Get Updates
Get notified of breaking news, exclusive insights, and must-see stories!

ಕೇರಳದ ಮಹಾರಾಜ ನಿಧನ, ಧರ್ಮಸ್ಥಳದಲ್ಲಿ ಸಂತಾಪ

ತಿರುವನಂತಪುರಂ, ಡಿ.16: ತಿರುವಾಂಕೂರು ರಾಜ ಮನೆತನದ ಕಟ್ಟ ಕಡೆಯ ಮಹಾರಾಜ ಉತ್ರಾಡಮ್ ತಿರುನಾಳ್ ಮಾರ್ತಾಂಡ ವರ್ಮ ಅವರು ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 91 ವರ್ಷ ವಯಸ್ಸಿನ ಮಹಾರಾಜ ಅವರು ಹೃದಯಾಘಾತದಿಂದ ನಿಧನ ಹೊಂದಿದರು ಎಂದು ರಾಜಸಂಸ್ಥಾನದ ಪ್ರಕಟಣೆ ತಿಳಿಸಿದೆ.

ಮಹಾರಾಜ ಅವರು ಕಾವಾಡಿಯಾರ್ ಅರಮನೆಯಲ್ಲಿ ನಿಧನದ ಸಮಯದಲಿ ಅವರ ಪುತ್ರಿಯರಾದ ಪೂಯಂ ತಿರುನಾಳ್ ಪಾರ್ವತಿ ಬಾಯಿ, ಅಶ್ವಥಿ ತಿರುನಾಳ್ ಗೌರಿ ಲಕ್ಷ್ಮಿ ಬಾಯಿ ಹಾಗೂ ಮಗ ಪದ್ಮನಾಭ ವರ್ಮ ಅವರು ಇದ್ದರು ಮೂಲ ತಿರುನಾಳ್ ಬಲರಾಮ ವರ್ಮ ನಂತರ 1991ರಿಂದ ಸಂಸ್ಥಾನದ ಜವಾಬ್ದಾರಿಯನ್ನು ಮಾರ್ತಾಂಡ ವರ್ಮ ಹೊತ್ತಿದ್ದರು.

ಕೇರಳದ ಮಹಾರಾಜರ ನಿಧನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ದೇಗುಲದ ಪರವಾಗಿ ಧಮಾರ್ಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಾಲಕ ಮಾರ್ತಾಂಡಾ ವರ್ಮ

ಬಾಲಕ ಮಾರ್ತಾಂಡಾ ವರ್ಮ

ಟ್ರಾವಂಕೂರು/ತಿರುವಾಂಕೂರಿನ ಇತಿಹಾಸವು ವೇನಾಡು ಸಾಮ್ರಾಜ್ಯದ ಉತ್ತರಾಧಿಕಾರತ್ವವನ್ನು ಪಡೆದಿದ್ದ ಹಾಗೂ 1729-1758ರ ಅವಧಿಯ ತನ್ನ ಆಳ್ವಿಕೆಯಲ್ಲಿ ಟ್ರಾವಂಕೂರು/ತಿರುವಾಂಕೂರು ರಾಜ್ಯವನ್ನಾಗಿ ವಿಸ್ತರಿಸಿದ್ದ ಮಾರ್ತಾಂಡ ವರ್ಮನೊಂದಿಗೆ ಆರಂಭವಾಗುತ್ತದೆ.

ಕೇರಳ ಮಹಾರಾಜರ ನಿಧನಕ್ಕೆ ಸಂತಾಪ

ಕೇರಳ ಮಹಾರಾಜರ ನಿಧನಕ್ಕೆ ಸಂತಾಪ

1956ರ ರಾಜ್ಯಗಳ ಪುನರ್ ಸಂಘಟನಾ ಕಾಯಿದೆಯಡಿಯಲ್ಲಿ, ತೋವಲೈ, ಅಗಸ್ಟೀ/ಸ್ತೀಶ್ವರಮ್, ಕಾಕುಳಮ್ ಮತ್ತು ವಿಲಾವಾನ್ ಕೋಡ್ ಎಂಬ ಟ್ರಾವಂಕೂರು/ತಿರುವಾಂಕೂರಿನ ದಕ್ಷಿಣದ ನಾಲ್ಕು ತಾಲ್ಲೂಕುಗಳನ್ನು ಮತ್ತು ಚೆನ್ ಕೊಟ್ಟಾ ತಾಲ್ಲೂಕಿನ ಭಾಗವೊಂದನ್ನು ಮದ್ರಾಸು ರಾಜ್ಯದಲ್ಲಿ ವಿಲೀನಗೊಳಿಸಲಾಯಿತು.

