Vande Bharat Express: ಈ ಮಾರ್ಗದಲ್ಲಿ ಹೊಸ 'ವಿಬಿ' ರೈಲುಗಳ ಸಂಚಾರ, ವೇಳಾಪಟ್ಟಿ, ನಿಲುಗಡೆ ಮಾಹಿತಿ
ನವದೆಹಲಿ, ಡಿಸೆಂಬರ್ 25: ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಫೆಬ್ರವರಿ 2019 ರಲ್ಲಿ ಪ್ರಾರಂಭವಾದಾಗಿನಿಂದ, ಈ ರೈಲು ಸಾಧ್ಯವಿರುವ ಪ್ರತಿಯೊಂದು ದೊಡ್ಡ ನಗರಕ್ಕೆ ಸಂಪರ್ಕ ಕಲ್ಪಿಸಿದೆ. ಈ ಮೂಲಕ ದೇಶದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆಯು ಹೆಚ್ಚಾಗುತ್ತಿದೆ.
ಇತ್ತೀಚೆಗೆ 06 ಹೊಸ ವಂದೇ ಭಾರತ್ ರೈಲುಗಳನ್ನು ಡಿಸೆಂಬರ್ 30 ರಂದು ಕಾರ್ಯಾಚರಣೆ ಆರಂಭಿಸಲಿವೆ. ಇದೇ ವೇಳೆ ಲಕ್ನೋ ಇನ್ನೂ 02 ವಂದೇ ಭಾರತ್ ರೈಲುಗಳನ್ನು ಪಡೆಯುವ ನಿರೀಕ್ಷೆಯಿದೆ. ಲಕ್ನೋ ಮೂಲಕ ಹಾದುಹೋಗಲಿರುವ ಎರಡು ವಂದೇ ಭಾರತ್ ರೈಲುಗಳ ಮಾರ್ಗ, ನಿಲುಗಡೆ ಇನ್ನಿತರ ಎಲ್ಲ ಮಾಹಿತಿ ಇಲ್ಲಿದೆ.

ಅಯೋಧ್ಯೆ-ಆನಂದ ವಿಹಾರ್ ವಂದೇ ಭಾರತ್ ಎಕ್ಸ್‌ಪ್ರೆಸ್
ಭಾರತೀಯ ರೈಲ್ವೇಯು ಆಧ್ಯಾತ್ಮ ಕೇಂದ್ರ ಅಯೋಧ್ಯೆಗೆ ಭೇಟಿ ನೀಡಲು ಭಕ್ತರು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಕನಸಿನ ಪ್ರವಾಸವನ್ನು ಪ್ರಾರಂಭಿಸಲು ಯೋಜಿಸಿದೆ. ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಯಾತ್ರಾರ್ಥಿಗಳಿಗೆ ಉತ್ತಮ ಪ್ರಯಾಣದ ನೀಡಲಿದೆ.
ಭಕ್ತರಿಗೆ ಪಾಟ್ನಾ, ಅಯೋಧ್ಯೆ ಮತ್ತು ಲಕ್ನೋವನ್ನು ಸಂಪರ್ಕಿಸುತ್ತದೆ. ಹೊಸ ಮಾರ್ಗವು ಜನವರಿ 2024 ರಲ್ಲಿ ರಾಮ ಮಂದಿರ ಉದ್ಘಾಟನೆಯು ಬಹಳ ಹತ್ತಿರದಲ್ಲಿರುವುದರಿಂದ ಅಯೋಧ್ಯೆಯ ಕಡೆಗೆ ನಿರೀಕ್ಷಿತ ಹಿಂದೂ ಭಕ್ತರ ಒಳಹರಿವುಗೆ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ಈ 'ವಿಬಿ' ರೈಲು ಬಿಹಾರದ ಅರ್ರಾ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿಲುಗಡೆ ನೀಡುವ ಸಾಧ್ಯತೆ ಇದೆ.
