ಮಲಯಾಳಂ ನಟಿ ರೇಖಾ ಮೋಹನ್‌ ನಿಗೂಢ ಸಾವು

Posted By:
Subscribe to Oneindia Kannada

ತ್ರಿಸ್ಸೂರು, ನವೆಂಬರ್ 13: ಮಲಯಾಳಂ ನಟಿ ರೇಖಾ ಮೋಹನ್‌ ಅವರು ತಮ್ಮ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರೇಖಾ ಮೋಹನ್ ಅವರು ಸಾವನ್ನಪ್ಪಿರುವುದು ಶನಿವಾರ ಕಂಡು ಬಂದಿದೆ.

ನಟಿ ರೇಖಾ ಅವರ ಪತಿ ದುಬೈನಲ್ಲಿ ನೆಲೆಸಿದ್ದು, ಎರಡು ದಿನಗಳಿಂದ ತಮ್ಮ ಪತ್ನಿತನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ರೇಖಾ ಅವರ ಪತಿ ನೀಡಿದ ಮಾಹಿತಿಯಂತೆ ನಟಿ ವಾಸವಿದ್ದ ಫ್ಲಾಟ್ ಗೆ ತೆರಳಿ ನೋಡಿದರೆ ರೇಖಾ ಶವವಾಗಿ ಪತ್ತೆಯಾಗಿದ್ದಾರೆ.

Malayalam actor Rekha Mohan found dead in Thrissur

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರೇಖಾ ಅವರ ತ್ರಿಸ್ಸೂರು ವೈದ್ಯಕೀಯ ಕಾಲೇಜಿನಲ್ಲಿ ಶವದ ಪರೀಕ್ಷೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಿನಿಮಾ ಹಾಗೂ ಟಿವಿ ಸೀರಿಯಲ್‌ಗಳಿಂದ ಖ್ಯಾತಿ ಪಡೆದಿದ್ದ ರೇಖಾ, ಮೋಹನ್‌ ಲಾಲ್‌ ಮತ್ತು ಮಮ್ಮುಟ್ಟಿ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದರು. ಯಾತ್ರಾಮೊಳಿ, ನೀ ವರುವೊಲಾಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಮಾಯಾಮ್ಮ ಧಾರಾವಾಹಿ ಜನಪ್ರಿಯತೆ ತಂದುಕೊಟ್ಟಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Malayalam actor Rekha Mohan was found in her apartment at Thrissur, Kerala on Saturday. Kerala police say that the death could have occurred two days back.
Please Wait while comments are loading...