ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಈ ಮೈತ್ರಿ ಕೂಟ ಅಧಿಕಾರಕ್ಕೆ ಎಂದ ಲೋಕಪೋಲ್‌ ಸಮೀಕ್ಷೆ!

ದೇಶದಲ್ಲಿ ಹರಿಯಾಣದ ನಂತರ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಯಾರು ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಯಾರು ಅಧಿಕಾರಕ್ಕೆ ಹೇರಲಿದ್ದಾರೆ ಎನ್ನುವ ಬಗ್ಗೆ ಲೋಕ ಪೋಲ್ ಚುನಾವಣೆ ಪೂರ್ವ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್‌ 20ಕ್ಕೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿ ಮಹಾವಿಕಾಸ್‌ ಅಘಾಡಿ ಹಾಗೂ ಮಹಾಯುತಿ ನಡುವೆ ನೇರ ಹಣಾಹಣಿ ಇದೆ.

ಮಹಾರಾಷ್ಟ್ರದಲ್ಲಿ ಈ ಬಾರಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಬಗ್ಗೆ ಭಾರೀ ಕುತೂಹಲ ಇದೆ. ಇಲ್ಲಿ ಹಲವು ಪಕ್ಷಗಳು ನಿರ್ಣಾಯಕ ಹಂತದಲ್ಲಿ ಇವೆ. ಶಿವಸೇನಾ ಹಾಗೂ ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಗಳು ಇಬ್ಭಾಗವಾದ ಮೇಲೆ ಇದೇ ಮೊದಲ ಬಾರಿ ಚುನಾವಣೆಯನ್ನು ಎದುರಿಸುತ್ತಿವೆ. ಅಲ್ಲದೇ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಇದೆ. ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಹೇರುವುದಕ್ಕೆ ದೊಡ್ಡ ಪಕ್ಷಗಳಿಗಿಂತಲೂ ಸಣ್ಣ ಪಕ್ಷಗಳ ಪೈಪೋಟಿ ತೀವ್ರವಾಗಿ ಇದೆ.

Maharashtra Assembly Election Lok Poll poll saysCongress alliance will come to power

10ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಇವೆ. ಹೀಗಾಗಿ, ಬಿಜೆಪಿ ಅಥವಾ ಕಾಂಗ್ರೆಸ್‌ ಯಾವುದೇ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ, ಆ ಪಕ್ಷಗಳು ಪ್ರಾದೇಶಿಕ ಹಾಗೂ ಸಣ್ಣ ಪಕ್ಷಗಳನ್ನು ಅವಲಂಬಿಸುವುದು ಅನಿವಾರ್ಯವಾಗಲಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನೇರ ಹಣಾಹಣಿಯಲ್ಲಿ ಇದೆ. ಆದರೆ, ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಹಾಗೂ ಶಿವಸೇನಾ ಈ ಹಿಂದೆ ಒಂದೊಂದೇ ಪಕ್ಷವಾಗಿದ್ದವು. ಇದೀಗ ವಿಭಜನೆಯಾಗಿ ನಾಲ್ಕು ಪಕ್ಷಗಳಾಗಿ ಬದಲಾಗಿವೆ. ಎರಡೂ ಪಕ್ಷಗಳ ಒಂದೊಂದೊ ಬಣ ಒಂದೊಂದು ಗುಂಪಿನಲ್ಲಿ ಗುರುತಿಸಿಕೊಂಡಿವೆ.

ಲೋಕ ಪೋಲ್ ಚುನಾವಣೆ ಪೂರ್ವ ಸಮೀಕ್ಷೆ ವರದಿಯಲ್ಲಿ ಏನಿದೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಚುನಾವಣೆ ಪೂರ್ವ ಸಮೀಕ್ಷೆಯನ್ನು ಲೋಕಪೊಲ್ ಬಿಡುಗಡೆ ಮಾಡಿದೆ. ಸುದೀರ್ಘ ಒಂದು ತಿಂಗಳ ಅವಧಿಯ ಸಮೀಕ್ಷೆ ನಡೆಸಿದ ನಂತರ ಮಹಾರಾಷ್ಟ್ರದ ಮೆಗಾ ಸಮೀಕ್ಷೆ ವರದಿಯನ್ನು ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಲೋಕಪೋಲ್‌ ಹೇಳಿದೆ.

Maharashtra Assembly Election Lok Poll poll saysCongress alliance will come to power

ಲೋಕಪೋಲ್‌‌ನ ಸಮೀಕ್ಷೆ ವರದಿಯ ಪ್ರಕಾರ, ಈ ಬಾರಿ ರಾಜ್ಯದಲ್ಲಿ ಮಹಾಯುತಿ (ಬಿಜೆಪಿ ಮೈತ್ರಿಕೂಟ)ಗೆ 115ರಿಂದ 128 ಸ್ಥಾನಗಳು ಸಿಗಲಿವೆ. ಮಹಾ ವಿಕಾಸ್‌ ಅಘಾಡಿ (ಕಾಂಗ್ರೆಸ್‌ ನೇತೃತ್ವ)ಕ್ಕೆ 151ರಿಂದ 162 ಸೀಟುಗಳು ಸಿಗಲಿವೆ. ಇನ್ನುಳಿದಂತೆ ಇತರರಿಗೆ 5ರಿಂದ 14 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷಾ ವರದಿ ಹೇಳಿದೆ.

* MahaYuti 115 - 128

* MVA 151 - 162

* Others 05 - 14

ಮಹಾರಾಷ್ಟ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ 300 (ಜನರಿಂದ) ಮಾದರಿಗಳನ್ನು ಸಂಗ್ರಹಿಸಿ, ಒಟ್ಟು 86,400 ಮಾದರಿಗಳ ಆಧಾರದ ಮೇಲೆ ಈ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಲಾಗಿದೆ.

ಕಾಂಗ್ರೆಸ್‌ಗೆ ಅಧಿಕಾರ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು, 145 ಬಹುಮತವಾಗಿದೆ. ಮಹಾವಿಕಾಸ್‌ ಅಘಾಡಿಯು 151ರಿಂದ 162 ಸೀಟ್‌ಗಳಲ್ಲಿ ಗೆಲ್ಲಲಿದ್ದು, ಬಹುಮತ ಕ್ರಾಸ್‌ ಮಾಡಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+