Maharashtra Assembly Election 2024: ಮುಂಬೈ ಪೊಲೀಸ್ ವಿಭಾಗದಲ್ಲಿ ಭಾರೀ ಬದಲಾವಣೆ

ಮುಂಬೈ, ನವೆಂಬರ್ 02: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ನೀತಿ ಸಂಹಿತೆ ಜಾರಿಯಲ್ಲಿದೆ. ನವೆಂಬರ್ 20ರಂದು ನಡೆಯುವ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. ನವೆಂಬರ್ 4 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಮುಂಬೈ ನಗರ ಪೊಲೀಸ್ ಮತ್ತು ಮಹಾರಾಷ್ಟ್ರ ಪೊಲೀಸ್ ವಿಭಾಗದಲ್ಲಿ ಹಲವು ವರ್ಗಾವಣೆಗಳನ್ನು ಮಾಡಲಾಗಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯೋಗ ಪೊಲೀಸ್ ಇಲಾಖೆಯ ವರ್ಗಾವಣೆ ಕುರಿತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು, ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

Maharashtra Assembly Election 2024 Major Reshuffle In Mumbai Police

ಚುನಾವಣಾ ಆಯೋಗದ ಸೂಚನೆ ಬಳಿಕ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸಂದೀಪ್ ಧನ್ಕೆ ಪೊಲೀಸ್ ಇಲಾಖೆಯ ವರ್ಗಾವಣೆ ಕುರಿತು ಆದೇಶವನ್ನು ಹೊರಡಿಸಿದ್ದಾರೆ. 28 ಎಸಿಪಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಇವರಲ್ಲಿ 17 ಸಿಬ್ಬಂದಿ ಮುಂಬೈ ನಗರ ಪೊಲೀಸ್‌ ವಿಭಾಗದವರಾಗಿದ್ದಾರೆ. ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಪೊಲೀಸರ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯಾದ್ಯಂತ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ತತ್‌ಕ್ಷಣ ಹೊಸ ಹುದ್ದೆಯ ಅಧಿಕಾರವಹಿಸಿಕೊಳ್ಳುವಂತೆ ಪೊಲೀಸರಿಗೆ ಗೃಹ ಇಲಾಖೆ ಸೂಚನೆಯನ್ನು ನೀಡಿದೆ.

ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರ ಪಟ್ಟಿಯನ್ನು ತಯಾರು ಮಾಡಿ 28 ಎಸಿಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಇವರಲ್ಲಿ 17 ಮಂದಿ ಮುಂಬೈ ನಗರ ಪೊಲೀಸ್ ವಿಭಾಗಕ್ಕೆ ಸೇರಿದವರು.

ಪೊಲೀಸ್ ಇನ್ಸ್‌ಪೆಕ್ಟರ್, ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯಾಗಿದೆ. ನವಿ ಮುಂಬೈ, ಕಿರ್ವಾಡಿ ಡಿವಿಷನ್, ನಾಸಿಕ್ ಪೊಲೀಸ್ ಅಕಾಡೆಮಿ, ನಾಸಿಕ್ ಅಪರಾಧ ಪತ್ತೆ ದಳ, ನಾಸಿಕ್ ಹೆದ್ದಾರಿ ಸುರಕ್ಷತಾ ವಿಭಾಗ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ.

ರಾಜ್ಯಾದ್ಯಂತ ಒಟ್ಟು 263 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಇವುಗಳಲ್ಲಿ 161 ಸಿಬ್ಬಂದಿಗಳು ಮುಂಬೈ ನಗರಕ್ಕೆ ಸೇರಿದವರು. ಸಿಬ್ಬಂದಿಗಳನ್ನು ಹೇಗೆ ವರ್ಗಾವಣೆಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿಯನ್ನು ಸಹ ಪ್ರಕಟಿಸಿತ್ತು. ಒಂದೇ ಹಂತದಲ್ಲಿ ರಾಜ್ಯದಲ್ಲಿ ಮತದಾನ ನಡೆಯುವುದರಿಂದ ರಾಜ್ಯಾದ್ಯಂತ ವರ್ಗಾವಣೆಗಳನ್ನು ಕೈಗೊಳ್ಳಲಾಗಿದೆ.

2019ರ ಚುನಾವಣೆ ಸಂದರ್ಭದಲ್ಲಿ ಮುಂಬೈ ನಗರವನ್ನು ಮೂರು ವಿಭಾಗವಾಗಿ ಮಾಡಿ ಆಂತರಿಕ ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಬಾರಿ ಚುನಾವಣಾ ಆಯೋಗ ನಗರವನ್ನು ಒಂದು ವಿಭಾಗ ಎಂದು ಪರಿಗಣಿಸಿ, ವರ್ಗಾವಣೆಯನ್ನು ಕೈಗೊಳ್ಳುವಂತೆ ಗೃಹ ಇಲಾಖೆಗೆ ಸೂಚನೆ ನೀಡಿತ್ತು.

ಮುಂಬೈ ನಗರದಲ್ಲಿ ಅವಧಿಯನ್ನು ಪೂರ್ಣಗೊಳಿಸಿದ 150 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಲಾಗಿದೆ. ತಮ್ಮ ತವರು ಜಿಲ್ಲೆಯಲ್ಲಿ ಮೂರು ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ ಎಲ್ಲಾ ಪೊಲೀಸರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು.

ಸೆಪ್ಟೆಂಬರ್‌ನಲ್ಲಿ ಮುಂಬೈ ನಗರ ಪೊಲೀಸರು ಸಿಬ್ಬಂದಿ ಕೊರತೆ ಇರುವ ಕುರಿತು ಮಾಹಿತಿ ನೀಡಿದ್ದರು. 213 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಬಳಿಕ ವರ್ಗಾವಣೆ ಮಾಡಿದ್ದ 50 ಸಿಬ್ಬಂದಿಗಳು ಕೆಲಸಕ್ಕೆ ರಿಪೋರ್ಟ್‌ ಮಾಡಿಕೊಂಡಿರಲಿಲ್ಲ. ಈಗ ಮುಂಬೈ ನಗರದ ಕಾನೂನು ಮತ್ತು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ.

2014, 2019 ಮತ್ತು 2024ರ ಚುನಾವಣೆ ಸಂದರ್ಭದಲ್ಲಿ ಮುಂಬೈ ನಗರವನ್ನು ವಿಭಾಗವಾರು ಮಾಡಿ ವರ್ಗಾವಣೆ ಕೈಗೊಳ್ಳಲಾಗಿತ್ತು. ಆದರೆ ಈ ಬಾರಿ ಇಂತಹ ಮಾದರಿಯನ್ನು ಆಯೋಗ ತಿರಸ್ಕಾರ ಮಾಡಿದೆ. ಚುನಾವಣೆಗೆ 19 ದಿನಗಳು ಇರುವಾಗಲೇ 161 ಮುಂಬೈ ನಗರದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳ 42 ಸಿಬ್ಬಂದಿಗಳನ್ನು ಮುಂಬೈ ನಗರಕ್ಕೆ ವರ್ಗಾವಣೆಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+