130 ಕೋಟಿ ರು ವಂಚನೆ ಪ್ರಕರಣ, ಕೇರಳದ ನಟಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 17: ಸುಮಾರು 130 ಕೋಟಿ ರು ವಂಚನೆ ಪ್ರಕರಣದಲ್ಲಿ ಮಲೆಯಾಳಂ ಚಲನಚಿತ್ರ ನಟಿ ಕಮ್ ರೂಪದರ್ಶಿ ಧನ್ಯಾ ಮೇರಿ ವರ್ಗೀಸ್ ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತ ಮೇಲೆ ನಾಪತ್ತೆಯಾಗಿದ್ದ ಧನ್ಯಾ, ಆಕೆಯ ಪತಿ ಜಾನ್ ಹಾಗೂ ಸೋದರ ಸ್ಯಾಮುಯಲ್ ರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ತಮಿಳುನಾಡಿನ ನಾಗರ್ ಕೋಯಿಲ್ ನಲ್ಲಿದ್ದರು. ಜಾನ್ ಫ್ಯಾಮಿಲಿ ಒಡೆತನದ ಸಾಮ್ಸನ್ ಬಿಲ್ಡರ್ಸ್ ನಲ್ಲಿ ಅನೇಕ ಗ್ರಾಹಕರು ಅಪಾರ್ಟ್ಮೆಂಟ್ ಬುಕ್ ಮಾಡಿದ್ದರು.

Malayalam actor Dhanya Mary Varghese arrested for Rs 130 crore fraud

ಆದರೆ, ನಿಗದಿತ ಸಮಯಕ್ಕೆ ಮನೆ ಒದಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಇಡೀ ಕುಟುಂಬದ ವಿರುದ್ಧ ದೂರು ನೀಡಲಾಗಿತ್ತು. ಧನ್ಯಾ ಅವರ ಮಾವ ಜಾಕಬ್ ಸಾಮ್ಸನ್ ಅವರು ಸರ್ಕಾರಿ ಉದ್ಯೋಗದಲ್ಲಿದ್ದವರು ನಂತರ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.

ಪೊಲೀಸರು ಮೊದಲಿಗೆ ಜಾಕಬ್ ರನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಉಳಿದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧನ್ಯಾ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಲ್ಲದಿದ್ದರೂ ಕಂಪನಿಯ ವೆಬ್ ಸೈಟ್ ನಲ್ಲಿ ತಾನೂ ಕೂಡಾ ಸಂಸ್ಥೆಯ ನಿರ್ದೇಶಕಿ ಎಂದು ಹೇಳಿಕೊಂಡು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆದಿರುವ ಆರೋಪ ಹೊತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Model and Malayalam film actress Dhanya Mary Varghese has been arrested for financial fraud of Rs 130 crore, said police on Friday. Varghese, her husband John and his brother Samuel, were on the run after complaints filed by clients
Please Wait while comments are loading...