ನಿರುದ್ಯೋಗಿ ಯುವಕರಿಗಾಗಿ ಸ್ಟೈಫಂಡ್ ನೀಡಲು 5,500 ಕೋಟಿ ರೂಪಾಯಿ ಮೀಸಲಿಟ್ಟ ಮಹಾರಾಷ್ಟ್ರ
ಮುಂಬೈ, ಜುಲೈ. 17: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಯುವನಿಧಿ ಯೋಜನೆಯನ್ನು ಘೋಷಿಸಿದೆ. ಇದರ ಬೆನ್ನಲ್ಲೆ ನಿರುದ್ಯೋಗಿ ಯುವಕರಿಗೆ ಮುಖ್ಯಮಂತ್ರಿ ಯುವ ಕಾರ್ಯ ಪ್ರಾಶಿಕ್ಷಣ್ ಯೋಜನೆ ಇಂಟರ್ನ್‌ಶಿಪ್ ಯೋಜನೆಯಲ್ಲಿ ಮಹಾರಾಷ್ಟ್ರ ಸರ್ಕಾರವು 5,500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ಯುವಕರ ಉದ್ಯೋಗ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಹುಡುಕಲು ಹೆಚ್ಚು ನೆರವಾಗುವಂತೆ ಅವರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಅವರು ಮಂಡಿಸಿದ 2024-25 ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಪಂಢರಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, "ಮುಖ್ಯಮಂತ್ರಿ ಯುವ ಕಾರ್ಯ ಪ್ರಾಶಿಕ್ಷಣ್ ಯೋಜನೆ ಇಂಟರ್ನ್‌ಶಿಪ್ ಯೋಜನೆಯಲ್ಲಿ 12ನೇ ತರಗತಿ ಪಾಸಾದವರಿಗೆ 6 ಸಾವಿರ, ಐಟಿಐ ಮತ್ತು ಡಿಪ್ಲೊಮಾ ಓದಿದವರಿಗೆ 8 ಸಾವಿರ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ 10 ಸಾವಿರ ಸ್ಟೈಫಂಡ್ ನೀಡಲಿದೆ" ಎಂದು ಘೋಷಿಸಿದ್ದಾರೆ.
ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಇಲಾಖೆಯು ಹೊರಡಿಸಿದ ಸರ್ಕಾರದ ನಿರ್ಣಯದ ಪ್ರಕಾರ, ಯೋಜನೆಯ ಅನುಷ್ಠಾನ ಏಜೆನ್ಸಿ ಜೊತೆಗೆ ಸಿಎಂ ಸಾರ್ವಜನಿಕ ಕಲ್ಯಾಣ ಘಟಕದ ಅರ್ಹ ಅಭ್ಯರ್ಥಿಗಳು 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು ಮತ್ತು ಮಹಾರಾಷ್ಟ್ರದ ನಿವಾಸಿಗಳಾಗಿರಬೇಕು ಎಂದಿದೆ. ಇಂಟರ್ನ್‌ಶಿಪ್‌ಗಳು ಆರು ತಿಂಗಳವರೆಗೆ ಇರುತ್ತದೆ ಮತ್ತು ನೇರ ಬ್ಯಾಂಕ್ ವರ್ಗಾವಣೆಯ ಮೂಲಕ ಸ್ಟೈಫಂಡ್ ಅನ್ನು ನೀಡಲಾಗುತ್ತದೆ.

ಅಜಿತ್ ಪವಾರ್ ಅವರು ಕಳೆದ ತಿಂಗಳು ಮಂಡಿಸಿದ ಬಜೆಟ್‌ನಲ್ಲಿ 'ಮುಖ್ಯ ಮಂತ್ರಿ ಯುವ ಕಾರ್ಯಪ್ರಶಿಕ್ಷಣ ಯೋಜನೆ'ಯನ್ನು ಘೋಷಿಸಿದ್ದರು. ಇದರ ಅಡಿಯಲ್ಲಿ ಪ್ರತಿ ವರ್ಷ 10 ಲಕ್ಷ ಯುವಕರಿಗೆ ತರಬೇತಿಯನ್ನು ರಾಜ್ಯ ಸರ್ಕಾರದಿಂದ ತಿಂಗಳಿಗೆ 10,000 ರೂಪಾಯಿಯವರೆಗೆ ಸ್ಟೈಫಂಡ್ ನೀಡಿ ಇಂಟರ್ನ್‌ಶಿಪ್ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಅಜಿತ್ ಪವಾರ್ ಸರ್ಕಾರದ ಯೋಜನೆ ಮಾಹಿತಿಯನ್ನು ಹಂಚಿಕೊಳ್ಳಲು ವಾರ್ಷಿಕವಾಗಿ 50,000 ಯುವಕರಿಗೆ ತರಬೇತಿ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ.
ಸರ್ಕಾರದ ನಿರ್ಣಯದಂತೆ, ಈ ಯೋಜನೆಯ ಮೂಲಕ ಈ 50,000 'ಯೋಜನಾ ದತ್'ಸ್ಟೈಫಂಡ್ ನೀಡಲಾಗುವುದು. ಗ್ರಾಮೀಣ ಭಾಗದ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಹಾಗೂ ನಗರ ಪ್ರದೇಶದಲ್ಲಿ 5 ಸಾವಿರ ಜನರಿಗೆ ಒಬ್ಬರಂತೆ ಸರ್ಕಾರ ನೇಮಕ ಮಾಡಲಿದೆ.












Click it and Unblock the Notifications