Madhya Pradesh schools: ಮಧ್ಯಪ್ರದೇಶದ ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಬೋಧಿಸಲಾಗುತ್ತದೆ: ಸಿಎಂ

ಭೋಪಾಲ್, ಜನವರಿ 23: ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಇತರ ಧಾರ್ಮಿಕ ಪುಸ್ತಕಗಳ ಆಯ್ದ ಭಾಗಗಳನ್ನು ಮಧ್ಯಪ್ರದೇಶದ ಶಾಲೆಗಳಲ್ಲಿ ಬೋಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಹೇಳಿದ್ದಾರೆ.

"ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು ಮತ್ತು ಶ್ರೀಮದ್ ಭಗವದ್ಗೀತೆ ನಮ್ಮ ಅಮೂಲ್ಯ ಗ್ರಂಥಗಳು. ಈ ಪುಸ್ತಕಗಳು ಮನುಷ್ಯನನ್ನು ನೈತಿಕವಾಗಿ ಮತ್ತು ಪರಿಪೂರ್ಣನನ್ನಾಗಿ ಮಾಡುವ ಸಾಮರ್ಥ್ಯ ಹೊಂದಿವೆ. ಆದ್ದರಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನಮ್ಮ ಧಾರ್ಮಿಕ ಪುಸ್ತಕಗಳ ಬೋಧನೆಯನ್ನು ಜಾರಿಗೊಳಿಸಲಾಗುವುದು" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

"ಶಾಲೆಗಳಲ್ಲಿ ಈ ಪವಿತ್ರ ಪುಸ್ತಕಗಳ ಆಯ್ದ ಭಾಗಗಳನ್ನು ಕಲಿಸುವ ಮೂಲಕ, ನಾವು ನಮ್ಮ ಮಕ್ಕಳನ್ನು ನೈತಿಕತೆ ಹೊಂದಿರುವ ಮತ್ತು ಪರಿಪೂರ್ಣ ಮನುಷ್ಯರನ್ನಾಗಿ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.

Madhya Pradesh: Ramayana, Mahabharata, Bhagavad Gita to be taught in schools

"ಶಿಕ್ಷಣವು ಮಾನವನನ್ನು ಮನುಷ್ಯನನ್ನಾಗಿ ಮಾಡುವಂಥದ್ದು, ನೈತಿಕ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣ ಎಲ್ಲರಿಗೂ ಅಗತ್ಯ, ಸ್ವಾಮಿ ವಿವೇಕಾನಂದರು ನೈತಿಕ ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ವಿದ್ಯಾಭಾರತಿ ಸಂಸ್ಥೆಯು ಈ ನೈತಿಕ ಶಿಕ್ಷಣವನ್ನು ನೀಡುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

"ಹೇಳಲು ಬೇಸರವಾದರೂ ನಿಜ ಏನೆಂದರೆ, ನಮ್ಮ ದೇಶದಲ್ಲಿ ಕೆಲವರು ನಮ್ಮ ಸಂಸ್ಕೃತಿ, ಸಂಪ್ರದಾಯ, ಜೀವನ ತತ್ವಗಳು, ಮಹಾಪುರುಷರು, ಆಧ್ಯಾತ್ಮಿಕತೆ ಮತ್ತು ಧರ್ಮವನ್ನು ಟೀಕಿಸುವುದನ್ನು ಆನಂದ ಪಡುತ್ತಾರೆ. ಅಂತಹ ಜನರಿಗೆ ಅವುಗಳ ಮಹತ್ವ ತಿಳಿದಿಲ್ಲ, ಅವರು ಈ ಸಂಸ್ಕೃತಿಯನ್ನು ಹಾನಿ ಮಾಡುತ್ತಿದ್ದಾರೆ ಎಂದು ಅವರಿಗೆ ತಿಳಿದಿಲ್ಲ" ಎಂದು ಟೀಕಿಸಿದ್ದಾರೆ.

ಮುಂದುವರಿದು, "ರಾಮನಿಲ್ಲದೆ ಈ ದೇಶವಿಲ್ಲ, ನಮ್ಮೆಲ್ಲರಲ್ಲೂ ರಾಮನಿದ್ದಾನೆ, ಈ ದೇಶದಲ್ಲಿ ಸುಖ ಬಂದಾಗ ರಾಮನ ಹೆಸರನ್ನು ಉಚ್ಚರಿಸಲಾಗುತ್ತದೆ. ಹಾಗೇಯೇ ದುಃಖವಿದ್ದಾಗಲೂ ರಾಮನ ಹೆಸರನ್ನು ಉಚ್ಚರಿಸಲಾಗುತ್ತದೆ. ಇಂತಹ ಮಹಾಪುರುಷರನ್ನು ಅವಮಾನಿಸುವವರಿದ್ದಾರೆ. ಇದೆಲ್ಲವನ್ನೂ ಸಹಿಸುವುದಿಲ್ಲ" ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+