ದೆಹಲಿ-ದರ್ಭಾಂಗಾ 'ವಿಬಿ' ಮಾರ್ಗ
ಸೀತಾಮರ್ಹಿಯಿಂದ ನವದೆಹಲಿಗೆ ಸಾಗುವ ಚಲಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತನ್ನ ಮಾರ್ಗದಲ್ಲಿ ಲುಕ್ನೋ ಮೂಲಕ ಹಾದು ಹೋಗುವಂತೆ ಮಾಡುವ ಚಿಂತನೆ ಸದ್ಯಕ್ಕಿದೆ. ವಿಬಿ ರೈಲು ಸೀತಾಮರ್ಹಿಯಿಂದ ಬೆಳಗ್ಗೆ 8.30 ಕ್ಕೆ ಹೊರಡುವ ನಿರೀಕ್ಷೆ ಇದೆ. ದೆಹಲಿಯಿಂದ ದರ್ಭಾಂಗಾ, ಸಮಸ್ತಿಪುರ್, ಮುಜಫರ್‌ಪುರ ಮತ್ತು ಪಾಟ್ನಾದಲ್ಲಿ ರೈಲು ನಿಲುಗಡೆಯಾಗಲಿದೆ.

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲಕ್ನೋ ನಿಲುಗಡೆಯು ಇಲ್ಲಿನ ಜನರಿಗೆ ಒಂದು ವರದಾನವಿದ್ದಂತೆ ಎಂದು ಬಣ್ಣಿಸಲಾಗಿದೆ. ಕಾರಣ ಲಕ್ನೋ ಜನರು ನವದೆಹಲಿಯನ್ನು ತಲುಪಲು ಹೆಚ್ಚಿನ ಆಯ್ಕೆ ಹೊಂದಿದ್ದು, ಅದರಲ್ಲಿ ಇದು ಮತ್ತೊಂದಾಗಲಿದೆ. ಈ ರೈಲು ಎರಡು ನಗರಗಳ ನಡುವಿನ ಅಂತರವನ್ನು ಕೇವಲ ಆರು ಗಂಟೆಗಳಲ್ಲಿ ಕ್ರಮಿಸಲಿವೆ. ವಿಬಿ ರೈಲಿನಿಂದ ಹಾಲಿ 22-24 ಗಂಟೆಗಳ ಪ್ರಯಾಣದ ಸಮಯವು ಗಣನೀಯವಾಗಿ ತಗ್ಗಲಿದೆ.
ದೇಶದಲ್ಲಿ 4,500 ವಂದೇ ಭಾರತ್ ರೈಲು ಓಡಲಿವೆ
ರೈಲ್ವೆ ಸಚಿವಾಲಯದ ಪ್ರಕಾರ, ಭಾರತವು ತನ್ನ ರೈಲ್ವೆ ವ್ಯವಸ್ಥೆಯ ಬೃಹತ್ ವಿಸ್ತರಣೆಯ ಗುರಿಯನ್ನು ಹೊಂದಿದೆ. 2047 ರ ಅಂತ್ಯದ ವೇಳೆಗೆ ದೇಶಾದ್ಯಂತ 4,500 ವಂದೇ ಭಾರತ್ ರೈಲುಗಳನ್ನು ಓಡಿಸುವ ಚಿಂತನೆ ಹಾಕಿಕೊಂಡಿದೆ. ಈ ಕುರಿತು ಇತ್ತೀಚೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಘೋಷಿಸಿದ್ದು, 2026-27ರ ವೇಳೆಗೆ ಭಾರತದ ಮೊದಲ ಹೈಸ್ಪೀಡ್ ಬುಲೆಟ್ ರೈಲಿನ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. 2024 ರ ಅಂತ್ಯದ ವೇಳೆಗೆ ನವಿ ಮುಂಬೈನಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ತೆರೆಯುವುದಾಗಿ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications