Exit Poll 2024: ಮಹಾರಾಷ್ಟ್ರ Axis My India ಎಕ್ಸಿಟ್ ಪೋಲ್, ಯಾರಿಗೆ ಎಷ್ಟು ಸೀಟು?
ಮುಂಬೈ, ನವೆಂಬರ್ 20: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ 2024ರ ಮತದಾನ ಮುಕ್ತಾಯಗೊಂಡಿದೆ. ರಾಜ್ಯದ 288 ಸೀಟುಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ರಾಜ್ಯದ ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಪ್ರಕಟವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145 ಸೀಟು.
Axis My India ಸಂಸ್ಥೆ ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ 2024ರ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದೆ. ಹಂತ-ಹಂತವಾಗಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ಪ್ರಕಟಿಸುತ್ತಿದೆ. ಚುನಾವಣಾ ಕಣದಲ್ಲಿ 4,136 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 3771 ಪುರುಷ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು 363, ಇತರ ಅಭ್ಯರ್ಥಿಗಳು 2.

Axis My India ಎಕ್ಸಿಟ್ ಪೋಲ್ ಬುಧವಾರ ಜಾರ್ಖಂಡ್ ರಾಜ್ಯದ ಸಮೀಕ್ಷೆಯ ವರದಿ ನೀಡಿದೆ. ಗುರುವಾರ ಸಂಜೆ 6.30ಕ್ಕೆ ಮಹಾರಾಷ್ಟ್ರದ ಫಲಿತಾಂಶವನ್ನು ಪ್ರಕಟಿಸಲಿದೆ. ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ಪೈಪೋಟಿ ಇದೆ. ಆದ್ದರಿಂದ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
2019ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44, ಎನ್‌ಸಿಪಿ 54 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ-ಶಿವಸೇನೆ ಮೈತ್ರಿಮಾಡಿಕೊಂಡು, ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ್ದವು. ಆದರೆ 2024ರ ಚುನಾವಣಾ ಚಿತ್ರಣ ಸಂಪೂರ್ಣ ಬದಲಾಗಿದೆ.
ಜಾರ್ಖಂಡ್ ಚುನಾವಣೆ ಎಕ್ಸಿಟ್ ಪೋಲ್: ಜಾರ್ಖಂಡ್ ರಾಜ್ಯದ 81 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ 43 ಕ್ಷೇತ್ರಕ್ಕೆ ನವೆಂಬರ್ 13ರಂದು, ನವೆಂಬರ್ 20ರಂದು ಎರಡನೇ ಹಂತದಲ್ಲಿ 38 ಕ್ಷೇತ್ರಗಳಿಗೆ ಮತದಾನ ನಡೆಯಿತು. ಒಟ್ಟಾರೆ ಎರಡೂ ಹಂತಗಳು ಸೇರಿ 1,211 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 41.
Axis My India ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಉತ್ತರ ಚೋಟಾಂಗ್‌ಪುರ್‌ನ 25 ಸೀಟುಗಳಲ್ಲಿ ಎನ್‌ಡಿಎ 11, ಇಂಡಿಯಾ 12, ಜೆಲಕೆಎಂ 2 ಮತ್ತು ಇತರರು 0 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ. ಸಂತಾಲ್ ಪ್ರಗ್ನಾ ಭಾಗದ 18 ಸೀಟುಗಳಲ್ಲಿ ಎನ್‌ಡಿಎ 3, ಇಂಡಿಯಾ 15, ಜೆಎಲ್‌ಕೆಎಂ 0 ಮತ್ತು ಇತರರು 0 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.
ದಕ್ಷಿಣ ಚೋಟಾಂಗ್‌ಪುರ್‌ನ 15 ಸೀಟುಗಳಲ್ಲಿ ಎನ್‌ಡಿಎ 3, ಇಂಡಿಯಾ 12, ಜೆಎಲ್‌ಕೆಎಂ 0 ಮತ್ತು ಇತರರು 0 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ. ಕೊಲ್ಹಾನ್ ಭಾಗದ 14 ಸೀಟುಗಳಲ್ಲಿ ಎನ್‌ಡಿಎ 5, ಇಂಡಿಯಾ 9, ಜೆಎಲ್‌ಕೆಎಂ 0 ಮತ್ತು ಇತರರು 0 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಪಲಾಮ್ ಭಾಗದ 9 ಸೀಟುಗಳಲ್ಲಿ ಎನ್‌ಡಿಎ 3, ಇಂಡಿಯಾ 5, ಜೆಎಲ್‌ಕೆಎಂ 0 ಮತ್ತು ಇತರರು 1 ಸೀಟುಗಳಲ್ಲಿ ಜಯಗಳಿಸಲಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಶೇ 37, ಇಂಡಿಯಾ ಮೈತ್ರಿಕೂಟ ಶೇ 45, ಜೆಎಲ್‌ಕೆಎಂ ಶೇ 8 ಮತ್ತು ಇತರರು ಶೇ 10ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಅಂದಾಜಿಸಿದೆ.
Axis My India ಎಕ್ಸಿಟ್ ಪೋಲ್ ಅಂತಿಮ ಫಲಿತಾಂಶದ ಪ್ರಕಾರ ಎನ್‌ಡಿಎ 17-27, ಇಂಡಿಯಾ 49-59 ಮತ್ತು ಜೆಎಲ್‌ಕೆಎಂ 1-4 ಮತ್ತು ಇತರರು 0-2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.












Click it and Unblock the Notifications