ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್ -ಉಜ್ಜಯಿನಿ ರೈಲು ಸ್ಪೋಟ ಉಗ್ರರದ್ದೇ ಕೃತ್ಯ

ಭೋಪಾಲ್ -ಉಜ್ಜಿಯಿನಿ ಪ್ಯಾಸೆಂಜರ್ ರೈಲಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಸ್ಪೋಟದಲ್ಲಿ ಉಗ್ರರ ಕೈವಾಡ ಇರುವುದನ್ನು ಪೊಲೀಸರು ಖಚಿತ ಪಡಿಸಿದ್ದಾರೆ.

By Sachhidananda Acharya
|
Google Oneindia Kannada News

ಭೋಪಾಲ್, ಮಾರ್ಚ್ 7: ಭೋಪಾಲ್ -ಉಜ್ಜಿಯಿನಿ ಪ್ಯಾಸೆಂಜರ್ ರೈಲಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಸ್ಪೋಟದಲ್ಲಿ ಉಗ್ರರ ಕೈವಾಡ ಇರುವುದನ್ನು ಪೊಲೀಸರು ಖಚಿತ ಪಡಿಸಿದ್ದಾರೆ.

ಮಧ್ಯಪ್ರದೇಶದ ಶಾಜಾಪುರ್ ನಲ್ಲಿ ಬೆಳಗ್ಗೆ 9.50ಕ್ಕೆ '59320 ಭೋಪಾಲ್-ಉಜ್ಜೈನಿ ಪ್ಯಾಸೆಂಜರ್' ರೈಲು ಸಂಚರಿಸುವಾಗ ಭಾರಿ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿತ್ತು. ಕೊನೆಯಿಂದ ಎರಡನೇ ಬೋಗಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ 8 ಮಂದಿ ಗಾಯಗೊಂಡಿದ್ದರು. ಇಬ್ಬರಿಗೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಭೋಪಾಲ್ -ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಸ್ಫೋಟ]

Madhya Pradesh train blast an act of terror say police

"ರೈಲಿನಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಕಡಿಮೆ ತೀವ್ರತೆಯ ಸುಧಾರಿತ ಸ್ಪೋಟಕ (ಐಇಡಿ) ಗಳನ್ನು ಬಳಸಲಾಗಿದೆ. ಸಾಮಾನ್ಯವಾಗಿ ಉಗ್ರರು ಮಾತ್ರ ಸುಧಾರಿತ ಸ್ಪೋಟಕಗಳನ್ನು ಬಳಸುತ್ತಾರೆ. ಘಟನೆಯಲ್ಲಿ ಮೂವರ ಕೈವಾಡ ಇದೆ," ಎಂದು ಮಧ್ಯ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆ ಐಜಿಪಿ ಮಕ್ರಂದ್ ದೇವಸ್ಕರ್ ಹೇಳಿದ್ದಾರೆ.[ಬ್ರೇಕಿಂಗ್ ನ್ಯೂಸ್: ಉತ್ತರ ಪ್ರದೇಶದಲ್ಲಿ ಉಗ್ರ- ಪೊಲೀಸ್ ಸಂಘರ್ಷ]

ಘಟನೆಗೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಪಿಪರಿಯಾದಲ್ಲಿ ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಸಿಕ್ಕ ಸ್ಪೋಟಕಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

English summary
The Madhya Pradesh police confirmed that the blast on the Bhopal-Ujjain passenger train was an act of terror. It was an IED blast said IG Law and order Makrand Devaskar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X