಂದು ಆಯೋಜಿಸಿದ ಜ್ಞಾನವಾಪಿ ಮಸೀದಿ ಸಮೀಕ್ಷೆಯ ಕುರಿತು ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಶರ್ಮಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದು ವಿಶ್ವದಾದ್ಯಂತ ಅನೇಕ ರಾಷ್ಟ್ರಗಳ ಅಸಾಮಾಧಾನಕ್ಕೆ ಕಾರಣವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾದ ನಂತರ ನೂಪುರ್ ಶರ್ಮಾ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.
ಪ್ರವಾದಿ ವಿವಾದ: ಕುವೈತ್ನಿಂದ ವಲಸಿಗರು ಹೊರಕ್ಕೆ
ಆದರೆ, ಭಾರತದ ವಿರುದ್ಧ ಅಸಮಾಧಾನಗೊಂಡಿರುವ ಹ್ಯಾಕಿಂಗ್ ಗುಂಪು OpsPatuk ಅಭಿಯಾನ ಆರಂಭಿಸಿದೆ. "ವಿಶ್ವದಾದ್ಯಂತದ ಮುಸ್ಲಿಂ ಹ್ಯಾಕರ್‌ಗಳು, ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಕಾರ್ಯಕರ್ತರು (sic)" ಸಹಾಯ ಮಾಡುವಂತೆ ಕೋರಿದೆ.
ಪ್ರವಾದಿ ಹೇಳಿಕೆ: ಶೂ ಪ್ರಿಂಟ್ನೊಂದಿಗೆ ನೂಪುರ್ ಪೋಸ್ಟರ್- ಗುಜರಾತ್ನಲ್ಲಿ 8 ಬಂಧನ
OpsPatuk ನಂತಹ ಧಾರ್ಮಿಕ ಮತ್ತು ರಾಜಕೀಯ ಪ್ರೇರಿತ ಕ್ಯಾಂಪೇನ್‌ಗಳು, ವೈಯಕ್ತಿಕ ಮಾಹಿತಿ (PII), ಮಿಲಿಟರಿ ಕಾರ್ಯಾಚರಣೆಗಳು ಮತ್ತು ಇತರ ಸರ್ಕಾರಿ ರಹಸ್ಯಗಳನ್ನು ಒಳಗೊಂಡಿರುವ ಕೆಲವು ಸರ್ಕಾರಿ ವೆಬ್‌ಸೈಟ್‌ಗಳ ಮೇಲೆ ದಾಳಿ ಮಾಡಬಹುದು. ದೇಶದ ಮೇಲೆ ಮತ್ತು ನಾಗರಿಕರ ಮೇಲೆ ಉದ್ದೇಶಿತ ದಾಳಿ ಮಾಡುವ ಸಾಧ್ಯತೆ ಇದೆ.

ಸುರಕ್ಷತಾ ಕ್ರಮಕ್ಕೆ ತಜ್ಞರ ಎಚ್ಚರಿಕೆ
ಸೈಬರ್ ತಜ್ಞರು ಭಾರತೀಯ ಘಟಕಗಳ ಮೇಲಿನ ಇಂತಹ ದಾಳಿಗಳ ತೀವ್ರತೆ ಮತ್ತು ಪ್ರಮಾಣವು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸರ್ಕಾರ ಮತ್ತು ಉದ್ಯಮಗಳು ತಮ್ಮ ಡಿಜಿಟಲ್ ಗುಣಲಕ್ಷಣಗಳನ್ನು ಸುರಕ್ಷಿತವಾಗಿರಿಸಲು ಸಾಕಷ್ಟು ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ಜೂನ್ 10 ರಂದು ತನ್ನ ಸಂಶೋಧನೆಯಲ್ಲಿ, ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ, ಕ್ಲೌಡ್‌ಸೆಕ್, ಡ್ರ್ಯಾಗನ್‌ಫೋರ್ಸ್ ಎಂದು ಕರೆಯಲ್ಪಡುವ ಮಲೇಷಿಯಾದ ಹ್ಯಾಕ್ಟಿವಿಸ್ಟ್ ಗ್ರೂಪ್ ಪೋಸ್ಟ್ ಮಾಡಿದ ಟ್ವೀಟ್ ಅನ್ನು ಕಂಡುಹಿಡಿದಿದೆ, ಇದು ಭಾರತದ ಸರ್ಕಾರದ ವೆಬ್‌ಸೈಟ್‌ಗಳ ಮೇಲೆ ವಿಶ್ವದಾದ್ಯಂತ ಮುಸ್ಲಿಂ ಹ್ಯಾಕರ್‌ಗಳಿಂದ ದಾಳಿಗೆ ಕರೆ ನೀಡಿದೆ.

ಭಾರತದ ವಿರುದ್ಧ ಪ್ರತೀಕಾರ
ಕ್ಲೌಡ್‌ಸೆಕ್ ಸಂಶೋಧಕರ ಪ್ರಕಾರ, ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ವಿವಾದಾತ್ಮಕ ಕಾಮೆಂಟ್‌ಗಳಿಗಾಗಿ ಭಾರತ ಸರ್ಕಾರದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದು ದಾಳಿಯ ಮುಖ್ಯ ಗುರಿಯಾಗಿದೆ.
ಸೈಬರ್ ದಾಳಿ ಪ್ರಾರಂಭಿಸಲು ತಮ್ಮ ಮಿತ್ರರನ್ನು ಸಕ್ರಿಯಗೊಳಿಸಲು, ಗುಂಪು ಭಾರತೀಯ ಬಳಕೆದಾರರ ಸಾಮಾಜಿಕ ಮಾಧ್ಯಮ ಮಾಹಿತಿಯನ್ನು ಹಂಚಿಕೊಂಡಿದೆ, ವಿಶೇಷವಾಗಿ ಫೇಸ್‌ಬುಕ್ ಪ್ರವೇಶ ಮತ್ತು ಪ್ರಮುಖ ಬ್ಯಾಂಕ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಹಂಚಿಕೊಂಡಿದೆ.

