ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಮಹಾರಾಷ್ಟ್ರ ಸೇರಿ ಪಂಚ ರಾಜ್ಯಗಳಿಗೆ 'ರೆಮ್‌ಡೆಸಿವಿರ್' ಔಷಧ

|
Google Oneindia Kannada News

ಮೊದಲ ಹಂತದಲ್ಲಿ ಐದು ರಾಜ್ಯಗಳಿಗೆ ಈ ಔಷಧವನ್ನು ನೀಡಲಾಗಿದೆ. ಅಮೆರಿಕ ಸರಕಾರದಿಂದ ಒಪ್ಪಿಗೆ ಪಡೆದಿರುವ ರೆಮ್‌ಡೆಸಿವಿರ್‌ ಔಷಧಗಳನ್ನು ಪ್ರಾಯೋಗಿಕವಾಗಿ ಬಳಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಈ ಹಿಂದೆ ತಿಳಿಸಿದ್ದರು.

Recommended Video

SSLC Exam : ತಮಿಳುನಾಡು, ಆಂಧ್ರದಲ್ಲಿಲ್ಲ, ಕರ್ನಾಟಕದಲ್ಲೇಕೆ SSLC ಪರೀಕ್ಷೆ?| Oneindia Kannada

ಆ್ಯಂಟಿ ವೈರಲ್‌ ಗುಣ ಹೊಂದಿರುವ ಈ ಔಷಧದ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆಗ್ರಹಿಸಿತ್ತು. ಹೈದರಾಬಾದ್ ಮೂಲದ ಔಷಧ ಉತ್ಪಾದನಾ ಸಂಸ್ಥೆ ಹೆಟೆರೋ ಈ ರೆಮ್‌ಡೆಸಿವಿರ್ ಔಷಧವನ್ನು ತಯಾರಿಸಿದ್ದು, ಐದು ರಾಜ್ಯಗಳಿಗೆ 20 ಸಾವಿರ ಬಾಟಲಿಗಳನ್ನು ಕಳುಹಿಸಿದೆ.

ಬಾಂಗ್ಲಾದಿಂದ ಕೊವಿಡ್ ಔಷಧಿ 'ರೆಮ್‌ಡೆಸಿವಿರ್' ತರಿಸಿಕೊಂಡ ಮಹಾರಾಷ್ಟ್ರಬಾಂಗ್ಲಾದಿಂದ ಕೊವಿಡ್ ಔಷಧಿ 'ರೆಮ್‌ಡೆಸಿವಿರ್' ತರಿಸಿಕೊಂಡ ಮಹಾರಾಷ್ಟ್ರ

ಮಹಾರಾಷ್ಟ್ರ, ದೆಹಲಿಯಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಇರುವ ಕಾರಣ ಅಲ್ಲಿ ಮೊದಲ ಪ್ರಯೋಗ ನಡೆಯಲಿದೆ. ಹಾಗೆಯೇ ಗುಜರಾತ್, ತಮಿಳುನಾಡು ಕೂಡ ಈ ಔಷಧವನ್ನು ಪಡೆದಿದೆ.

 ಎರಡನೇ ಹಂತದಲ್ಲಿ ಔಷಧ ಪಡೆಯಲಿರುವ ರಾಜ್ಯಗಳು

ಎರಡನೇ ಹಂತದಲ್ಲಿ ಔಷಧ ಪಡೆಯಲಿರುವ ರಾಜ್ಯಗಳು

ಎರಡನೇ ಹಂತದಲ್ಲಿ ಕೊಲ್ಕತ್ತ, ಇಂದೋರ್, ಭೋಪಾಲ್, ಲಕ್ನೋ, ಪಾಟ್ನಾ, ಭುವನೇಶ್ವರ, ರಾಂಚಿ, ವಿಜಯವಾಡ , ಕೊಚ್ಚಿ, ತಿರುವನಂತಪುರಂ, ಗೋವಾ ರಾಜ್ಯಗಳು ಔಷಧವನ್ನು ಪಡೆಯಲಿವೆ. ಐದು ದಿನಗಳ ಕೋರ್ಸ್ ನೀಡಿದ ಮಧ್ಯಮ COVID-19 ರೋಗಿಗಳಲ್ಲಿ ರೆಮ್ಡೆಸಿವಿರ್ ಸಾಧಾರಣ ಪ್ರಯೋಜನವನ್ನು ತೋರಿಸಿದೆ ಯುರೋಪಿಯನ್ ಮತ್ತು ದಕ್ಷಿಣ ಕೊರಿಯಾದ ಅಧಿಕಾರಿಗಳು ಸಹ ರೆಮ್ಡೆಸಿವಿರ್ ಅನ್ನು ಎದುರು ನೋಡುತ್ತಿದ್ದಾರೆ.

