ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿವಿಧ ನಗರಗಳಲ್ಲಿ ಪೂರ್ಣ ಚಂದ್ರ ಗ್ರಹಣದ ಸಮಯ ತಿಳಿಯಿರಿ

|
Google Oneindia Kannada News

ಹಿಂದೂ ಸಂಪ್ರದಾಯದಲ್ಲಿ ಗ್ರಹಣ ಧಾರ್ಮಿಕ ಮಹತ್ವವನ್ನು ಪಡೆದಿದೆ. ಈ ವರ್ಷದ ಸಂಪೂರ್ಣ ಚಂದ್ರಗ್ರಹಣವನ್ನು ನವೆಂಬರ್ 8, 2022 ರಂದು ವೀಕ್ಷಿಸಲಾಗುವುದು. ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ.

"ನವೆಂಬರ್ 8, 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದುಹೋಗುತ್ತಾನೆ. ಈ ವೇಳೆ ಚಂದ್ರ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಇದು ಸುಮಾರು 3 ವರ್ಷಗಳ ಕೊನೆಯ ಸಂಪೂರ್ಣ ಚಂದ್ರಗ್ರಹಣವಾಗಿದೆ. ಆದ್ದರಿಂದ ಇದು ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆಯೇ ಎಂಬುದನ್ನು ತಿಳಿಯಿರಿ" ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಟ್ವೀಟ್ ಮಾಡಿದೆ.

ಭಾರತ ಮತ್ತು ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾದ ಕೆಲವು ಭಾಗಗಳಲ್ಲದೆ, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಸಾಗರದ ಇತರ ಭಾಗಗಳ ನಿವಾಸಿಗಳು ಆಕಾಶ ಘಟನೆಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಖಗೋಳ ಭೌತಶಾಸ್ತ್ರಜ್ಞ ದೇಬಿ ಪ್ರಸಾದ್ ದುವಾರಿ ಹೇಳಿದ್ದಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣವು ಭೌಗೋಳಿಕ ವಿದ್ಯಮಾನವಾಗಿದ್ದರೂ, ಜ್ಯೋತಿಷ್ಯದಲ್ಲಿ ಧರ್ಮಗ್ರಂಥಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

 ಪೂರ್ಣ ಚಂದ್ರಗ್ರಹಣದ ಸಮಯ ಹಂತಗಳಲ್ಲಿ ವಿಭಜನೆ

ಪೂರ್ಣ ಚಂದ್ರಗ್ರಹಣದ ಸಮಯ ಹಂತಗಳಲ್ಲಿ ವಿಭಜನೆ

ರಕ್ತ ಚಂದ್ರ ಎಂದೂ ಕರೆಯಲ್ಪಡುವ ಸಂಪೂರ್ಣ ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುತ್ತದೆ. ಈ ವೇಳೆ ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಹೀಗಾಗಿ ಇದನ್ನು 'ಬ್ಲಡ್ ಮೂನ್' ಎಂತಲೂ ಕರೆಯಲಾಗುತ್ತದೆ.

ಸಂಪೂರ್ಣ ಚಂದ್ರಗ್ರಹಣವು ಪೂರ್ವ ಭಾಗಗಳಿಂದ ಮಾತ್ರ ಗೋಚರಿಸುತ್ತದೆ ಆದರೆ ಭಾಗಶಃ ಗ್ರಹಣವು ಭಾರತದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ.

 ಪೂರ್ಣ ಚಂದ್ರಗ್ರಹಣದ ಸಮಯ ಹಂತಗಳಲ್ಲಿ ವಿಭಜನೆ

ಪೂರ್ಣ ಚಂದ್ರಗ್ರಹಣದ ಸಮಯ ಹಂತಗಳಲ್ಲಿ ವಿಭಜನೆ

ಭಾಗಶಃ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 2.39

ಪೂರ್ಣ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 3.46

ಗರಿಷ್ಠ ಪೂರ್ಣ ಚಂದ್ರಗ್ರಹಣ - ಮಧ್ಯಾಹ್ನ 4:29

ಪೂರ್ಣ ಚಂದ್ರಗ್ರಹಣ ಕೊನೆಗೊಳ್ಳುವ ಸಮಯ - ಸಂಜೆ 5:11

ಮೂನ್ಸೆಟ್ - 6.19 ಬೆಳಗ್ಗೆ

 ಭಾರತದ ವಿವಿಧ ನಗರಗಳಲ್ಲಿ ಚಂದ್ರಗ್ರಹಣದ ಸಮಯಗಳು

ಭಾರತದ ವಿವಿಧ ನಗರಗಳಲ್ಲಿ ಚಂದ್ರಗ್ರಹಣದ ಸಮಯಗಳು

ಚಂದ್ರಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಸಲಕರಣೆಗಳ ಅಗತ್ಯವಿಲ್ಲ, ಆದರೂ ದುರ್ಬೀನುಗಳು ಅಥವಾ ದೂರದರ್ಶಕವು ನೋಟ ಮತ್ತು ಕೆಂಪು ಬಣ್ಣವನ್ನು ಹೆಚ್ಚಿಸುತ್ತದೆ.

ಭಾರತದ ವಿವಿಧ ನಗರಗಳಲ್ಲಿ ಚಂದ್ರಗ್ರಹಣದ ಸಮಯಗಳು

ಕೋಲ್ಕತ್ತಾ: ಸಂಜೆ 4:54

ಕೊಹಿಮಾ: ಸಂಜೆ 4:29

ದೆಹಲಿ: ಸಂಜೆ 5:31

ಬೆಂಗಳೂರು: ಸಂಜೆ 5:57

ಮುಂಬೈ: ಸಂಜೆ 6:03

ನಾಗ್ಪುರ: ಸಂಜೆ 5:32

ಶ್ರೀನಗರ: ಸಂಜೆ 5:31

 ಕೊನೆಯ ಚಂದ್ರಗ್ರಹಣ ಎಲ್ಲಿ ಕಾಣಿಸುತ್ತದೆ?

ಕೊನೆಯ ಚಂದ್ರಗ್ರಹಣ ಎಲ್ಲಿ ಕಾಣಿಸುತ್ತದೆ?

2022 ರ ಕೊನೆಯ ಚಂದ್ರಗ್ರಹಣ ಭಾರತದಲ್ಲಿ- ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿಯಲ್ಲಿ ಗೋಚರಿಸುತ್ತದೆ ಮತ್ತು ಜಗತ್ತಿನಲ್ಲಿ - ಉತ್ತರ ಮತ್ತು ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಾಣಿಸುತ್ತದೆ.

English summary
Know the time of last full moon eclipse of the year in different cities of India. Know the time of lunar eclipse visible in Kolkata, Delhi, Bangalore, Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X