ಸರ್ಕಾರಿ ವೆಬ್‌ಸೈಟ್ ಮೇಲೆ ದಾಳಿ
indembassyisrael.gov.in, manage.gov.in, extensionmoocs.gov.in, cia.gov.in ಮತ್ತು cfa.gov.in ಮತ್ತು ಇತರರಂತಹ ಭಾರತೀಯ ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹ್ಯಾಕರ್‍ಗಳ ಗುಂಪು ಹೇಳಿಕೊಂಡಿದೆ.
ಸೈಬರ್ ದಾಳಿ ಮಾಡಲು ವೆಬ್‌ಸೈಟ್‌ಗಳ ಪಟ್ಟಿಯನ್ನು ಸಂಘಟನೆಯು ಪ್ರಕಟಿಸಿದೆ. ಇದು ಖಾಸಗಿ ಭಾರತೀಯ ವೆಬ್‌ಸೈಟ್‌ಗಳು ಮತ್ತು ಲಾಜಿಸ್ಟಿಕ್ಸ್ ಮತ್ತು ಪೂರೈಕೆ-ಸರಪಳಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಕಂಪನಿಗಳು ಮತ್ತು ವೆಬ್ ಹೋಸ್ಟಿಂಗ್ ಪೂರೈಕೆದಾರರಂತಹ ಅನೇಕ ಭಾರತೀಯ ಸರ್ಕಾರಿ ವೆಬ್‌ಸೈಟ್‌ಗಳನ್ನು ಒಳಗೊಂಡಿದೆ.
|
ಏನಿದು ಡ್ರ್ಯಾಗನ್‌ಫೋರ್ಸ್ ಸಂಘಟನೆ
ಪ್ಯಾಲೇಸ್ಟಿನಿಯನ್ ಪರವಾಗಿರುವ ಹ್ಯಾಕ್ಟಿವಿಸ್ಟ್ ಗುಂಪಿನ ಹೆಸರು ಡ್ರ್ಯಾಗನ್‌ಫೋರ್ಸ್. ಸೈಬರ್ ಹ್ಯಾಕರ್ ತಂಡ ಸಂದೇಶಗಳನ್ನು ಪೋಸ್ಟ್ ಮಾಡುವ ಮತ್ತು ಅದರ ಇತ್ತೀಚಿನ ಕಾರ್ಯವಿಧಾನವನ್ನು ಚರ್ಚಿಸುವ ವೇದಿಕೆಯನ್ನು ಹೊಂದಿದೆ ಮತ್ತು ನಿರ್ವಹಿಸುತ್ತದೆ.
ಗುಂಪು ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಪ್ರೊಫೈಲ್‌ಗಳನ್ನು ಹೊಂದಿದೆ, ಜೊತೆಗೆ ಹಲವಾರು ಟೆಲಿಗ್ರಾಮ್ ಚಾನಲ್‌ಗಳನ್ನು ಹೊಂದಿದೆ. ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಬಳಸಿಕೊಂಡು ಈ ಗ್ಯಾಂಗ್ ಆಗಾಗ್ಗೆ ನೇಮಕಾತಿ ಮತ್ತು ಪ್ರಚಾರದ ಪ್ರಯತ್ನ ನಡೆಸುತ್ತಿದೆ. ಭಾರತ ಸರ್ಕಾರದ ವಿರುದ್ಧ ಕ್ರಮಕ್ಕೆ ಕರೆ ನೀಡುವ ಪೋಸ್ಟ್‌ಗಳನ್ನು 2.4 ಮಿಲಿಯನ್ ಜನ ವೀಕ್ಷಿಸಿದ್ದಾರೆ.
ಡ್ರ್ಯಾಗನ್‌ಫೋರ್ಸ್ ಈ ಹಿಂದೆ ಮಲೇಷಿಯನ್ ಅಥವಾ ಪಾಕಿಸ್ತಾನಿ ಗುಂಪುಗಳಾದ ರೆವಲ್ಯೂಷನ್ ಪಾಕಿಸ್ತಾನ್, ರಿಲೆಕ್ಸ್‌ಕ್ರ್ಯೂ, ಟಿ 3 ಡೈಮೆನ್ಷನ್ ಮಲೇಶಿಯಾ, ಯುನೈಟೆಡ್ ಮುಸ್ಲಿಂ ಸೈಬರ್ ಆರ್ಮಿ, ಕೋಡ್‌ನ್ಯೂಬೀ, ಫ್ಯಾಂಟಮ್‌ಕ್ರೂಸ್, ಲೋಕಲ್ ಹೋಸ್ಟ್ ಮಲೇಶಿಯಾ, ಹರಿಮೌಮಲಯಾ ಸೈಬರ್ ಆರ್ಮಿ, ಮತ್ತು ಗ್ರೂಪ್ ಟೆಂಪುರ್ ರಾಕ್ಯಾತ್ ಜೊತೆ ಸಂಬಂಧ ಹೊಂದಿದೆ.
ಭಾರತ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ಪ್ರಧಾನ ಬೆದರಿಕೆ ಸಂಶೋಧಕ ದರ್ಶಿತ್ ಆಶಾ ಎಚ್ಚರಿಸಿದ್ದಾರೆ.