 ಜಿಲ್ಯಾಡ್ ಕಂಪನಿ ಜೊತೆಗೆ ಒಪ್ಪಂದ

ಜಿಲ್ಯಾಡ್ ಕಂಪನಿ ಜೊತೆಗೆ ಒಪ್ಪಂದ

ಹೆಟೆರೋ ಹೊರತುಪಡಿಸಿ, ಸಿಪ್ಲಾ ಕಂಪನಿಯು ಅಮೆರಿಕ ಮೂಲದ ಜಿಲ್ಯಾಡ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಜಿಲ್ಯಾಡ್ ಸಂಸ್ಥೆಯು ರೆಮ್‌ಡೆಸಿವಿರ್ ಔಷಧ ಉತ್ಪಾದಿಸುವ ಮೂಲ ಸಂಸ್ಥೆಯಾಗಿದೆ. ಈಗ ಹೆಟೆರೋ ಹೈದರಾಬಾದಿನಲ್ಲಿ ಔಷಧವನ್ನು ತಯಾರಿಸುತ್ತಿದೆ. ಈ ಔಷಧಗಳು ಔಷಧ ಅಂಗಡಿಗಳಲ್ಲಿ ಲಭ್ಯವಿರುವುದಿಲ್ಲ, ಕೇವಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುತ್ತದೆ.

 ಓರ್ವ ವ್ಯಕ್ತಿಗೆ ಆರು ಬಾಟಲಿ ಔಷಧ ಬೇಕು

ಓರ್ವ ವ್ಯಕ್ತಿಗೆ ಆರು ಬಾಟಲಿ ಔಷಧ ಬೇಕು

ಅವುಗಳನ್ನು ಆಯ್ದ ರಾಜ್ಯಗಳ ಆಯ್ದ ನಗರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ತುರ್ತು ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ ಆರು ಬಾಟಲಿಗಳಷ್ಟು ಔಷಧ ಬೇಕಾಗುತ್ತದೆ.

 ರೆಮ್‌ಡೆಸಿವಿರ್ ಔಷಧ ವೆಚ್ಚ

ರೆಮ್‌ಡೆಸಿವಿರ್ ಔಷಧ ವೆಚ್ಚ

100 ಎಂಎಲ್ ಔಷಧಕ್ಕೆ ಬರೋಬ್ಬರಿ 5,400 ರೂ ವೆಚ್ಚ ತಗುಲಲಿದೆ. ಸಿಪ್ಲಾ 5 ಸಾವಿರ ರೂಗೆ ನೀಡುವುದಾಗಿ ತಿಳಿಸಿದೆ. ಭಾರತದಲ್ಲಿ ಕೊರೊನಾ ವೈರಸ್‌ನಿಂದ 14,894 ಮಂದಿ ಮೃತಪಟ್ಟಿದ್ದಾರೆ. 4.73 ಲಕ್ಷ ಮಂದಿಗೆ ಸೋಂಕು ತಗುಲಿದೆ. ಮೊದಲ ಹಂತದಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ತಮಿಳುನಾಡು ಹಾಗೂ ಉತ್ತರ ಪ್ರದೇಶಕ್ಕೆ ಔಷಧ ಲಭ್ಯವಾಗಲಿದೆ.

English summary
Hyderabad-based drugmaker Hetero, which has approval to manufacture and market the generic version of the experimental COVID-19 drug Remdesivir, has sent 20,000 vials to five states including Maharashtra and Delhi - the two worst affected states in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X