ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಜ್ ಬಿರಿಯಾನಿಯಲ್ಲಿ ಮೂಳೆ: ಸಸ್ಯಾಹಾರಿಗೆ ಮಾಂಸಾಹಾರ ಬಡಿಸಿದ ಆರೋಪ, ಹೋಟೆಲ್ ಮಾಲೀಕನ ಮೇಲೆ ಕೇಸ್

|
Google Oneindia Kannada News

ಭೋಪಾಲ್, ಡಿ. 28: ಸಸ್ಯಾಹಾರಿಗಳಿಗೆ ಮಾಂಸಾಹಾರ ಬಡಿಸಿದ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಇಂದೋರ್‌ನಲ್ಲಿ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನ ವಿಜಯ್ ನಗರದ ಅಲ್ಬಾ ಬರಿಸ್ಟೋ ಹೋಟೆಲ್‌ನಲ್ಲಿ ವೆಜ್ ಬಿರಿಯಾನಿ ಬದಲಿಗೆ ಚಿಕನ್ ಬಿರಿಯಾನಿ ನೀಡಲಾಗಿದೆ. ಗ್ರಾಹಕರ ದೂರಿನ ಮೇರೆಗೆ ಪೊಲೀಸರು ಹೊಟೇಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಐದಲ್ಲ, ಹತ್ತಲ್ಲ, ಸ್ವಿಗ್ಗಿಯಲ್ಲಿ ಬರೋಬ್ಬರಿ 16 ಲಕ್ಷ ರೂಪಾಯಿಯ ದಿನಸಿ ಬುಕ್ ಮಾಡಿದ ವ್ಯಕ್ತಿ!ಐದಲ್ಲ, ಹತ್ತಲ್ಲ, ಸ್ವಿಗ್ಗಿಯಲ್ಲಿ ಬರೋಬ್ಬರಿ 16 ಲಕ್ಷ ರೂಪಾಯಿಯ ದಿನಸಿ ಬುಕ್ ಮಾಡಿದ ವ್ಯಕ್ತಿ!

ಮಾಹಿತಿ ಪ್ರಕಾರ, ಇಂದೋರ್‌ನ ಆಲ್ಬಾ ಬಾರಿಸ್ಟೋ ಹೋಟೆಲ್‌ನಲ್ಲಿ ವೆಜ್ ಬಿರಿಯಾನಿ ತಿನ್ನುವಾಗ ಯುವಕನೊಬ್ಬರಿಗೆ ಚಿಕನ್ ಮೂಳೆ ದೊರೆತಿದೆ. ನಂತರ ಗಲಾಟೆ ನಡೆದಿದೆ. ಅದೇ ಸಮಯದಲ್ಲಿ, ಹೋಟೆಲ್ ಮ್ಯಾನೇಜ್‌ಮೆಂಟ್ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ. ಆದರೆ ಕೋಪಗೊಂಡ ಜನರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.

Madhya Pradesh: Bones In Veg Biryani, Case Against Restaurant Owner

ಬ್ರಾಹ್ಮಣನಾಗಿದ್ದು ಗ್ರಾಹಕ ಆಕಾಶ್ ದುಬೆ ನೀಡಿರುವ ಊರಿನ ಹಿನ್ನೆಲೆ ರೆಸ್ಟೋರೆಂಟ್ ಮ್ಯಾನೇಜರ್, ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಬಾಲ್ಯದಿಂದ ಇಲ್ಲಿಯವರೆಗೆ ಮೊಟ್ಟೆಯನ್ನು ಮುಟ್ಟಿಲ್ಲ. ಹೋಟೆಲ್‌ಗೆ ಬಂದು ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದೆ, ಆದರೆ ಕೊಟ್ಟ ಬಿರಿಯಾನಿಯಲ್ಲಿ ಚಿಕನ್ ಮೂಳೆಗಳು ಪತ್ತೆಯಾಗಿದೆ ಎಂದು ಆಕಾಶ್ ದುಬೆ ಹೇಳಿದ್ದಾರೆ.

ಈ ಬಗ್ಗೆ ರೆಸ್ಟೋರೆಂಟ್ ಮ್ಯಾನೇಜರ್‌ಗೆ ಅಲ್ಲಿಯೇ ದೂರು ನೀಡಲಾಯಿತು, ನಂತರ ರೆಸ್ಟೋರೆಂಟ್ ಸಿಬ್ಬಂದಿ ಕೈ ಮುಗಿದು ಕ್ಷಮೆಯಾಚಿಸಲು ಪ್ರಾರಂಭಿಸಿದ್ದರು, ತಪ್ಪು ಆಗಿದೆ, ಮುಂದೆ ಆಗುವುದಿಲ್ಲ ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಆದರೂ ಆಕಾಶ್ ದುಬೆ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಆಕಾಶ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Madhya Pradesh: Bones In Veg Biryani, Case Against Restaurant Owner

"ವಿಜಯ್ ನಗರ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಸ್ವಪ್ನಿಲ್ ಗುಜರಾತಿ ವಿರುದ್ಧ ಸೆಕ್ಷನ್ 298 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಸ್ತುತ, ಈ ವಿಷಯವನ್ನು ತನಿಖೆ ನಡೆಸಲಾಗುತ್ತಿದೆ, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಉಪ ಪೊಲೀಸ್ ಆಯುಕ್ತ ಸಂಪತ್ ಉಪಾಧ್ಯಾಯ ತಿಳಿಸಿದ್ದಾರೆ.

ಇನ್ನು, ರೆಸ್ಟೊರೆಂಟ್‌ನಲ್ಲಿ ವೆಜ್ ಮತ್ತು ನಾನ್ ವೆಜ್‌ಗೆ ಒಂದೇ ಅಡುಗೆ ಮನೆಯಿದೆ ಎಂದು ಹಲವರು ಆರೋಪಿಸಿದ್ದಾರೆ.

English summary
Bones found in veg biryani in restaurant in Madhya Pradesh's Vijay Nagar area. case against restaurant owner over allegations of serving non-vegetarian food to a vegetarian. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X