Mahakumbh Mela 2025: ಆಗಸದಿಂದ ಮಹಾಕುಂಭ ಮೇಳ ಹೇಗೆ ಕಾಣುತ್ತದೆ

ಲಕ್ನೋ, ಜನವರಿ 22: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಮಹಾಕುಂಭ ಮೇಳ 2025ಕ್ಕೆ ಚಾಲನೆ ಸಿಕ್ಕಿದೆ. ಜನವರಿ 13 ರಿಂದ ಫೆಬ್ರವರಿ 26ರ ತನಕ ನಡೆಯಲಿರುವ ಉತ್ಸವ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಜಗತ್ತಿಗೆ ಪ್ರದರ್ಶಿಸುತ್ತದೆ. ಸುಮಾರು 40 ಲಕ್ಷ ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದು ಜಗತ್ತಿನ ಅತಿ ದೊಡ್ಡ ಆಧ್ಯಾತ್ಮಿಕ, ಸಾಂಸ್ಕೃತಿ ಕಾರ್ಯಕ್ರಮ ಎಂದು ಅಂದಾಜಿಸಲಾಗುತ್ತಿದೆ. ಮಹಾಕುಂಭ ಮೇಳ 2025ರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿವೆ. ಆಗಸದಿಂದ ಈ ಉತ್ಸವ ಹೇಗೆ ಕಾಣುತ್ತದೆ?.

Maha Kumbh Mela 2025 As Seen From Space

ಇಸ್ರೋ ಉಪಗ್ರಹದ ಮೂಲಕ ಮಹಾಕುಂಭ ಮೇಳ-2025ರ ಚಿತ್ರಗಳನ್ನು ಸೆರೆ ಹಿಡಿದು ಕಳಿಸಿದೆ. 2024ರ ಡಿಸೆಂಬರ್ 22ರಂದು ಮತ್ತು ಈಗ ಮಹಾಕುಂಭ ಮೇಳ ಆರಂಭವಾದ ಬಳಿಕ ಜನವರಿ 22ರಂದು ಪ್ರಯಾಗ್‌ರಾಜ್ ಹೇಗೆ ಕಾಣುತ್ತದೆ? ಎಂದು ಚಿತ್ರದಲ್ಲಿ ಇಸ್ರೋ ವಿವರಿಸಿದೆ.

ಮಹಾಕುಂಭ ಮೇಳದ ಚಿತ್ರಗಳು: ಇಸ್ರೋ ಮಹಾಕುಂಭ ಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ) ಆಚರಿಸಲಾಗುತ್ತದೆ. ಇದು ಗುರು ಗ್ರಹದ ಸಂಪೂರ್ಣ ಪರಿಕ್ರಮಣೆಯನ್ನು ನೆನಪಿಸುತ್ತದೆ. ಇದನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವೆಂದು ಗುರುತಿಸಲಾಗಿದೆ. ದೇಶ ವಿದೇಶದಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ ಭಕ್ತರನ್ನು ಆಕರ್ಷಿಸುತ್ತಿದೆ. ಪವಿತ್ರ ಸ್ನಾನಕ್ಕಾಗಿ ನದಿಗಳಲ್ಲಿ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಈ ಚಿತ್ರಗಳನ್ನು ಬ್ಯಾಂಡ್ ಮೈಕ್ರೋವೇವ್ ಉಪಗ್ರಹದ ಮೂಲಕ ಸೆರೆಹಿಡಿಯಲಾಗಿದೆ. ಈ ಚಿತ್ರಗಳನ್ನು ತೆಗೆದ ಕಾಲಮಾನ (15 ಸೆಪ್ಟೆಂಬರ್ 2023 & 29 ಡಿಸೆಂಬರ್ 2024). ಹವಾಮಾನ ಸಾಮರ್ಥ್ಯ ಮತ್ತು ಸೂಕ್ಷ್ಮ ರೆಸಲ್ಯೂಶನ್‌ಗಳನ್ನು ಬಳಕೆ ಮಾಡಿಕೊಂಡು ಮಹಾಕುಂಭ ಮೇಳ 2025ಕ್ಕೆ ನಿರ್ಮಿಸಲಾದ ಟೆಂಟ್ ಸಿಟಿ, ರಸ್ತೆಗಳ ವಿನ್ಯಾಸ, ಪಾಂಟೂನ್ ಸೇತುವೆಗಳ ಜಾಲ ಮತ್ತು ಮೂಲಸೌಕರ್ಯವನ್ನು ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಎಲ್ಲಾ ಚಿತ್ರಗಳಿಗೆ ಶೀರ್ಷಿಕೆ ನೀಡಿರುವ ಇಸ್ರೋ ಮಹಾ ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ನಡೆಯುವ ಭವ್ಯ ಆಧ್ಯಾತ್ಮಿಕ ಉತ್ಸವವಾಗಿದೆ. ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಉತ್ತಮವಾದ ನಗರ ಯೋಜನೆ, ಮೂಲ ಸೌಕರ್ಯ ವ್ಯವಸ್ಥೆ, ಪರಿಸರ ನಿರ್ವಹಣೆಯ ಅಗತ್ಯವಿದೆ. ಉಪಗ್ರಹ ಚಿತ್ರಗಳು ತಯಾರಿಗಳನ್ನು ಮತ್ತು ಅವುಗಳ ಭೂದೃಶ್ಯದ ಮೇಲೆ ಇರುವ ಪರಿಣಾಮವನ್ನು ತಿಳಿಸುತ್ತದೆ ಎಂದು ಹೇಳಿದೆ.

ಮಹಾಕುಂಭ ಮೇಳ 2025 ಜನವರಿ 13ರಂದು ಪುಷ್ಯ ಪೂರ್ಣಿಮಾ (ಹುಣ್ಣಿಮೆ)ಯಂದು ಆರಂಭವಾಗಿದೆ. ಫೆಬ್ರವರಿ 26ರ ಮಹಾಶಿವರಾತ್ರಿ ತನಕ ನಡೆಯುತ್ತದೆ. ಮಕರ ಸಂಕ್ರಮಣ, ಮೌನಿ ಅಮಾವಾಸ್ಯೆ, ಬಸಂತ್ ಪಂಚಮಿ, ಮಾಘ ಪೂರ್ಣಿಮಾ (ಹುಣ್ಣಿಮೆ)ಯಂದು ವಿಶೇಷ ಸ್ನಾನಗಳು ನಡೆಯಲಿವೆ.

ಕುಂಭ ಮೇಳ, ಮಹಾಕುಂಭ ಮೇಳದ ಕುರಿತು ಇತಿಹಾಸದಲ್ಲಿಯೂ ಅನೇಕ ಉಲ್ಲೇಖಗಳಿವೆ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಕುಂಭ ಮೇಳದಲ್ಲಿ ಹೆಚ್ಚೆಚ್ಚು ಸಾಧು ಸಂತರು ಒಟ್ಟಾಗಿ ಪಾಲ್ಗೊಂಡಿದ್ದರು ಎಂದು ಉಲ್ಲೇಖಿಸಿದ ಮಾಹಿತಿ ಇದೆ. ಸಾಧು ಸಂತರ 12 ಅಖಾಡಗಳು ಸಕ್ರಿಯವಾಗಿ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿವೆ. ದೇಶದ ವಿವಿಧ ರಾಜ್ಯಗಳ ಸಾಧು ಸಂತರು ಸಹ ಇದರಲ್ಲಿ ಪಾಲ್ಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+