ಮೇಕ್ ಇನ್ ಇಂಡಿಯಾ ಪ್ರತಿಭೆ ಸಿಕ್ಕಿದ್ದು ನಕಲಿ ನೋಟು ದಂಧೇಲಿ!
ನಕಲಿ ನೋಟು ದಂಧೇಲಿ ಸಿಕ್ಕಿಹಾಕಿಕೊಂಡವನ ಹೆಸರು ಅಭಿನವ್. ಎಂಜಿನಿಯರ್ ಆಗಿದ್ದ ಈತನ ಆವಿಷ್ಕಾರ ಮೇಕ್ ಇನ್ ಇಂಡಿಯಾದಲ್ಲಿ ಆಯ್ಕೆಯಾಗಿತ್ತು. ಪ್ರಧಾನಿ ನರೇಂದ್ರ ಮೋಡಿ ಈತನ ಬಗ್ಗೆ ಮೆಚ್ಚುಗೆ ಮಾತಾಡಿದ್ದರು
ಮೊಹಾಲಿ, ಡಿಸೆಂಬರ್ 3: ಪಂಜಾಬ್ ನ ಮೊಹಾಲಿಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಪರ್ಮಿಂದರ್ ಸಿಂಗ್ ಈಚೆಗೆ ಹೊಚ್ಚ ಹೊಸ ಅಡಿ ಕಾರೊಂದನ್ನು ವಶಪಡಿಸಿಕೊಂಡಿದ್ದಾಗಿ ಹೇಳಿದರು. ಅದರಲ್ಲಿ ಅತಿ ಗಣ್ಯರ ಜತೆ ಮಾತ್ರ ವ್ಯವಹಾರ ಮಾಡಲಾಗುತ್ತಿತ್ತಂತೆ. ಅದು ಏನಪ್ಪ ಅಂದರೆ ನೋಟು ಬದಲಿ ದಂಧೆ. ಹಾಗಂತ ಸಾಚಾ ನೋಟನ್ನೇನೂ ಕೊಡ್ತಿರಲಿಲ್ಲ. ಪೊಲೀಸರಿಗೆ ಸಿಕ್ಕಿದ್ದು ನಲವತ್ತೆರಡು ಲಕ್ಷ ರುಪಾಯಿ ನಕಲಿ ನೋಟು.
ಅಲ್ಲಿ ಮೂವರಿದ್ದರು. ಅದರಲ್ಲಿ ಇಬ್ಬರು ತಪ್ಪಿಸಿಕೊಂಡರೆ ಒಬ್ಬ ಸಿಕ್ಕಿಹಾಕಿಕೊಂಡ. ಈ ಮೂವರ ಗ್ಯಾಂಗ್ ನಕಲಿ ನೋಟನ್ನೇ ಅಸಲಿ ಎಂದು ಯಾಮಾರಿಸಿ, ಅದಕ್ಕೂ ಕಮಿಷನ್ ಪಡೆಯುತ್ತಿದ್ದರಂತೆ. ಸಿಕ್ಕಿಹಾಕಿಕೊಂಡನಲ್ಲ ಆತನ ಹೆಸರು ಅಭಿನವ್. ಎಂಜಿನಿಯರಿಂಗ್ ವಿದ್ಯಾರ್ಥಿ. ದೃಷ್ಟಿ ದೋಷ ಇರುವವರಿಗಾಗಿ ಅವರು ಬಳಸುವ ಸ್ಟಿಕ್ ಗೆ ಅಳವಡಿಸುವ ಸೆನ್ಸಾರ್ ಉತ್ಪಾದಿಸುವುದು ಈತನ ವ್ಯಾಪಾರವಾಗಿತ್ತು.[ಪಾಕ್, ಬಾಂಗ್ಲಾ ಗಡಿಯಲ್ಲಿ ನಕಲಿ ನೋಟಿಗೆ ಪೂರ್ಣವಿರಾಮ]

ಚಂಡೀಗಢದ ಈತನ ಕಚೇರಿಯಲ್ಲಿ 2 ಸಾವಿರ ರುಪಾಯಿ ನಕಲಿ ನೋಟು ಮುದ್ರಣ ಮಾಡಲಾಗಿದೆ. ಇವರಿಂದ ವಶಪಡಿಸಿಕೊಂಡ ನೋಟುಗಳಲ್ಲಿ ಒಂದೇ ಸೀರಿಯಲ್ ನಂಬರ್ ಇದ್ದವಂತೆ. ಇನ್ನೂ ಆಸಕ್ತಿಕರ ವಿಷಯ ಅಂದರೆ, ಆರೋಪಿ ಅಭಿನವ್ ಇದ್ದಾನಲ್ಲ, ಆತ ಕಂಡುಹಿಡಿದ 'ಫ್ರೀಡಂ ಡಿವೈಸ್' ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಆಯ್ಕೆಯಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈತನನ್ನು ಹೊಗಳಿದ್ದರು.
ಅಭಿನವ್ ನ ಡಿವೈಸ್ ಈ ವರ್ಷ ಅಧಿಕೃತವಾಗಿ ಬಿಡುಗಡೆಯಾಗಿ, ಯಶಸ್ಸು ಕಂಡು ಭಾರತ ಸೇರಿದಂತೆ ಹದಿನೈದಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿತ್ತು. ಈತ ತನ್ನ ಆವಿಷ್ಕಾರಕ್ಕಾಗಿ 'ಮಿಲಾಪ್' ಹೆಸರಿನಲ್ಲಿ ಹಣ ಚಂದಾ ಎತ್ತುವ ಅಭಿಯಾನ ಕೂಡ ಮಾಡಿದ್ದ. ಈಗಲೂ ಈತನ ಮೋಸದ ಆವಿಷ್ಕಾರವೂ ಏನೂ ಕಡಿಮೆಯಿಲ್ಲ.[2 ಸಾವಿರ ರೂ. ನಕಲಿ ನೋಟು ಚಲಾವಣೆ: ಇಬ್ಬರ ಬಂಧನ]
ನಕಲಿ ನೋಟು ನೀಡಿ, ಅದರಲ್ಲೂ ಎರಡು ಸಾವಿರದ ನೋಟು ನೀಡಿ, ಮೋಸ ಮಾಡುವ ವಿಧಾನ ಕಂಡುಹಿಡಿಯುವುದಕ್ಕೆ ತಲೆ ಎಷ್ಟು ಖರ್ಚು ಮಾಡಿದ್ದಾನೋ, ಜತೆಗೆ ಆಡಿ ಕಾರಿನಲ್ಲಿ ಶ್ರೀಮಂತರ ಜತೆ ಮಾತ್ರ ವ್ಯವಹಾರ ಮಾಡುತ್ತಿತ್ತಂತೆ ಈತನ ತಂಡ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications