ಕೇವಲ 1 ಎಕರೆಯಲ್ಲಿ ಗುಲಾಬಿ ಹೂ ಬೆಳೆದು ದಿನಕ್ಕೆ 12,000 ರೂ. ಗಳಿಸುತ್ತಿರುವ BSc ಪದವೀಧರ: ತಿಂಗಳ ಲಾಭ 2.5 ಲಕ್ಷ

ಪುಣೆ: ಇಂದಿನ ಕಾಲದಲ್ಲಿ ಕೃಷಿ ಕಡೆ ಮುಖ ಮಾಡುವವರ ಸಂಖ್ಯೆ ತುಂಬ ಕಡಿಮೆ. ಅದರಲ್ಲೂ ಅಲ್ಪ ಸ್ವಲ್ಪ ಜಾಗ ಇದ್ದವರು ಕೃಷಿ ಮಾಡಲು ಮುಂದೆ ಬರುವುದಿಲ್ಲ. ಇನ್ನೂ ಕೃಷಿಯಲ್ಲಿ ಹೆಚ್ಚು ಬೆಳೆದರಷ್ಟೇ ಹೆಚ್ಚು ಆದಾಯ ಬರುತ್ತದೆ ಎಂಬುದು ಹಲವರ ತಪ್ಪು ಕಲ್ಪನೆ. ಕಡಿಮೆ ಜಾಗದಲ್ಲಿಯೂ ಸರಿಯಾಗಿ ತಂತ್ರಜ್ಞಾನ ಬಳಸಿ ಸ್ಮಾರ್ಟ್ ಆಗಿ ಕೃಷಿ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದು ಎಂಬುದನ್ನು ಮಹಾರಾಷ್ಟ್ರದ ರೈತ ಅರ್ಜುನ್ ಸಾಬಳೆ ಸಾಬೀತುಪಡಿಸಿದ್ದಾರೆ.

ಕೇವಲ ಒಂದು ಎಕರೆ ಜಮೀನಿನಲ್ಲಿ ಗುಲಾಬಿ ಮತ್ತು ಜರ್ಬೆರಾ ಕೃಷಿ ಮಾಡುವ ಮೂಲಕ ಅವರು ಪ್ರತಿದಿನ 12,000 ದಿಂದ 13,000 ರೂಪಾಯಿ ಆದಾಯ ಗಳಿಸುತ್ತಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Maharashtra Farmer Earns Rs 2 5 Lakh Monthly Profit by Growing Roses and Gerberas on 1 Acre

ಅರ್ಜುನ್ ಸಾಬಳೆ ಅವರ ಕುಟುಂಬ ತಲತಲಾಂತರದಿಂದ ಸೇವಂತಿಗೆ ಹಾಗೂ ಚೆಂಡುಹೂವನ್ನ ಬೆಳೆದು ಮುಂಬೈ ಮಾರುಕಟ್ಟೆಗೆ ಮಾರಾಟ ಮಾಡುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪೈಪೋಟಿ ಹೆಚ್ಚಾಗಿ, ಹೂವಿನ ಬೆಲೆ ಕುಸಿತ ಕಂಡಾಗ ಅರ್ಜುನ್ ಅವರು ಪರ್ಯಾಯ ಕೃಷಿಯತ್ತ ಮುಖ ಮಾಡಿದರು.

ಕೃಷಿಯಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ಅವರು, ವಿವಿಧ ಬೆಳೆಗಳ ಅಧ್ಯಯನಕ್ಕಾಗಿ ಕೃಷಿ ಭೂಮಿಗಳಿಗೆ ಭೇಟಿ ನೀಡುತ್ತಿದ್ದಾಗ ಅವರಿಗೆ 'ಪಾಲಿಹೌಸ್ ಕೃಷಿ'ಯ ಪರಿಚಯವಾಯಿತು. ಅಲ್ಲಿ ಸಂರಕ್ಷಿತ ವಾತಾವರಣದಲ್ಲಿ ಬೆಳೆಯುವ ಹೂವುಗಳ ಬಗ್ಗೆ ಆಕರ್ಷಿತರಾಗಿ, ತಾವೂ ಹೊಸ ಪ್ರಯೋಗಕ್ಕೆ ಮುಂದಾದರು.

10 ಗುಂಟೆಯಲ್ಲಿ ಶುರುವಾದ ಗುಲಾಬಿ ಮತ್ತು ಜರ್ಬೆರಾ ಕೃಷಿ

2016ರಲ್ಲಿ ಮೊದಲ ಬಾರಿಗೆ ಕೇವಲ 10 ಗುಂಟೆ (ಸುಮಾರು 1/4 ಎಕರೆ) ಜಾಗದಲ್ಲಿ ಅರ್ಜುನ್ ಅವರು ಗುಲಾಬಿ ಬೆಳೆಯಲು ಆರಂಭಿಸಿದರು. ಬೆಂಗಳೂರಿನ ಬೆಳೆಗಾರರೊಬ್ಬರಿಂದ ಪ್ರತಿ ಸಸಿಗೆ 12 ರೂಪಾಯಿಯಂತೆ ನೀಡಿ ಸಸಿಗಳನ್ನ ತರಿಸಿಕೊಂಡು, ಸುಮಾರು 8,000 ರೂಪಾಯಿ ಆರಂಭಿಕ ಬಂಡವಾಳ ಹೂಡಿದರು.

ಆರಂಭದಲ್ಲಿ 10,000 ಚದರ ಅಡಿಯ ಪಾಲಿಹೌಸ್ ನಿರ್ಮಾಣಕ್ಕೆ ಸುಮಾರು 3 ಲಕ್ಷ ರೂಪಾಯಿ ವೆಚ್ಚವಾಯಿತು. ಆರು ತಿಂಗಳ ನಂತರ ಆ ಜಾಗದಿಂದ ಪ್ರತಿದಿನ 500 ಗುಲಾಬಿಗಳು ಸಿಗಲು ಆರಂಭವಾದವು. ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಗುಲಾಬಿಗೆ 5 ರೂಪಾಯಿಯಂತೆ ಮಾರಿ ದಿನಕ್ಕೆ 2,500 ರೂಪಾಯಿ ಗಳಿಸಿದರು. ಈ ಲಾಭ ಅವರನ್ನ ಮತ್ತಷ್ಟು ವಿಸ್ತರಿಸಲು ಪ್ರೇರೇಪಿಸಿತು.

ತಿಂಗಳಿಗೆ 2.5 ಲಕ್ಷ ರೂಪಾಯಿ ನಿವ್ವಳ ಲಾಭದ ಲೆಕ್ಕಾಚಾರ

ಇದೀಗ ಅರ್ಜುನ್ ಸಾಬಳೆ ಅವರು ಸಂಪೂರ್ಣ ಒಂದು ಎಕರೆಯಲ್ಲಿ ಗುಲಾಬಿ ಮತ್ತು ಜರ್ಬೆರಾ ಕೃಷಿ ಮಾಡುತ್ತಿದ್ದಾರೆ. ತಲಾ 16,000 ಗುಲಾಬಿ ಹಾಗೂ ಜರ್ಬೆರಾ ಗಿಡಗಳನ್ನ ನೆಟ್ಟಿದ್ದಾರೆ. ಇದರಲ್ಲಿ ಪ್ರಸಿದ್ಧ ಡಚ್ ಹೈಬ್ರಿಡ್ ತಳಿಯಾದ 'ಟಾಪ್ ಸೀಕ್ರೆಟ್' ಅಥವಾ 'ತಾಜ್ ಮಹಲ್' ಗುಲಾಬಿ ಸೇರಿದೆ. ಪ್ರಸ್ತುತ ಅವರ ತೋಟದಿಂದ ಪ್ರತಿದಿನ 1,000 ಗುಲಾಬಿ ಹಾಗೂ 2,000 ಜರ್ಬೆರಾ ಹೂವುಗಳು ಕಟಾವಿಗೆ ಸಿಗುತ್ತವೆ.

ಪ್ರತಿ ಗುಲಾಬಿಗೆ 5 ರೂಪಾಯಿ ಹಾಗೂ ಜರ್ಬೆರಾಗೆ 4 ರೂಪಾಯಿ ಬೆಲೆ ಸಿಗುತ್ತಿದ್ದು, ದಿನಕ್ಕೆ 5,000 ರೂಪಾಯಿ ಮತ್ತು 8,000 ರೂಪಾಯಿ ಆದಾಯ ಬರುತ್ತಿದೆ. ಒಟ್ಟಾರೆಯಾಗಿ ಪ್ರತಿದಿನ 12 ರಿಂದ 13 ಸಾವಿರ ರೂಪಾಯಿ ದುಡಿಯುತ್ತಿರುವ ಇವರು, ತಿಂಗಳಿಗೆ 3.5 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದು, ಎಲ್ಲಾ ಖರ್ಚು ಕಳೆದು ಬರೋಬ್ಬರಿ 2.5 ಲಕ್ಷ ರೂಪಾಯಿ ನಿವ್ವಳ ಲಾಭ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಅರ್ಜುನ್ ಅವರು ತಮ್ಮ ಪಾಲಿಹೌಸ್‌ನಲ್ಲಿ ತಂಪಾಗಿಸುವ ಫ್ಯಾನ್‌ಗಳ ಬದಲಿಗೆ ನೈಸರ್ಗಿಕ ಗಾಳಿಯಾಡುವಂತಹ ಮೇಲ್ಛಾವಣಿ ರಂಧ್ರಗಳು ಮತ್ತು ಸೈಡ್ ಕರ್ಟನ್‌ಗಳನ್ನ ಬಳಸಿದ್ದಾರೆ. ಹನಿ ನೀರಾವರಿ ಮತ್ತು ಮೈಕ್ರೋ ಸ್ಪ್ರಿಂಕ್ಲರ್ ಮೂಲಕ ನೀರುಣಿಸುವ ಇವರು, ವಾರಕ್ಕೊಮ್ಮೆ ಕೀಟನಾಶಕ ಸಿಂಪಡಿಸಿ ರೋಗಬಾಧೆ ತಡೆಯುತ್ತಾರೆ.

ಒಮ್ಮೆ ನಾಟಿ ಮಾಡಿದ ಗಿಡಗಳು 5 ರಿಂದ 7 ವರ್ಷಗಳ ಕಾಲ ಇಳುವರಿ ನೀಡುತ್ತವೆ. ಈ ಗುಣಮಟ್ಟದ ಹೂವುಗಳು ಕೇವಲ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ, ಬೇಡಿಕೆಗೆ ಅನುಗುಣವಾಗಿ ಬೆಂಗಳೂರು, ಮುಂಬೈ, ಹೈದರಾಬಾದ್, ವಡೋದರ ಮತ್ತು ಅಹಮದಾಬಾದ್‌ನಂತಹ ಬೃಹತ್ ನಗರಗಳಿಗೂ ರಫ್ತಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+