ರಾಜ್ಯ ಅಸ್ತಿತ್ವಕ್ಕೆ

ರಾಜ್ಯ ಅಸ್ತಿತ್ವಕ್ಕೆ

ನವೆಂಬರ್ 1, 1956ರಂದು ಮಹಾರಾಜರ ಬದಲಿಗೆ ಭಾರತದ ರಾಷ್ಟ್ರಪತಿಯಿಂದ ನಿಯುಕ್ತರಾದ ರಾಜ್ಯಪಾಲರನ್ನು ರಾಜ್ಯದ ಅಧಿಪತಿಯನ್ನಾಗಿಸಿ ಕೇರಳ ರಾಜ್ಯವು ಅಸ್ತಿತ್ವಕ್ಕೆ ಬಂದಿತು.

ಉತ್ರಾಡಮ್ ತಿರುನಾಳ್ ಮಾರ್ತಾಂಡ ವರ್ಮ

ಉತ್ರಾಡಮ್ ತಿರುನಾಳ್ ಮಾರ್ತಾಂಡ ವರ್ಮ

ಮಹಾರಾಜರಿಗೆ ನೀಡಲಾಗಿದ್ದ ಎಲ್ಲಾ ಪದವಿಗಳನ್ನು ಹಾಗೂ ಸೌಲಭ್ಯಗಳನ್ನು ಜುಲೈ 31, 1971ರ ಭಾರತೀಯ ಸಂವಿಧಾನದ ಕಾಯಿದೆಯ ಇಪ್ಪತ್ತಾರನೆಯ ತಿದ್ದುಪಡಿಯನುಸಾರ ಹಿಂತೆಗೆದುಕೊಳ್ಳಲಾಯಿತು.

ಈ ಹಿಂದಿನ ಮಹಾರಾಜ ಜುಲೈ 19, 1991ರಂದು ನಿಧನ ಹೊಂದಿದರು. ಉತ್ರಾಡಮ್ ತಿರುನಾಳ್ ಮಾರ್ತಾಂಡ ವರ್ಮ 1991-2013 ರತನಕ ಅಧಿಕಾರ ನಡೆಸಿದ್ದರು.
ವಿಷ್ಣು ದೇವರ ಭಕ್ತರು

ವಿಷ್ಣು ದೇವರ ಭಕ್ತರು

ವಿಷ್ಣು ದೇವರ ಭಕ್ತರಾದ ಈ ಮಹಾರಾಜರು ವಂಶಪಾರಂಪರ್ಯವಾಗಿ ಪದ್ಮನಾಭ ದೇಗುಲದ ಉಸ್ತುವಾರಿ ಹೊತ್ತಿದ್ದಾರೆ. ಕಿಲಿಮನೂರು ಅರಮನೆ, ಕೌಡಿಯರ್ ಅರಮನೆ ಸೇರಿದಂತೆ ಹಲವಾರು ಇತಿಹಾಸ ಪ್ರಸಿದ್ಧ ಕಟ್ಟಡಗಳು ಈ ರಾಜವಂಶಸ್ಥರಿಗೆ ಸೇರಿದ್ದಾಗಿದೆ.

 ಸರ್ಕಾರಿ ರಜೆ ಘೋಷಣೆ

ಸರ್ಕಾರಿ ರಜೆ ಘೋಷಣೆ

ಮಹಾರಾಜ ಮಾರ್ತಾಂಡ ವರ್ಮಾ ಅವರ ನಿಧನದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಒಂದು ದಿನ ಸರ್ಕಾರಿ ರಜೆ ಘೋಷಿಸಿದೆ. ಅಲ್ಲದೆ ಕಾರ್ಯನಿಮಿತ್ತ ದೆಹಲಿಯಲ್ಲಿರುವ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅವರು, ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದು, ಇಂದು ಮಧ್ಯಾಹ್ನ ಮಹಾರಾಜರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಸಂಸ್ಥೆಗಳ ಪೋಷಕರು

ಸಂಸ್ಥೆಗಳ ಪೋಷಕರು

ಮಾರ್ತಾಂಡ ವರ್ಮ ಅವರು ಅನಂತ ಚಿನ್ನದ ಸಂಪತ್ತು ಇರುವ ತಿರುವನಂತಪುರದ ಶ್ರೀ ಪದ್ಮನಾಭ ದೇವಸ್ಥಾನ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಪೋಷಕರಾಗಿದ್ದರು.

