ಸಧ್ಯಕ್ಕೆ ದೇಶೀಯ ವಿಮಾನಗಳ ಹಾರಾಟ ಬೇಡ ಎನ್ನುತ್ತಿರುವ ರಾಜ್ಯಗಳು

ನವದೆಹಲಿ, ಮೇ 24: ದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭಗೊಳ್ಳಲಿದೆ. ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ. ಆದರೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಹಲವು ರಾಜ್ಯಗಳು ಸಧ್ಯಕ್ಕೆ ದೇಶೀಯ ವಿಮಾನಗಳ ಹಾರಾಟ ಬೇಡ ಎಂದು ಹೇಳುತ್ತಿವೆ.

ದೇಶೀಯ ವಿಮಾನಗಳ ಸೇವೆ ಆರಂಭವಾಗುತ್ತಿದೆ ಎನ್ನುವಾಗಲೇ ತಮಿಳುನಾಡು ಸರ್ಕಾರ ಮೇ 31ರವರೆಗೆ ನಮ್ಮ ರಾಜ್ಯಕ್ಕೆ ವಿಮಾನ ಹಾರಾಟ ಬೇಡ ಎಂದು ಹೇಳಿತ್ತು.

ಇದೀಗ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಕೂಡ ಇದಕ್ಕೆ ದನಿಗೂಡಿಸಿವೆ.ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ಇನ್ನು ದೇಶೀಯ ವಿಮಾನಗಳ ಸೇವೆ ಆರಂಭವಾದರೆ ಬೇರೆ ಬೇರೆ ರಾಜ್ಯಗಳಿಂದ ಬರುವವರ ಸಂಖ್ಯೆಯೂ ಹೆಚ್ಚುತ್ತದೆ.

ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿವೆ. ಹಾಗಾಗಿ ಈಗಾಗಲೇ ಬುಕಿಂಗ್ ಆರಂಭವಾಗಿರುವ ಕಾರಣ ಟಿಕೆಟ್ ರದ್ದುಗೊಳಿಸಿ ಹಣ ವಾಪಸ್ ನೀಡಬಹುದು ಎನ್ನುವ ಮಾತುಗಳು ಕೇಳಿಬಂದಿವೆ.

ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳಕ್ಕೆ ವಿಮಾನ ಹಾರಾಟ ಬೇಡ ಎಂದು ಹೇಳಿವೆ. ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದಾಗಿ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿತ್ತು.ಕೊಲ್ಕತ್ತ ಹಾಗೂ ಬಗ್ದೋಗ್ರಾ ವಿಮಾನ ನಿಲ್ದಾಣವು ಸಹಜ ಸ್ಥಿತಿಗೆ ಮರಳಲು ಕೆಲ ಸಮಯ ಬೇಕಾಗಿದೆ ಎಂದು ಹೇಳಿದೆ.

ಸೈಕ್ಲೋನ್ ತಂದ ಅನಾಹುತ

ಸೈಕ್ಲೋನ್ ತಂದ ಅನಾಹುತ

ಇದೀಗ ಪಶ್ಚಿಮ ಬಂಗಾಳದಾದ್ಯಂತ ಅಂಫಾನ್ ಚಂಡಮಾರುತ ತಂದೊಡ್ಡಿರುವ ಸನಾಹುತವನ್ನು ಸರಿಪಡಿಸುವ ಧಾವಂತದಲ್ಲಿದೆ. ಹೀಗಿರುವಾಗ ಕೊಲ್ಕತ್ತ ಹಾಗೂ ಬಡ್ಗೋದರ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಪುನರಾರಂಭಿಸುವುದು ಕಷ್ಟವಾಗಲಿದೆ ಎಂದು ಹೇಳಿದೆ.

ವೈಮಾನಿಕ ಸಂಸ್ಥೆ ರಾಜ್ಯಗಳನ್ನು ಸಂಪರ್ಕಿಸಿತ್ತಾ?

ವೈಮಾನಿಕ ಸಂಸ್ಥೆ ರಾಜ್ಯಗಳನ್ನು ಸಂಪರ್ಕಿಸಿತ್ತಾ?

ವೈಮಾನಿಕ ಸಂಸ್ಥೆಗಳು ಟಿಕೆಟ್ ಬುಕಿಂಗ್ ಆರಂಭಕ್ಕೂ ಮುನ್ನ ಯಾವುದೇ ರಾಜ್ಯಗಳನ್ನು ಸಂಪರ್ಕ ಮಾಡಿಲ್ಲ. ಮೇ 25ರಂದು ವಿಮಾನ ಹಾರಾಟ ಆರಂಭವಾಗಲಿದೆ ಎಂದು ಹೇಳಿ ಎಲ್ಲಾ ರಾಜ್ಯಗಳಿಗೂ ಟಿಕೆಟ್ ಬುಕಿಂಗ್ ಆರಂಭಿಸಿತ್ತು.

ರಾಜ್ಯ ಹಾಗೂ ಕೇಂದ್ರದ ಮಧ್ಯೆ ಗೊಂದಲ

ರಾಜ್ಯ ಹಾಗೂ ಕೇಂದ್ರದ ಮಧ್ಯೆ ಗೊಂದಲ

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ದೇಶೀಯ ವಿಮಾನಗಳ ಹಾರಾಟ ಮೇ 15 ರಿಂದ ಆರಂಭವಾಗುವುದಿಲ್ಲ, ಅಥವಾ 18 ರಂದು ಆರಂಭವಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಮೇ 25ರಿಂದ ದೇಶೀಯ ವಿಮಾನಗಳ ಹಾರಾಟ ಆರಂಭಿಸುವ ಮುನ್ನ ರಾಜ್ಯಗಳ ಒಪ್ಪಿಗೆಯನ್ನೂ ಕೇಳಿಲ್ಲ, ಒಪ್ಪಿಗೆ ಹೊರತಾಗಿ ಹಾರಾಟ ಆರಂಭಿಸಲು ಮುಂದಾಗಿದ್ದಾರೆ.

ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಏನು ಮಾಡಲಿವೆ?

ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಏನು ಮಾಡಲಿವೆ?

ವಿಮಾನ ಹಾರಾಟ ನಾಳೆ ಅಂದರೆ ಮೇ 25ರಿಂದ ಆರಂಭಗೊಳ್ಳಲಿದೆ. ರಾಜ್ಯಕ್ಕೆ ಬರುವ ವಿಮಾನಗಳನ್ನು ಬರಮಾಡಿಕೊಳ್ಳುವುದರ ಹೊರತು ಬೇರೆ ಯಾವುದೇ ಮಾರ್ಗಗಳು ಗೋಚರಿಸುತ್ತಿಲ್ಲ. ವಿಮಾನ ನಿಲ್ದಾಣ ಹಾಗೂ ರಾಜ್ಯದಲ್ಲಿ ಪ್ರಯಾಣಿಕರನ್ನು ಹ್ಯಾಂಡಲ್ ಮಾಡಲು ಎಲ್ಲರೂ ಸಿದ್ಧರಿದ್ದಾರೆಯೇ ಎನ್ನುವ ಪ್ರಶ್ನೆ ಮಾತ್ರ ಕೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+