ಹವ್ಯಾಸಿ ಫೋಟೋಗ್ರಾಫರ್

ಹವ್ಯಾಸಿ ಫೋಟೋಗ್ರಾಫರ್

ಸಂಸ್ಕೃತ ವಿದ್ವಾಂಸರಾಗಿದ್ದ ಮಾರ್ತಾಂಡ ವರ್ಮ ಅವರು ಇಂಗ್ಲೆಂಡ್ ನಲ್ಲಿ ವ್ಯಾಸಂಗ ಮಾಡಿದ್ದರು. ಛಾಯಾಗ್ರಹಣದ ಹವ್ಯಾಸ ಹೊಂದಿದ್ದ ಮಾರ್ತಾಂದ ಅವರ ವಿಶ್ವದ ರಾಜ ಮನೆತನಗಳ ಫೋಟೋಗ್ರಾಫಿಗಳ ಸಂಗ್ರಹವೇ ಅವರ ಬಳಿ ಇತ್ತು.

ಬಾಲಕ ಮಾರ್ತಾಂಡ ವರ್ಮ

ಬಾಲಕ ಮಾರ್ತಾಂಡ ವರ್ಮ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಅಪರೂಪದ ಚಿತ್ರಗಳು

ಮಾರ್ತಾಂಡ ವರ್ಮ ಚಿತ್ರಗಳು

ಮಾರ್ತಾಂಡ ವರ್ಮ ಚಿತ್ರಗಳು

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಅಪರೂಪದ ಚಿತ್ರಗಳು

 ಪಾರ್ಥೀವ ಶರೀರ

ಪಾರ್ಥೀವ ಶರೀರ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರ

ಮಹಾರಾಜರಿಗೆ ಅಂತಿಮ ನಮನ

ಮಹಾರಾಜರಿಗೆ ಅಂತಿಮ ನಮನ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ

ಮಹಾರಾಜರಿಗೆ ಅಂತಿಮ ನಮನ

ಮಹಾರಾಜರಿಗೆ ಅಂತಿಮ ನಮನ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಹಾಗೂ ವೈದಿಕರಿಂದ ವೇದಘೋಷ ಪಠಣ

ಕ್ರೈಸ್ತರಿಂದ ಅಂತಿಮ ನಮನ ಸಲ್ಲಿಕೆ

ಕ್ರೈಸ್ತರಿಂದ ಅಂತಿಮ ನಮನ ಸಲ್ಲಿಕೆ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಕ್ರೈಸ್ತ ಮುಖಂಡರು

ಮಹಾರಾಜರಿಗೆ ಅಂತಿಮ ನಮನ

ಮಹಾರಾಜರಿಗೆ ಅಂತಿಮ ನಮನ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಹಾಗೂ ವೈದಿಕರಿಂದ ವೇದಘೋಷ ಪಠಣ

ಮಹಾರಾಜರಿಗೆ ಅಂತಿಮ ನಮನ

ಮಹಾರಾಜರಿಗೆ ಅಂತಿಮ ನಮನ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ

ಮಹಾರಾಜರಿಗೆ ಅಂತಿಮ ನಮನ

ಮಹಾರಾಜರಿಗೆ ಅಂತಿಮ ನಮನ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರಕ್ಕೆ ವಿವಿಧ ಕ್ಷೇತ್ರಗಳ ಮುಖಂಡರಿಂದ ಅಂತಿಮ ನಮನ

ಮುಸ್ಲಿಮರಿಂದ ನಮನ

ಮುಸ್ಲಿಮರಿಂದ ನಮನ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪಾರ್ಥೀವ ಶರೀರಕ್ಕೆ ಮುಸ್ಲಿಮರಿಂದ ನಮನ

ನಿಧನಕ್ಕೆ ಸಂತಾಪ

ನಿಧನಕ್ಕೆ ಸಂತಾಪ

ಕೇರಳದ ಮಹಾರಾಜ ಮಾರ್ತಾಂಡ ವರ್ಮ ಅವರ ಪುತ್ರಿಯರ ಜತೆ ಸರ್ಕಾರದ ಪ್ರತಿನಿಧಿಗಳ ಮಾತುಕತೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+